ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ

ಮಂಗಳೂರು : ಜನತೆ ಚುನಾವಣೆ ನಡೆದು ಖುಷಿಯಿಂದಿದ್ದರೆ ಚುನಾವಣಾ ಅಭ್ಯರ್ಥಿಗಳು ತಮ್ಮ ಅದೃಷ್ಟ ಹೇಗಿರುತ್ತೋ ಎಂಬ ಚಿಂತೆಯಲ್ಲಿದ್ದಾರೆ. ಆದರೆ ಇತ್ತ ಕಡೆ ಜಿಲ್ಲಾಡಳಿತ ಮಾತ್ರ ಯಾವುದೇ ಚಿಂತೆಯಿಲ್ಲದೆ ತನ್ನಷ್ಟಕ್ಕೆ ಇವರೆಲ್ಲರ ಭವಿಷ್ಯ ತಿಳಿಸಲು ಸಜ್ಜಾಗುತ್ತಿದೆ...ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಮೇ 12ರಂದು ನಡೆದ ಗ್ರಾಮ ಪಂಚಾಯತ್ ಚುನಾವಣೆಯ ಮತ ಎಣಿಕೆಗೆ ವ್ಯಾಪಕ ಸಿದ್ಧತೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಪೊನ್ನುರಾಜ್ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಚುನಾವಣಾ ಮತ ಎಣಿಕೆಯಲ್ಲಿ ಯಾವುದೇ ಗೊಂದಲಗಳುಂಟಾಗಬಾರದು, ತೊಂದರೆಗಳಾಗಬಾರದು ಎಂದು ಸಾಕಷ್ಟು ಮುನ್ನೆಚ್ಚರಿಕೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದವರು ಹೇಳಿದ್ದಾರೆ.
ಮೇ 17ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು, ಐದು ತಾಲೂಕುಗಳ ಮತ ಎಣಿಕೆ ಕಾರ್ಯ 600 ಮೇಜುಗಳಲ್ಲಿ ನಡೆಯಲಿದೆ.
*ಮಂಗಳೂರು ತಾಲೂಕಿನ ಸಂತ ರೋಜಾರಿಯೊ ಸಂಯುಕ್ತ ಪದವಿ ಪೂರ್ವ ಕಾಲೇಜು (165 ಮೇಜು).
*ಬಂಟ್ವಾಳ ತಾಲೂಕಿನ ಮೊಡಂಕಾಪುವಿನ ಇನ್ಫೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆ (150 ಮೇಜು).
*ಬೆಳ್ತಂಗಡಿ ತಾಲೂಕಿನ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (97 ಮೇಜು).
*ಪುತ್ತೂರು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು (137 ಮೇಜು).
*ಸುಳ್ಯದ ಕೆವಿಜಿ ಇಂಜಿನಿಯರಿಂಗ್ ಕಾಲೇಜು (51 ಮೇಜು).
ಮತದಾನದ ವಿವರ
*ಮಂಗಳೂರು ತಾಲೂಕಿನ 2,59,627 ಮತದಾರರ ಪೈಕಿ 1,84,547 ಮಂದಿ ಮತದಾನಗೈದಿದ್ದಾರೆ.
*ಬಂಟ್ವಾಳ ತಾಲೂಕಿನ 2,29,206 ಮತದಾರರ ಪೈಕಿ 1,69,538 ಮಂದಿ ಮತದಾನಗೈದಿದ್ದಾರೆ.
*ಬೆಳ್ತಂಗಡಿ ತಾಲೂಕಿನ 1,64,097 ಮತದಾರರ ಪೈಕಿ 1,18,218 ಮಂದಿ ಮತದಾನಗೈದಿದ್ದಾರೆ.
*ಪುತ್ತೂರು ತಾಲೂಕಿನ 1,56,399 ಮತದಾರರ ಪೈಕಿ 11,7974 ಮಂದಿ ಮತದಾನಗೈದಿದ್ದಾರೆ.
*ಸುಳ್ಯದ 83,867 ಮತದಾರರ ಪೈಕಿ 66,325 ಮಂದಿ ಮತದಾನಗೈದಿದ್ದಾರೆ.
ಒಟ್ಟು ಜಿಲ್ಲೆಯ 8,93,196 ಮತದಾರರ ಪೈಕಿ 65,6602 ಮಂದಿ ಮತದಾನಗೈದಿದ್ದು, ಶೇ 73.27 ಮತದಾನವಾಗಿದೆ.
*ಕನಿಷ್ಠ ಶೇ 33.68, ಗರಿಷ್ಠ ಶೇ 95.56 ಮತದಾನ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೊಳ್ನಾಡು ದ.ಕ. ಜಿ.ಪಂ.ಹಿ.ಪ್ರಾ. ಶಾಲೆಯ ಮಂಕುಡೆ ಮತದಾನ ಕೇಂದ್ರದಲ್ಲಿ ಜಿಲ್ಲೆಯಲ್ಲೇ ಗರಿಷ್ಠ (ಶೇ 95.56) ಮತದಾನವಾಗಿದ್ದು, 608 ಮತದಾರರಲ್ಲಿ 581 ಮತದಾರರು ಮತ ಚಲಾಯಿಸಿದ್ದಾರೆ.
ಮಂಗಳೂರು ತಾಲೂಕಿನ ಕೊಣಾಜೆ ಗ್ರಾಮದ ವಿದ್ಯೋದಯ ಅನುದಾನಿತ ಹಿ.ಪ್ರಾ. ಶಾಲೆ ಅಸೈಗೋಳಿಯಲ್ಲಿ ಕನಿಷ್ಠ (ಶೇ 33.68) ಮತದಾನವಾಗಿದ್ದು,864 ಮತದಾರರಲ್ಲಿ ಕೇವಲ 291 ಮಂದಿ ಮಾತ್ರ ಮತದಾನವಾಗಿದೆ.
ಟೆಂಡರ್ಡ್ ಮತಗಳು
ಮಂಗಳೂರು : 292
ಬಂಟ್ವಾಳ : 158
ಬೆಳ್ತಂಗಡಿ : 155
ಪುತ್ತೂರು : 274
ಸುಳ್ಯ : 236
ಅಂಚೆ ಮತಗಳು
ಮಂಗಳೂರು : 14
ಬಂಟ್ವಾಳ : 3
ಬೆಳ್ತಂಗಡಿ : 0
ಪುತ್ತೂರು : 7
ಸುಳ್ಯ : 2

0 comments:

Post a Comment