ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಮಂಗಳೂರಿನಲ್ಲಿ ಇದೇ ಮೊದಲ ಬಾರಿ ಸಂಭವಿಸಿದ ಭೀಕರ ವಿಮಾನ ದುರಂತದಲ್ಲಿ 160ರಷ್ಟು ಮಂದಿಮೃತ ಪಟ್ಟ ಬಗ್ಗೆ ಇದೀಗ ಪ್ರಾಥಮಿಕ ವರದಿಯಲ್ಲಿ ತಿಳಿದುಬಂದಿದೆ. ವಿಮಾನದಲ್ಲಿದ್ದ 6ಮಂದಿ ಬದುಕುಳಿದ ಬಗ್ಗೆ ಮಾಹಿತಿಗಳಿವೆ. ಆದರೆ ಅವರೆಲ್ಲರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಒಂದು ವರದಿಯ ಪ್ರಕಾರ 166ಮಂದಿ ಮೃತಪಟ್ಟಿದ್ದಾರೆ. ಆದರೆ ಈ ಬಗ್ಗೆ ಖಚಿತ ದಾಖಲೆಗಳು ಲಭ್ಯವಿಲ್ಲ.
ಮೃತರ ಪೈಕಿ 23 ಮಂದಿ ಮಕ್ಕಳು. ಕೆ.ಎಂ.ಸಿ. ವಿದ್ಯಾರ್ಥಿನಿ ಶೀಲಾ ಇದೀಗ ತೀವ್ರಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಉಮ್ಮರ್, ಹಮೀದ್ ಬದುಕುಳಿದಿದ್ದಾರೆ.
ವಿಮಾನ ಮಂಗಳೂರಿಗೆ ಬಂದು ರನ್ ವೇನಲ್ಲಿ ಟಚ್ ಡೌನ್ ಆದನಂತರ ಪೈಲೆಟ್ ಹಿಡಿತಕ್ಕೊಳಗಾಗದೆ ಮುಂದುವರಿದು ಈ ಅಪಘಾತ ಸಂಭವಿಸಿತು.
ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪ್ರಧಾನಿಗಳು 2ಲಕ್ಷ ಪರಿಹಾರ ಘೋಷಿಸಿದ್ದಾರೆ. ಗಾಯಾಳುಗಳಿಗೆ 50ಸಾವಿರ ಪರಿಹಾರ ಘೋಷಿಸಲಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಥಳಕ್ಕಾಗಮಿಸಿದ್ದಾರೆ. ಕೇಳದ ಮುಖ್ಯಮಂತ್ರಿ ಅಚ್ಚುತಾನಂದನ್ ಕೂಡ ಸ್ಥಳಕ್ಕಾಗಮಿಸಿ ಪರಿಶೀಲನೆ ಕೈಗೊಂಡಿದ್ದಾರೆ. ಮಂಗಳೂರು ನಿವಾಸಿ ಪ್ರದೀಶ್ ಉಮರ್ ಫಾರೂಕ್, ಮೊಯಿದಿನ್ ಕುಟ್ಟಿ, ಕೃಷ್ಣನ್, ಅಬ್ದುಲ್ ಸತ್ತಾರ್, ಡಾ.ಸಬ್ರಿನಾ , ಜೋಯಲ್ ಬದುಕುಳಿದ 7ಮಂದಿ ಅದೃಷ್ಟವಂತರು.
ವಿಮಾನವನ್ನು ರಷ್ಯಾದ ಪೈಲೆಟ್ ನಡೆಸುತ್ತಿದ್ದರು. ಸಹಪೈಲೆಟ್ ಎಸ್.ಎಂ.ಅಹ್ಲುವಾಲ ಮಂಗಳೂರು ಪ್ರದೇಶದವರಾಗಿದ್ದರು.
ದುರಂತ ಪ್ರದೇಶದಲ್ಲಿದ್ದ ಶವಗಳನ್ನು ಹೊರತೆಗೆಯುವ ಕಾರ್ಯ ಭರದಿಂದ ಸಾಗುತ್ತಿದೆ. ಕಳೆದ ಎರಡು ದಿನಗಳಿಂದ ಮಳೆ ಈ ಪ್ರದೇಶದಲ್ಲಿದ್ದ ಕಾರಣ ಕಾರ್ಯಾಚರಣೆಗೂ ಅಡ್ಡಿ ಉಂಟಾಗುತ್ತಿವೆ. ಕಾಡಿನಂತಹ ಪ್ರದೇಶದಲ್ಲಿ ಈ ವಿಮಾನ ಪಥನಗೊಂಡಿದ್ದು ಆ ಪ್ರದೇಶಕ್ಕೆ ರಕ್ಷಣಾ ಪಡೆಗಳು ತೆರಳಲು , ಕಾರ್ಯಾಚರಣೆ ನಡೆಸಲು ಅಡ್ಡಿಯಾಗುತ್ತಿವೆ.
ಮಂಗಳೂರಿನಲ್ಲಿ ವಿಮಾನ ಹಾರಾಟವನ್ನು ತಕ್ಷಣಕ್ಕೆ ರದ್ದುಗೊಳಿಸಲಾಗಿದೆ. ಸೂಕ್ತ ಭದ್ರತಾ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ.

1 comments:

ಪ್ರಕಾಶ್ ಶೆಟ್ಟಿ ಉಳೆಪಾಡಿ said...

ಇನ್ನೂ ನನಗೆ ನಂಬಲು ಆಗುತ್ತಿಲ್ಲ...

ಆ ದಿನ ಮಂಗಳೂರು ವಿಮಾನ ನಿಲ್ದಾಣವನ್ನು ನೋಡಿದಾಗಲೇ ನನಗೆ ಅನ್ನಿಸಿತ್ತು... ವಿಮಾನ ಮಾರ್ಗ ಮಧ್ಯೆ ಜಾರಿದರೆ ಏನಾಗಬಹುದು... ಇಂದು ಅದೇ ಆಗಿದೆ...

ಅಗಲಿದ ಆತ್ಮಗಳಿಗೆ ಚಿರಶಾಂತಿಯನ್ನು ಒದಗಿಸು ಓ ಪರಮಾತ್ಮನೇ....

Post a Comment