ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಶೋಭಾ ಮತ್ತೆ `ಗೃಹ ಪ್ರವೇಶ'ವೇ... ಇದೇನು ಎಂಬ ಅಚ್ಚರಿಯೇ...ಆದರೂ ಹೌದು...ಇದು ಕೇವಲ ಗಾಸಿಪ್ ಅಲ್ಲ...ಶೋಭಾ ಕರಂದ್ಲಾಜೆ ಇಡೀ ರಾಜ್ಯದ ಗೃಹಮಂತ್ರಿ ಪಟ್ಟವನ್ನಲಂಕರಿಸಲಿದ್ದಾರೆ. ಇದೆಲ್ಲವೂ ಸದ್ಯವೇ ನಡೆಯಲಿದೆ...ಹೌದು ಈ ಬಿಸಿ ಬಿಸಿ ಸುದ್ದಿ ಇದೀಗ ರಾಜಕೀಯ ವಲಯದಲ್ಲಿ ಬಹುಚರ್ಚಿತವಾಗುತ್ತಿದೆ. ಜೂನ್ ಮೊದಲ ವಾರ ಅಥವಾ ಎರಡನೇ ವಾರದಲ್ಲಿ ಸಂಪುಟ ವಿಸ್ತರಣೆ ಆಗುವ ಸಾಧ್ಯತೆ ಇದೆ. ಆ ಸಂದರ್ಭದಲ್ಲಿ ಶೋಭಾ ಮತ್ತೆ ಸಂಪುಟಕ್ಕೆ ಸೇರ್ಪಡೆಗೊಳ್ಳಲಿದ್ದಾರೆ.ಅಂದಹಾಗೆ ಮುಖ್ಯಮಂತ್ರಿಯವರ `ಆಪ್ತ'ರೆನಿಸಿಕೊಂಡಿದ್ದ ಶೋಭಾ ತಮ್ಮ ಕ್ಷೇತ್ರದಲ್ಲಿ ಮಾತ್ರ ಯಾವುದೇ ಕಳಂಕವಿಲ್ಲದೆ ಕಾರ್ಯನಿರ್ವಹಿಸುತ್ತಾರೆ ಎಂಬುದು ಅಷ್ಟೇ ಮುಖ್ಯ.
ಸಂಪುಟ ವಿಸ್ತರಣೆ ಸದ್ಯಕ್ಕಿಲ್ಲ ಎನ್ನುತ್ತಾರೆ ಮುಖ್ಯಮಂತ್ರಿಗಳು. ಆದರೆ ರಾಜ್ಯಸರಕಾರದ ಸಂಪುಟದಲ್ಲಿ 3ಹುದ್ದೆಗಳು ಖಾಲಿ ಇವೆ.ಇಲ್ಲಿ ಯಡಿಯೂರಪ್ಪ ಅವರ ಆಪ್ತವಲಯದಲ್ಲಿ ಕಾಣಿಸಿಕೊಳ್ಳುವ ಮಂದಿ ಸೇರ್ಪಡೆಯಾಗಲಿದ್ದಾರೆ ಎಂಬ ಅಂಶ ಇದೀಗ ಬಹು ಚರ್ಚಿತವಾಗುತ್ತಿದೆ. ಏತನ್ಮಧ್ಯೆ ಈಗಿರುವ ಗೃಹಮಂತ್ರಿಗಳನ್ನು `ದೆಹಲಿ'ಗೆ ಕಳುಹಿಸಿ ಅಲ್ಲೊಂದು ಪ್ರಮುಖ ಸ್ಥಾನ ನೀಡುವ ಬಗ್ಗೆಯೂ ಯೋಜನೆ ನಡೆಯುತ್ತಿದೆ. ಒಟ್ಟಿನಲ್ಲಿ ಶೋಭಾ ರನ್ನು ಮತ್ತೆ ಕರೆತರುವ ಎಲ್ಲಾ ಕಾರ್ಯಗಳೂ ಮರೆಯಲ್ಲಿ ನಡೆಯುತ್ತಿವೆ ಎಂಬುದು ಸ್ಪಷ್ಟ.

0 comments:

Post a Comment