ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ಮಂಗಳೂರು: ಕೊರಗ ಸಮುದಾಯದವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರಬೇಕು. ಅವರನ್ನೂ ಸಶಕ್ತರನ್ನಾಗಿಸಬೇಕೆಂಬ ಸದುದ್ದೇಶವನ್ನು, ಕೊರಗ ಸಮುದಾಯದ ಸಬಲೀಕರಣಕ್ಕೆ ಹೊಸ ಚಿಂತನೆಯನ್ನು ಹಾಕಹೊರಟಿದ್ದಾರೆ ಮೂಡಬಿದಿರೆಯ ಶಿಕ್ಷಣ ಕ್ರಾಂತಿಯ ಹರಿಕಾರ ಮಿಜಾರುಗುತ್ತು ಡಾ.ಎಂ.ಮೋಹನ ಆಳ್ವರು.ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವ್ಯಾಪ್ತಿಗೊಳಪಟ್ಟ ಕೊರಗ ಸಮುದಾಯದ ಹತ್ತನೇ ತರಗತಿ ಮತ್ತು ಪಿ.ಯು.ಸಿ. ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ ಅವರಿಗೆ ಶಿಕ್ಷಣದ ದಿಸೆಗಳ ಕುರಿತು ಯೋಚನೆ ನಡೆಸಲು ಒಂದು ವೇದಿಕೆ ಕಲ್ಪಿಸಿದ್ದಾರೆ.
ಬುಡಕಟ್ಟು ಸಮುದಾಯಗಳ ಶಿಕ್ಷಣ ದಿಸೆಗಳು ಎಂಬ ಎರಡು ದಿನಗಳ ಕಾರ್ಯಾಗಾರ ಮೂಡಬಿದಿರೆಯ ಆಳ್ವಾಸ್ ಸಮಾಜಕಾರ್ಯ ಕಾಲೇಜಿನ ಆಶ್ರಯದಲ್ಲಿ ಮೇ.11 ಮತ್ತು 12ರಂದು ನಡೆಯಲಿದೆ. 11ರಂದು ಬೆಳಗ್ಗೆ 11.30ಕ್ಕೆ ಉದ್ಘಾಟನೆ ನಡೆಯಲಿದೆ. ನಂತರ ಎಸ್.ಎಸ್.ಎಲ್.ಸಿ, ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಕಲಾವಿಭಾಗ, ವಾಣಿಜ್ಯ ವಿಭಾಗ, ವಿಜ್ಞಾನ ವಿಭಾಗಗಳ ಕುರಿತು ಮಾಹಿತಿ ನೀಡಲಾಗುವುದು. ವಿದ್ಯಾರ್ಥಿಗಳ ಗುಂಪುಚರ್ಚೆ ನಡೆಯಲಿದೆ. ಈ ಸಮುದಾಯದ ವಿದ್ಯಾಥರ್ಿಗಳ ಭವಿಷ್ಯದ ಶಿಕ್ಷಣದ ಕುರಿತು ವಿಶ್ಲೇಷಣೆಗಳು ಈ ಸಂದರ್ಭ ನಡೆಯಲಿದೆ.

0 comments:

Post a Comment