ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:44 AM

ಕಾಡುವವನು...

Posted by ekanasu

ಸಾಹಿತ್ಯ
ಹೃದಯ ಮಂದಿರದಲ್ಲಿ
ಸದ್ದಿಲ್ಲದೇ ಪ್ರೀತಿಯ ಬೀಜಬಿತ್ತಿ
ಅದು ಮೊಳಕೆಯೊಡೆದು
ಗಿಡವಾಗಿ ಮರವಾಗುವ ಮುನ್ನವೇ
ನಿಶ್ಯಬ್ದವಾಗಿ ಎದ್ದು ಹೋದವನು..
ನನ್ನ ಮನದಲ್ಲಿ ಕನಸುಗಳ
ಚಿತ್ತಾರವ ಬಿಡಿಸಿ ಮನವ ರಂಗೇರಿಸಿ
ಗೊತ್ತಾಗದಂತೆ ಎದ್ದು ಹೋದವನು..


ನೆನಪುಗಳ ಸುರಿಮಳೆಯನ್ನೇ ನನ್ನೆದೆಯಲ್ಲಿ ಗರೆದು
ಮಿಂಚಿನಂತೆ ನೆನಪಾಗಿ ಮರೆಯಾಗಿಹೋದವನು...
ಸದಾ ಪುಸ್ತಕದೊಳಗೆ ಎನ್ನೋ ಹುಡುಕುವ ನಯನಗಳಿಗೆ
ತನ್ನನ್ನೇ ಹುಡುಕು ಎಂದು ಸದ್ದಿಲ್ಲದೆ ಉಲಿದು ಹೋದವನು..
ಸದಾ ನಗುತ್ತದ್ದ ಕಣ್ಣ್ಗಳಿಗೆ ಜಲಪಾತವಾಗುವ ಗುಟ್ಟು ಹೇಳಿ
ಕಣ್ಣೀರಧಾರೆಯನ್ನು ನನ್ನಲ್ಲಿ ಹರಿಸಿದವನು.
ಚುಟುಕು ಪ್ರಶ್ನೆಗಳಿಗೆ ಧೀರ್ಘ ಭಾಷಣ ಕೊರೆಯುತ್ತಿದ್ದನನ್ನನ್ನು
ಯಾವುದೋ ಪ್ರಶ್ನೆಗೆ ಇನ್ನಾವುದೋ ಉತ್ತರವನ್ನು ಕೊಡುವಂತೆ ಮಾಡಿದವನು.
ಸದಾ ಬೆಳಕಿನಲ್ಲಿ ಅರಳಬಯಸುವ ಹೂವನ್ನು ಕತ್ತಲೆಯಲ್ಲಿ ಬಾಡುವಂತೆ ಮಾಡಿದವನು...
-ಮೌನರಾಗ

0 comments:

Post a Comment