ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಇಷ್ಟು ದಿನ ಬಿಸಿಲು ಧಗೆ ಎಂದು ಬೆವರು ಹಿಂಡುತ್ತಿದ್ದವರು ಅಯ್ಯೋ ಯಾಕಪ್ಪಾ ಬಂತು ಇಂಥ ಮಳೆ ಎನ್ನೋ ಸ್ಥಿತಿ...ಹೌದು ಬಂಗಾಳಕೊಲ್ಲಿಯಲ್ಲಿ ಬೀಸಿರುವ ಲೈಲಾ ಚಂಡಮಾರುತ ಇದಕ್ಕೆ ಕಾರಣ. ಕರ್ನಾಟಕ ರಾಜ್ಯದ ಕರಾವಳಿ ತೀರಪ್ರದೇಶಗಳು, ದಕ್ಷಿಣದ ಕೆಲವು ಭಾಗಗಳಲ್ಲಿ ಮಳೆ ಬಿರುಸಿನಿಂದ ಸುರಿದಿದೆ. ಭರ್ಜರಿ ಮಳೆಯೊಂದಿಗೆ ಸಿಡಿಲು, ಗುಡುಗು, ಮಿಂಚು, ಗಾಳಿಯ ಸಾಥ್ ಕಂಡುಬಂದಿವೆ.
ಲೈಲಾ ಚಂಡಮಾರುತದ ಪ್ರಭಾವದಿಂದ ಇದೀಗ ಮಳೆಯಾಗುತ್ತಿದ್ದು ಈ ಒಂದು ಪರಿಸ್ಥಿತಿ ರಾಜ್ಯಾದ್ಯಂತ ಮುಂದಿನ 48ಗಂಟೆಗಳ ಕಾಲ ಮುಂದುವರಿಯುವ ಸಾಧ್ಯತೆಗಳನ್ನು ಹವಾಮಾನ ಇಲಾಖೆ ತಿಳಿಸಿದೆ.
ತಮಿಳ್ನಾಡು ಆಂದ್ರ ಪ್ರದೇಶಗಳಲ್ಲಿ ಗಂಟೆಗೆ 75 ಕಿಲೋಮೀಟರ್ ವೇಗದಲ್ಲಿ ಲೈಲಾ ಬೀಸುತ್ತಿದ್ದು ತೀವ್ರ ಮಳೆಯಾಗಿದೆ. ಈ ಭೀಕರ ಮಳೆಯಿಂದಾಗಿ ಸಹಸ್ರಾರು ಸಂಖ್ಯೆಯಲ್ಲಿ ಈ ಎರಡೂ ರಾಜ್ಯಗಳಲ್ಲಿ ಮುಂಜಾಗರೋಕತೆಗಾಗಿ ಜನತೆಯನ್ನು ಸ್ಥಳಾಂತರಗೊಳಿಸಲಾಗಿದೆ.

ಮೀನುಗಾರರಿಗೆ ಸೂಚನೆ: ಸಮುದ್ರದಲ್ಲಿ ತೂಫಾನ್ ಏಳುವ ಸಾಧ್ಯತೆಗಳೂ ಸೇರಿದಂತೆ ಭೀಕರ ಮಳೆ ಸಂಭವಿಸುವ ಸಾಧ್ಯತೆಗಳಿಂದ ಅಪಾಯ ಹೆಚ್ಚಾಗುವ ನಿಟ್ಟಿನಲ್ಲಿ ಮೀನುಗಾರರು ಜಾಗೃತರಾಗಿರುವಂತೆ ಎಚ್ಚರಿಕೆ ನೀಡಿದೆ. ಮೀನುಗಾರರು ಸದ್ಯದ ದಿನಗಳಲ್ಲಿ ಮೀನುಗಾರಿಕೆಗೆ ತೆರಳಬಾರದೆಂಬ ಮುನ್ಸೂಚನೆ ನೀಡಲಾಗಿದೆ.

0 comments:

Post a Comment