ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
11:14 AM

ಅಪಘಾತ

Posted by ekanasu

ಪ್ರಾದೇಶಿಕ ಸುದ್ದಿ
ಹೊಸಂಗಡಿ: ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಹೊಸಂಗಡಿ ಪೋಸ್ಟ್ ಆಫೀಸ್ ಸನಿಹ ಬೆಂಗಳೂರಿನಿಂದ ಮುಡಬಿದಿರೆಯತ್ತ ತೆರಳುತ್ತಿದ್ದ ವಿಶಾಲ್ ಬಸ್ ಅಪಘಾತಕ್ಕೊಳಗಾಯಿತು. ವಿದ್ಯುತ್ ತಂತಿ ಬಸ್ ನ ಮೇಲ್ಭಾಗದಲ್ಲಿರಿಸಿದ್ದ ಬೃಹದಾಕಾರದ ಲಗೇಜ್ ಗಳಿಗೆ ಸಿಲುಕಿ ಎಳೆದಂತಾಗಿ ಈ ಅಪಘಾತ ಸಂಭವಿಸಿದೆ. ಇದರಿಂದ ವಿದ್ಯುತ್ ಕಂಬವೊಂದು ತುಂಡಾಗಿ ರಸ್ತೆಗೆ ಬಿದ್ದಿದೆ. ಬಸ್ ನ ಮುಂಭಾಗದ ಕನ್ನಡಿ ಒಡೆದು ಹೋಗಿದೆ. ಹೆಚ್ಚಿನ ಅವಘಡಗಳು ಸಂಭವಿಸಿಲ್ಲ.

0 comments:

Post a Comment