ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಮಂಗಳೂರು ವಿ.ವಿ. ಯಲ್ಲೇ ಪ್ರಥಮ ಬಾರಿಗೆ ಹೊಸ ಕೋರ್ಸ್
ಮೂಡಬಿದಿರೆ: ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಗೊಳಪಟ್ಟ ಮೂಡಬಿದಿರೆಯ ಆಳ್ವಾಸ್ ಪದವಿ ಕಾಲೇಜಿನಲ್ಲಿ ದೃಶ್ಯಕಲಾ ಪದವಿ ತರಗತಿ ಈ ಶೈಕ್ಷಣಿಕ ವರ್ಷದಿಂದ ಪ್ರಾರಂಭಗೊಂಡಿದೆ. ಬಿ.ವಿ.ಎ ಎಂಬ ನಾಲ್ಕು ವರ್ಷಗಳ ಅವಧಿಯ ಪದವಿ ತರಗತಿ ಇದಾಗಿದೆ. ಬ್ಯಾಚುಲರ್ ಆಫ್ ವಿಶ್ಹುವಲ್ ಆರ್ಟ್ ಎಂಬ ಈ ಪದವಿ ಪಡೆದವರಿಗೆ ಸಿನೆಮಾ, ಜಾಹೀರಾತು, ಶಿಲ್ಪಕಲೆ, ಲ್ಯಾಂಡ್ ಸ್ಕೇಪಿಂಗ್, ಇಂಟೀರಿಯರ್ ಡಿಸೈನಿಂಗ್, ಅನಿಮೇಷನ್ ಮೊದಲಾದ ಕ್ಷೇತ್ರಗಳಲ್ಲಿ ವಿಫುಲ ಉದ್ಯೋಗಾವಕಾಶಕ್ಕೆ ಅವಕಾಶವಿದೆ.ಮೂರು ಪ್ರಮುಖ ವಿಷಯಗಳಲ್ಲಿ ವಿಶೇಷ ಅಧ್ಯಯನದ ಪದವಿಗೆ ಇಲ್ಲಿ ಅವಕಾಶವಿದೆ. ಚಿತ್ರಕಲೆ, ಶಿಲ್ಪಕಲೆ ಮತ್ತು ಅಪ್ಲೈಡ್ ಆರ್ಟ್ (ಕಮರ್ಷಿಯಲ್ ಆರ್ಟ್ ) ವಿಚಾರಗಳಲ್ಲಿ ವಿದ್ಯಾರ್ಥಿಗಳು ವಿಶೇಷ ಅಧ್ಯಯನದ ತರಬೇತಿಗಳನ್ನು ಪಡೆಯಬಹುದಾಗಿದೆ.
ಆಳ್ವಾಸ್ ಎಜುಕೇಷನ್ ಫೌಂಡೇಷನ್ ರಾಷ್ಟ್ರೀಯ ಮಟ್ಟದಲ್ಲಿ ಕೈಗೊಳ್ಳುತ್ತಿರುವ ಆಳ್ವಾಸ್ ವರ್ಣ ಜಾಗೃತಿ, ಆಳ್ವಾಸ್ ವರ್ಣ ವಿರಾಸತ್, ಆಳ್ವಾಸ್ ಶಿಲ್ಪ ವಿರಾಸತ್ ಸಂದರ್ಭದಲ್ಲಿ ರಾಷ್ಟ್ರೀಯ ಮಟ್ಟದ ಕಲಾವಿದರೊಂದಿಗೆ ದೃಶ್ಯಕಲಾ ಪದವಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಳ್ವಾಸ್ ದೃಶ್ಯಕಲಾ ಪದವಿ ತರಗತಿಗಳಿಗೆ ಪ್ರವೇಶ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಆಸಕ್ತರು ಪ್ರಾಂಶುಪಾಲರು, ಆಳ್ವಾಸ್ ದೃಶ್ಯಕಲಾ ಪದವಿ, ಆಳ್ವಾಸ್ ಕಾಲೇಜು, ವಿದ್ಯಾಗಿರಿ , ಮೂಡಬಿದಿರೆ ಇಲ್ಲಿಗೆ ಸಂಪರ್ಕಿಸಬಹುದಾಗಿದೆ.

0 comments:

Post a Comment