ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಎಸ್ಕ್ಲೂಸಿವ್


ಬೆಂಗಳೂರು: ಕನ್ನಡ ಚಿತ್ರರಂಗದ ಮೇರುನಟ ಸಾಹಸ ಸಿಂಹ ವಿಷ್ಣುವರ್ಧನ್ ಸರಕಾರಕ್ಕೆ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿಗೆ ಬೇಡವಾಗಿ ಹೋದರೆ...ಈ ಪ್ರಶ್ನೆ ಕೇಳಿದರೆ ಕೆಂಡಾಮಂಡಲವಾಗುವುದರಲ್ಲಿ ಸಂದೇಹವಿಲ್ಲ. ಆದರೆ ಸರಕಾರ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿಯ ಧೋರಣೆ ನೋಡಿದರೆ ಇದು ಹೌದು ಎಂಬುದರಲ್ಲಿ ಎರಡು ಮಾತಿಲ್ಲ.




ಶ್ರೇಷ್ಠ ನಟ ಡಾ.ವಿಷ್ಣುವರ್ಧನ್ ಮರೆಯಾಗಿ ನೂರುದಿನಗಳು ಕಳೆದು ಹೋದರೂ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಮುಹೂರ್ತ ಕೂಡಿ ಬಂದಿಲ್ಲ. ಇದಕ್ಕಾಗಿ ಸ್ಥಳ ಖರೀದಿ ಕಾರ್ಯವೂ ಆಗಿಲ್ಲ.

ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆ ನಡೆದ ನಂತರ ಅವರ ಅಭಿಮಾನಿ ವರ್ಗ ನಿತ್ಯವೂ ಆ ಪ್ರದೇಶಕ್ಕೆ ತೆರಳಿ ಅಗಲಿದ ನಾಯಕನಿಗೆ ನಮನ ಸಲ್ಲಿಸುತ್ತಿದ್ದಾರೆ. ಅವರ ಸಮಾಧಿ ಸ್ಥಳದಲ್ಲಿ ಮಳೆಗಾಲದಲ್ಲಿ ಯಾವೊಂದು ತೊಡಕುಗಳಾಗದಿರಲಿ ಎಂದು ಸ್ವತಃ ಭಾರತೀ ವಿಷ್ಣುವರ್ಧನ್ ಮುತುವರ್ಜಿಯಿಂದ ತಾತ್ಕಾಲಿಕ ಮಂಟಪವೊಂದನ್ನು ನಿರ್ಮಿಸಿದ್ದಾರೆ. ಇಷ್ಟೆಲ್ಲಾ ಆದರೂ ಸರಕಾರ ಮಾತ್ರ ಇಲ್ಲೊಂದು ಸ್ಮಾರಕ ನಿರ್ಮಿಸುವತ್ತ ಚಿಂತನೆ ಮುಂದುವರಿಸಿಲ್ಲ. ಚಲನಚಿತ್ರ ವಾಣಿಜ್ಯ ಮಂಡಳಿ ಮೌನ ವಹಿಸಿದೆ.

ವಿಷ್ಣುವರ್ಧನ್ ನಿಧನರಾದ ದಿನ ಘೋಷಣೆಗಳ ಸರಮಾಲೆಯನ್ನೇ ನೀಡಿದ ಸರಕಾರ ಇಂದ್ಯಾಕೆ ಈ ರೀತಿಯ ಮೌನ ತಾಳಿದೆ. ಚುನಾವಣೆಗಳ ಮೇಲೆ ಚುನಾವಣೆಗಳು ನಡೆದವು. ಅವುಗಳ ಫಲಿತಾಂಶ ಘೋಷಣೆಗಳೂ ಆದವು. ಇನ್ನೇನು ಮಳೆಗಾಲವೂ ಆರಂಭವಾಗುವ ಹಂತದಲ್ಲಿದೆ. ಆದರೂ ಅಗಲಿದ ನಾಯಕನ ಸ್ಮಾರಕ ನಿರ್ಮಾಣ ಮಾತ್ರ ಹಾಗೇ ಉಳಿದುಕೊಂಡು ಬಿಟ್ಟಿದೆ. ವಿಷ್ಣು ಆಪ್ತವರ್ಗಕ್ಕೆ, ಕುಟುಂಬಿಕರಿಗೆ, ಅಭಿಮಾನಿಗಳಿಗೆ ಇದರಿಂದ ತೀವ್ರ ಬೇಸರ ಉಂಟಾಗಿದೆ.
ತಕ್ಷಣ ಸಂಬಂಧಪಟ್ಟವರು ಈ ಬಗ್ಗೆ ಚಿಂತಿಸಲಿ. ಅಗಲಿದ ಚೇತನಕ್ಕೆ ಸರಿಯಾದ ಮರ್ಯಾದೆ ದೊರಕಲಿ.

1 comments:

Anonymous said...

good story...

nandan

Post a Comment