ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಬಹು ಪುರಾತನ ಐತಿಹಾಸಿಕ ಪ್ರಸಿದ್ಧ ಕ್ಷೇತ್ರ ಶ್ರೀ ಕಾಳಹಸ್ತಿ ಶಿವದೇಗುಲದ ರಾಜಗೋಪುರ ಕುಸಿದು ಬಿದ್ದಿದ್ದು ಅನೇಕ ಮಂದಿ ಭಕ್ತರು ಆಘಾತಕ್ಕೊಳಗಾಗಿದ್ದಾರೆ. ಘಟನೆಯ ಜೊತೆ ಜೊತೆಗೆ `ಇದೊಂದು ಅಪಶಕುನ'ಎಂಬ ಅಂಶ ಮನೆಮಾತಾಗುವಂತಾಗಿದೆ. ರಾಜಗೋಪುರ ಕುಸಿತ ಹಲವಾರು ಸಂದೇಹಗಳಿಗೆ ಎಡೆಮಾಡಿದ್ದು ಒಟ್ಟಾರೆಯಾಗಿ ಆತಂಕದ ವಾತಾವರಣ ಸೃಷ್ಠಿಗೆ ಕಾರಣವಾಗಿದೆ.
ದುರಸ್ತಿ ಆಗಿಲ್ಲ
ದೇಗುಲದ ರಾಜಗೋಪುರದಲ್ಲಿ ಮೊದಲೇ ಬಿರುಕಿತ್ತು . ಈ ಬಗ್ಗೆ ಅನೇಕ ಮಾಧ್ಯಮಗಳು ಸಂಬಂಧಪಟ್ಟವರ ಗಮನ ಸೆಳೆದಿತ್ತು. ಆದರೆ ಅದರ ದುರಸ್ತಿಕಾರ್ಯಕ್ಕೆ ಮುಂದಾಗಿರಲಿಲ್ಲ. ಆದರೆ ನಿರಂತರವಾಗಿ ಪ್ರಕೃತಿಯಲ್ಲಿ ಆಗುತ್ತಿರುವ ವೈಪರಿತ್ಯವೂ ಇದಕ್ಕೆ ಒಂದು ಕಾರಣ ಎನ್ನಲಾಗುತ್ತಿದೆ. ಬೆಚ್ಚಿಬೀಳಿಸಿದ ಲೈಲಾ ಚಂಡಮಾರುತದ ಹೊಡೆತವೂ ಒಂದಷ್ಟು ಗೋಪುರಕ್ಕೆ ಹಾನಿಮಾಡಿತ್ತು ಎಂಬ ಮಾತು ಕೇಳಿಬರುತ್ತಿದೆ. ಇಷ್ಟೇ ಅಲ್ಲದೆ ಇಲ್ಲೇ ಸನಿಹದಲ್ಲೇ ಕೊಳವೆ ಬಾವಿ ತೋಡುತ್ತಿರುವುದು ನಿರಂತರವಾಗಿ ಇಂತಹ ಕಾರ್ಯ ನಡೆಯುತ್ತಿರುವುದರಿಂದಲೂ ಈ ಗೋಪುರಕ್ಕೆ ಹಾನಿ ಸಂಭಿವಿಸಲು ಕಾರಣ ಎನ್ನಲಾಗುತ್ತಿದೆ.ಇತಿಹಾಸ
ಈ ಗೋಪುರಕ್ಕೆ ತನ್ನದೇ ಆದ ಐತಿಹ್ಯವಿದೆ. ಕ್ರಿ.ಶ.1516ರಲ್ಲಿ ಗಜಪತಿ ಸಾಮ್ರಾಜ್ಯದ ಮೇಲೆ ವಿಜಯ ಸಾಧಿಸಿದ ಕುರುಹಾಗಿ ಶ್ರೀ ಕೃಷ್ಣದೇವರಾಯ 7 ಅಂತಸ್ತು ಹೊಂದಿದ 136ಅಡಿ ಎತ್ತರದ ರಾಜಗೋಪುರ ನಿರ್ಮಿಸಿದ ಎಂಬುದು ಇದರ ಇತಿಹಾಸ. ಆದರೆ ಇವು ಇಂದು ಧಾರಾಶಾಹಿಯಾಗಿದೆ. ಅನೇಕ ಊಹಾಪೋಹಗಳಿಗೆ ಕಾರಣವಾಗಿದೆ.

0 comments:

Post a Comment