ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
6:45 PM

ನಗ್ತಾ ಇರೀ...

Posted by ekanasu

ವೈವಿಧ್ಯ

ನಗು ನಗುತಾ ನಲಿನಲೀ...
ನಗು ಯಾರಿಗೆ ಬೇಡ ಹೇಳಿ? ನಗುವುದು ಮಾನವ ಸಹಜ ಸ್ವಭಾವ. ಹಸನ್ಮುಖ ಮಾನವತ್ವದಿಂದ ದೈವತ್ವದ ಕಡೆ ಸಾಗಲು ಇರುವ ಪ್ರಧಾನ ಮೆಟ್ಟಿಲು. ನೀವು ಮುಖಗಂಟು ಹಾಕಿಕೊಂಡಿದ್ದರೆ ಯಾರೂ ಮಾತನಾಡಿಸಲಾರರು...!ನಾವು ಮಗುವಾಗಿದ್ದಾಗ ನಕ್ಕ ನಗು ಮುಗ್ದತೆಯಿಂದ ಕೂಡಿದ ನಗು. ಬೊಚ್ಚು ಬಾಯಿಯ ಬಿಚ್ಚುನಗು. ಹೂವಿನಂತೆ ಸೌಗಂಧವನ್ನು ಪಸರಿಸುವ ನಗುವದು. ಅಲ್ಲಿ ಕೃತಕತೆಗೆ ಎಡೆಯಿರಲಿಲ್ಲ. ಆ ನಗುವಲ್ಲಿ 'ನಾನು' ಮಾಯವಾಗಿ 'ನಾವು' ತುಂಬಿತುಳುಕುತ್ತಿತ್ತು.

ದಿನಕಳೆದಂತೆ ಮುಗ್ಧತೆಯ ನಗು ಕಾಲ್ಕಿತ್ತು, 'ನಾನು ಯಾರು ಗೊತ್ತಾ?' ಎಂಬ ಒಣ ಜಂಭದ ಮಾತು ನಮ್ಮ ಸುತ್ತಲೂ ಬೇಲಿ ಕಟ್ಟಿ ಅದರೊಳಗೆ ನಾವು ಬಂಧಿಯಾಗಿ ಹೋಗುತ್ತೇವೆ. ನಮ್ಮ ವಿವೇಕ ಆಗ ಕೈ ಬಿಟ್ಟಿರುತ್ತದೆ....! ಚಿತ್ತ ನಮ್ಮ ನಿಯಂತ್ರಣವನ್ನು ಕಳೆದುಕೊಂಡಿರುತ್ತದೆ. ದ್ವೇಷ, ಅಸೂಯೆ, ಮತ್ಸರಾದಿಗಳು ನಮ್ಮೊಳಗೆ ಹೆಡೆಬಿಚ್ಚಿ ನರ್ತಿಸುವ ಪ್ರಕ್ರಿಯೆಯಲ್ಲಿ ನಗು
ನಮ್ಮಿಂದ ಮರೆಯಾಗಿ ಮಾಯವಾಗುತ್ತದೆ. ಆಗ ಜೀವನ ಭಾರವೆನಿಸಿ ಜಿಗುಪ್ಸೆ ಆವರಿಸಿ ಬಿಡುತ್ತದೆ.

ಒಂದು ಮಂದಹಾಸ ನಮಗೆ ಗೆಲುವನ್ನು ತಂದುಕೊಡಬಹುದು. ಉಲ್ಲಾಸ, ಉತ್ಸಾಹಗಳನ್ನು ಸುತ್ತಲ ವಾತಾವರಣಕ್ಕೆ ಕಾಣಿಕೆಯಾಗಿ ನೀಡಬಲ್ಲದು. ಅಲ್ಲದೇ ಮಂದಹಾಸ ನಮ್ಮ ವ್ಯಕ್ತಿತ್ವಕ್ಕೆ ಪ್ರಭೆಯನ್ನು ಕೊಡಬಲ್ಲದು. ನಿಷ್ಕಲ್ಮಶ ಮಂದಹಾಸ ನಮ್ಮ ಮುಖದ ಮೌಲ್ಯವನ್ನು ಸಂವರ್ಧಿಸುತ್ತದೆ. ಹಲವಾರು ಸಮಸ್ಯೆಗಳ ಕಗ್ಗಂಟನ್ನು ಕಡಿಯುವ ದಿವ್ಯೌಷಧಿ ಈ ನಗು. ಕೊಟ್ಟಷ್ಟು ಖಾಲಿಯಾಗುವ ಬದಲು ವೃಧ್ದಿಯಾಗುವ ಅಕ್ಷಯ ನಿಧಿಯಿದು. ನಗುವುದಕ್ಕೆ ಸರ್ಕಾರದಿಂದ ಪರವಾನಿಗಿ ಪಡೆದುಕೊಳ್ಳಬೇಕೆಂದಿಲ್ಲ... ಬಾಡಿಗೆ ಕೊಡಬೇಕಾಗಿಲ್ಲ.....ಕಂದಾಯ ಕಟ್ಟಬೇಕಾಗಿಲ್ಲ.... ನಿಷ್ಕಲ್ಮಶ ನಗುವಿಗೆ ನಿಮ್ಮಲ್ಲಿ ಬರವೇ..? ಹಾಗಾದರೆ ಇನ್ನೇಕೆ ತಡ... ನಗುತ ನಗಿಸುತ ಬಾಳೋಣ...!
-ಮೌನರಾಗ

0 comments:

Post a Comment