ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ರಾಜ್ಯದಲ್ಲಂತೂ ಬಿಜೆಪಿ ಅತ್ಯಂತ ಪ್ರಭಲ ಎಂಬಂತ ಸ್ಥಿತಿಯನ್ನು ತಲುಪುತ್ತಿರುವುದು ಒಂದೆಡೆಯಾದರೆ ಬಿಜೆಪಿಯ ಈ ಅಭೂತಪೂರ್ವ ಬೆಳವಣಿಗೆ, ನಿರಂತರ ಜಯಭೇರಿಯನ್ನು ಸಹಿಸದ ಪ್ರತಿಪಕ್ಷಗಳು ತಮ್ಮ ತಮ್ಮೊಳಗೆ ಕೈ ಹೊಸಕಿ ಏನಾದರೊಂದು ಕಿತಾಪತಿ ನಡೆಸುತ್ತಿದೆ ಎಂದರೆ ತಪ್ಪಾಗಲಾರದು. ಅದೇನೇ ಇರಲಿ... ಬಿ.ಜೆ.ಪಿಗೆ ಶ್ರೀ ರಕ್ಷೆಯಂತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಇದೀಗ ಮತ್ತೆ ಬಿಜೆಪಿಯನ್ನು ಮತ್ತಷ್ಟು ಪ್ರಭಲಗೊಳಿಸಲು ಸೂಕ್ತ ಕಾರ್ಯತಂತ್ರ ರೂಪಿಸುತ್ತಿದೆ. ಇದರ ಫಲವೇ ಉತ್ತರ ಪ್ರದೇಶದಲ್ಲಿ ಇದೀಗ ಬಿಜೆಪಿಯ ಶಕ್ತಿ ವರ್ಧನೆಗೆ ಚಿಂತನೆ ನಡೆಸಿದ್ದು ಮತ್ತು ಇದಕ್ಕಾಗಿ ಸೂಕ್ತ ಅಭ್ಯರ್ಥಿಯನ್ನು ಹುಡುಕುವ ಕಾರ್ಯತಂತ್ರ ರೂಪಿಸಿದ್ದು ಎಂದರೆ ತಪ್ಪಾಗಲಾರದು.
ಆರ್.ಎಸ್.ಎಸ್.ನ ಪ್ರಮುಖರಾದ ಮೋಹನ್ ಭಾಗವತ್ ಉತ್ತರ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷವನ್ನು ಬಲಪಡಿಸುವುದು ಮತ್ತು ಒಂದು ಪ್ರಭಲ ಪಕ್ಷವಾಗಿ ರೂಪಿಸುವ ದೃಷ್ಠಿಯಿಂದ ಉಮಾಭಾರತಿ ಅವರನ್ನು ಪಕ್ಷಕ್ಕೆ ಮರುಸೇರ್ಪಡೆಗೊಳಿಸುವ ಕುರಿತು ಚಿಂತಿಸಿದ್ದಾರೆ. ಮತ್ತು ಈ ಭಾಗದಲ್ಲಿ ಉಮಾಭಾರತೀ ಅವರೇ ಸೂಕ್ತ ವ್ಯಕ್ತಿ ಎಂಬ ಚಿಂತನೆಗೆ ಮುಂದಾಗಿರುವುದು ಬೆಳಕಿಗೆ ಬಂದಿದೆ.
ಉಮಾಭಾರತಿ ಅವರನ್ನು ಪಕ್ಷಕ್ಕೆ ಮರುಸೇರ್ಪಡೆಗೊಳಿಸುವ ವಿಚಾರದಲ್ಲೂ ಸಾಕಷ್ಟು ಭಿನ್ನಸ್ವರಗಳು ಕೇಳಿಬರುತ್ತಿವೆ.ಆದರೆ ಉಮಾಭಾರತಿ ಅವರು ಮತ್ತೆ ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಮಾತುಗಳು ಬಲಪಡೆದುಕೊಳ್ಳುತ್ತಿದೆ.

0 comments:

Post a Comment