ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ವಿಶಿಷ್ಟವಾದ ಮುಖವರ್ಣಿಕೆ ,ಆಕರ್ಷಕ ವಸ್ತ್ರಾಲಂಕಾರ ಹಿಮ್ಮೇಳದಲ್ಲಿ ಸುಶ್ರಾವ್ಯವಾದ ಭಾಗವತಿಕೆ,ಚೆಂಡೆ ಮದ್ದಳೆಗಳ ಸದ್ದು, ಇವುಗಳಿಗೆ ತಕ್ಕಂತೆ ಕಲಾವಿದರ ಆಂಗಿಕ ಅಭಿನಯ, ನೃತ್ಯ , ಇದು ನಮ್ಮ ಯಕ್ಷಗಾನ. ಪೌರಾಣಿಕ-ಐತಿಹಾಸಿಕ ಕಥಾ ಪ್ರಸಂಗಗಳನ್ನು ತನ್ನದೇ ರೀತಿಯಲ್ಲಿ ಪ್ರಸ್ತುತ ಪಡಿಸುವ ವಿಶಿಷ್ಟ ಕಲೆ. ಕಲೆ ಮತ್ತು ಮಾಧ್ಯಮ ಕ್ಷೇತ್ರಗಳಲ್ಲಿ ಬದಲಾವಣೆಗಳು ಮತ್ತು ಹೊಸಪ್ರಯೋಗ ಕಂಡುಬರುವುದು ಸಹಜ.ಯಕ್ಷಗಾನದಲ್ಲಿ ಕೂಡ ಕಾಲಕ್ಕೆ ತಕ್ಕಂತೆ ಅನೇಕ ಮಾರ್ಪಟುಗಳು ಕಂಡುಬಂದಿದೆ.ಕಳೆದ ಎರಡು 3 ವರ್ಷಗಳಿಂದ ಯಕ್ಷಗಾನದಲ್ಲಿ ಸಿನಿಮಾದ ಕಥೆ ಮತ್ತು ಹಾಡು ಪ್ರಯೋಗ ಸೇರ್ಪಡೆಗೊಂಡು ಚರ್ಚೆಗೆ ವಿಷಯವಾಗಿತ್ತು.ಯಕ್ಷಗಾನಕ್ಕೆ ಇಂತಹ ಪ್ರಯೋಗ ಬೇಕಿತ್ತೆ? ಎನ್ನುವುದು ಹಲವರಲ್ಲಿ ಕಾಡಿದ ಪ್ರಶ್ನೆ. ಆದರೆ ಇತ್ತೀಚೆಗೆ ಇದಕ್ಕಿಂತ ಹೊರತಾಗಿ ಯಕ್ಷಗಾನದಲ್ಲಿ ವಿನೂತನ ಪ್ರಯೋಗ ನಡೆಯುತ್ತಿದೆ.ಬಹಳಷ್ಟು ಜನರನ್ನು ಆಕರ್ಷಿಸುವ ಮಾಧ್ಯಮವಾದ ಜಾಹೀರಾತುಗಳಲ್ಲಿ ಆಕರ್ಷಕ ಕಲೆಯಾದ ಯಕ್ಷಗಾನವು ವಿಶೇಷವಾದ ಛಾಪನ್ನು ಮೂಡಿಸಿದೆ.ರಾಷ್ಟ್ರೀಕೃತ ಬ್ಯಾಂಕುಗಳ,ಇಂಟರ್ನ್ಯಾಶನಲ್ ಹೋಟೆಲ್ ಗಳ, ಮೊಬೈಲ್ ಕಂಪೆನಿಗಳಗಳು,ಶಿಕ್ಷಣ ಸಂಸ್ಥೆಗಳು ತಮ್ಮ ಜಾಹೀರಾತುಗಳಲ್ಲಿ ಯಕ್ಷಗಾನ ಛಾಯಾಚಿತ್ರಗಳನ್ನು ಮತ್ತು ಸ್ತಬ್ದ ಚಿತ್ರಗಳನ್ನು ಬಳಸುತ್ತಿದ್ದಾರೆ. ದಕ್ಷಿಣಕನ್ನಡದಲ್ಲಿ ನಡೆಯುವ ಧಾರ್ಮಿಕ-ಸಾಂ ಕಾರ್ಯಕ್ರಮಗಳಲ್ಲಿ ಯಕ್ಷಗಾನವು ವಿವಿಧ ರೀತಿಗಳಲ್ಲಿ ಬಳಕೆಗೊಂಡು ರಾರಾಜಿಸುತ್ತಿದೆ. ಗಣ್ಯರಿಗೆ,ಕಲಾವಿದರಿಗೆ,ವಿಜೇತರಿಗೆ ನೀಡುವ ಸ್ಮರಣಿಕೆ,ಬಹುಮಾನಗಳು ಯಕ್ಷಗಾನದ ಕಿರೀಟ ಮಾದರಿಯಲ್ಲಿ ಇರುತ್ತದೆ. ವೇದಿಕೆಗಳ ಅಲಂಕಾರದಲ್ಲೂ ಯಕ್ಷಗಾನದ ಕಂಪುಹರಡಿದೆ.

ಯಕ್ಷಗಾನವೊಂದು ಪ್ರಬಲವಾದ ಕಲೆಯಾಗಿದೆ,ಹಾಗೆಯೇ ಜಾಹೀರಾತು ಕೂಡ ಜನರನ್ನು ಶೀಘ್ರವಾಗಿ ತನ್ನೆಡೆಗೆ ಸೆಳೆಯುವ ಪರಿಣಾಮಕಾರಿ ಮಾಧ್ಯಮ. ಜಾಹೀರಾತುಗಳಲ್ಲಿ ಯಕ್ಷಗಾನವನ್ನು ಅದರ ಮೂಲಸ್ವರೂಪಕ್ಕೆ ದಕ್ಕೆಬಾರದಂತೆ ಬಳಸಿದರೆ ಯಕ್ಷಗಾನ ಮತ್ತಷ್ಟು ಪ್ರಸಿದ್ದಿ ಹೊಂದಬಹುದು.ಜೊತೆಗೆ ರಾಷ್ಟೀಯ-ಅಂತರಾಷ್ಟೀಯ ಕ್ಷೇತ್ರಗಳ-ಜಾಹೀರಾತುಗಳಲ್ಲಿ ಯಕ್ಷಗಾನದ ಬಳಕೆಯಾದರೆ ಅಂತರಾಷ್ಟೀಯ ಮಟ್ಟದಲ್ಲಿ ನಮ್ಮೂರ ಕಲೆ' ಮತ್ತಷ್ಟು ಮಿನುಗಹಬಹುದು.
ಯಶೋಧರ.ವಿ.ಬಂಗೇರ
ಮೂಡುಬಿದಿರೆ

0 comments:

Post a Comment