ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ

ಪಡುಬಿದ್ರಿ : ಏಕಾಂಗಿಯಾಗಿ ವಾಸಿಸುತ್ತಿದ್ದ ವ್ಯಕ್ತಿಯೊಬ್ಬರು ತಾನು ಬಾಡಿಗೆ ವಾಸವಿದ್ದ ಕಟ್ಟಡದ ರೂಮಿನಲ್ಲಿ ಶವವಾಗಿ ಸೋಮವಾರ ಸಂಜೆ ಪತ್ತೆಯಾಗಿದ್ದಾರೆ. ಪಡುಬಿದ್ರಿ ಪಾದೆಬೆಟ್ಟು ಹೊಸಮನೆ ನಿವಾಸಿ ಜಯ ಶೆಟ್ಟಿ(70) ಮೃತಪಟ್ಟ ವ್ಯಕ್ತಿ. ಇವರು ಪ್ರತೀ ದಿನ ಪಡುಬಿದ್ರಿ ಪೇಟೆಯ ಅಂಗಡಿಯೊಂದಕ್ಕೆ ದಿನಕ್ಕೆ ಮೂರ್ನಾಲ್ಕು ಬಾರಿಯಾದರೂ ಬಂದು ಹೋಗುತ್ತಿದ್ದರು. ಆದರೆ ಸೋಮವಾರ ಮಾತ್ರ ಒಂದು ಸಲವೂ ಬಾರದೆ ಇದ್ದ ಕಾರಣ ಅನುಮಾನಗೊಂಡ ಇವರ ಆತ್ಮೀಯರು ಸೋಮವಾರ ಸಂಜೆ ಇವರು ತಂಗಿದ್ದ ರೂಮಿಗೆ ಬಂದು ನೋಡಿದಾಗ ಬಾಗಿಲು ಹಾಕಿದ್ದರೂ ಒಳಗಿನಿಂದ ಪ್ರತಿಕ್ರಿಯೆ ಬಂದಿರಲಿಲ್ಲ. ಬಳಿಕ ಕಿಟಕಿ ಮೂಲಕ ನೋಡಿದಾಗ ಮೃತಪಟ್ಟಿರುವುದು ಕಂಡು ಬಂದಿದೆ. ಬಳಿಕ ಈ ವಿಷಯ ಪೊಲೀಸರಿಗೆ ತಿಳಿಸಿ ಬಾಗಿಲು ಒಡೆದು ಒಳ ಪ್ರವೇಶಿಸಲಾಯಿತು.ಇವರು ಪಡುಬಿದ್ರಿಯ ಹೃದಯಭಾಗದಲ್ಲಿರುವ ಸದಾಸುಖ್ ಕಟ್ಟಡದ ಎರಡನೇ ಮಹಡಿಯ ರೂಮಿನಲ್ಲಿ ಏಕಾಂಗಿಯಾಗಿ ವಾಸವಿದ್ದರು. ಹೃದಯದ ಖಾಯಿಲೆಯಿಂದ ಬಳಲುತ್ತಿದ್ದ ಇವರಿಗೆ ಈ ಹಿಂದೆ ಹೃದಯಾಘಾತ ಸಂಭವಿಸಿ ಕೆಲ ದಿನಗಳ ಕಾಲ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಅಲ್ಲಿಂದ ಬಂದವರು ರೂಮಿನಲ್ಲಿ ತಂಗಿದ್ದರು. ಇದೇ ಖಾಯಿಲೆ ಉಲ್ಬಣಗೊಂಡು ಜಯ ಶೆಟ್ಟಿಯವರು ಹಾಸಿಗೆಯಲ್ಲಿ ಮಲಗಿದ್ದವರು ಕುಸಿದು ಬಿದ್ದು ಮೃತಪಟ್ಟಿರಬಹುದೆಂದು ಅನುಮಾನಿಸಲಾಗಿದೆ.

ಅವಿವಾಹಿತರಾಗಿದ್ದ ಇವರು ಮುಂಬೈಯ ಕಂಪೆನಿಯೊಂದರಲ್ಲಿ ದುಡಿದು ಊರಿಗೆ ಮರಳಿದ್ದರು. ಪಡುಬಿದ್ರಿಯ ಹೊಟೇಲ್ ವಿಜಯ ಭವನದಲ್ಲಿ ಕೆಲ ಕಾಲ ಮ್ಯಾನೇಜರ್ ಆಗಿಯೂ ಇವರು ದುಡಿದಿದ್ದರು. ದೇಹದ ಕೆಲ ಭಾಗಗಳಲ್ಲಿ ರಕ್ತಸ್ರಾವವೂ ಆಗಿದ್ದುದು ರಕ್ತ ಹೆಪ್ಪುಗಟ್ಟಿರುವುದು ಕಂಡುಬಂದಿದೆ. ಪಡುಬಿದ್ರಿ ಪೊಲೀಸ್ ಠಾಣಾ ಉಪನಿರೀಕ್ಷಕರಾದ ಜಾಯ್ ಅಂಥೋನಿ ಘಟನಾ ಸ್ಥಳಕ್ಕಾಗಮಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ವರದಿ: ಭಾಗ್ಯವಾನ್ ಸನಿಲ್

0 comments:

Post a Comment