ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:41 PM

ಹಾಟ್ ಅರ್ಥ್...

Posted by ekanasu

ಇದು ಎಚ್ಚರಿಕೆಯ ಕರೆಗಂಟೆ...ಹೌದು...ಉಪ್ಪು ತಿಂದಾತ ನೀರು ಕುಡಿಯಲೇ ಬೇಕೆಂಬಂತೆ... ಕಾರಣ ಇಷ್ಟೇ ಈ ಹಿಂದಿಗಿಂತ ಈ ಬಾರಿ ದಾಖಲೆಯ ಉಷ್ಣಾಂಶ ದಾಖಲಾಗಿದೆ. ಅದು ಜನತೆಯ ನಿದ್ದೆ ಕೆಡಿಸಿದೆ. ಗುಲ್ಬರ್ಗ ಜಿಲ್ಲೆ ಯಲ್ಲಿ 47ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಇದು ಕಳೆದ 119ವರುಷಗಳ ಇತಿಹಾಸವನ್ನು ಕೆದಕಿದರೆ ಮೊತ್ತ ಮೊದಲ ಬಾರಿಗೆ ಈ ಪ್ರಮಾಣದಲ್ಲಿ ಉಷ್ಣಾಂಶ ಏರಿಕೆಯಾಗಿದೆ.

ಜಾಗತಿಕ ತಾಪಮಾನ ಏರಿಕೆ
ಇಂದು ಜಾಗತಿಕ ತಾಪಮಾನ ಏರಿಕೆಯಾಗುತ್ತಿದೆ. ಇದರಿಂದಾಗಿ ಸಮುದ್ರ ಮಟ್ಟದಲ್ಲಿಯೂ ಏರಿಕೆಯಾಗುವ ಸಾಧ್ಯತೆಗಳಿವೆ. ಈ ಏರಿಕೆಯಿಂದಾಗಿ ಉಪ ಉಷ್ಣವಲಯದಲ್ಲಿ ವ್ಯತ್ಯಾಸಗಳು ಕಂಡು ಬರುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ. ಮರಳುಗಾಡು ಪ್ರದೇಶಗಳ ವಿಸ್ತರಣೆ ಒಂದೆಡೆಯಾದರೆ ಆರ್ಕ್ ಟಿಕ್ ವಲಯದಲ್ಲಿನ ಉಷ್ಣಾಂಶದ ಅತೀವ ಹೆಚ್ಚಳಗಳಿಂದಾಗಿ ಶೀತ ಕೆಳ ಭೂಸ್ತರ, ಸಮುದ್ರ , ನೀರ್ಗಲ್ಲುಗಳು ಹಾಗೂ ಹಿಮ ನದಿಗಳ ಹಿಂಜರಿತ ಉಂಟಾಗುವ ಸಾಧ್ಯತೆಗಳಿವೆ. ಇಷ್ಟೇ ಅಲ್ಲದೆ ಹವಾಮಾನ ವೈಪ್ಯರೀತ್ಯಗಳು ನಿಶ್ಚಿತ. ಪ್ರಾಣಿ ಸಂಕುಲಗಳ ಅಳಿವು, ಕೃಷಿ ಉತ್ಪಾದನೆಗಳಲ್ಲಿ ತೀವ್ರ ಬದಲಾವಣೆಗಳು ಗೋಚರಿಸುವುದಾಗಿ ವಿಶ್ಲೇಷಕರು ಅಭಿಪ್ರಾಯಿಸಿದ್ದಾರೆ.

ಕರಾವಳಿಯೂ ಹೀಗೇನೇ
ತಾಪಮಾನ ಏರಿಕೆಯಲ್ಲಿ ಕರಾವಳಿ ಜಿಲ್ಲೆಗಳೂ ಹಿಂದೆಬಿದ್ದಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ತೀವ್ರ ರೀತಿಯ ತಾಪಮಾನ ಕಂಡು ಬರತೊಡಗಿದೆ. ಕಳೆದ ಒಂದೆರಡು ದಿನಗಳಿಂದ ಕೆಲವೆಡೆಗಳಲ್ಲಿ ಭೀಕರ ಮಳೆಬಿದ್ದಿದೆಯಾದರೂ ತಾಪಮಾನದಲ್ಲಿ ತೀವ್ರಗತಿಯ ಏರಿಕೆ ಕಂಡುಬಂದಿದೆ. ಆರೋಗ್ಯ ಸಂಬಂಧೀ ತೊಂದರೆಗಳು ಕಾಣಿಸಿಕೊಳ್ಳತೊಡಗಿವೆ.

1 comments:

Anonymous said...

ಪ್ರಸ್ತುತ BREAKING NEWS , ಮುಂದೆ ತಾಪಮಾನ ಏರಿಕೆ
Routine News

Post a Comment