ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ


ಮುಲ್ಕಿ: ಮಾಜಿ ಶಾಸಕ, ಶಿಕ್ಷಣ ಸಂಸ್ಥೆಗಳ ಸಂಚಾಲಕ, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಮುಲ್ಕಿಯ ಕೆ.ಸೋಮಪ್ಪ ಸುವರ್ಣರಿಗೆ ಸಾರ್ವಜನಿಕವಾಗಿ ಮೇ.15ರಂದು ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಅಭಿನಂದನಾ ಸಮಿತಿಯ ಅಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.ಮುಲ್ಕಿಯ ಪುನರೂರು ಟೂರಿಸ್ಟ್ ಹೋಂ ಸಂಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಸುಂಕದ ಕಟ್ಟೆಯ ಶ್ರೀ ನಿರಂಜನ ಸ್ವಾಮೀಜಿಯವರು ಮುಲ್ಕಿ ಬಪ್ಪನಾಡು ದುರ್ಗಾಪರಮೇಶ್ವರೀ ದೇವಸ್ಥಾನದಿಂದ ಹೊರಡಲಿರುವ ಬೃಹತ್ ಮೆರವಣಿಗೆಯನ್ನು ಉದ್ಘಾಟಿಸುವರು. ಮುಲ್ಕಿಯ ಮುಖ್ಯ ಪೇಟೆಯಲ್ಲಿ ಸೋಮಪ್ಪ ಸುವರ್ಣರ ಅಭಿಮಾನಿ ವೃಂದದರವರ ಸಂಯೋಜನೆಯಲ್ಲಿ ಮೆರವಣಿಗೆ ನಡೆಯಲಿದ್ದು, ಮುಲ್ಕಿ ರುಕ್ಕರಾಮ ಸಾಲ್ಯಾನ್ ಸಭಾಗೃಹದಲ್ಲಿ ನಡೆಯಲಿರುವ ಅಭಿನಂದನಾ ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ.ಪಾಲೇಮಾರ್ ಉದ್ಘಾಟಿಸುವರು. ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ವಿಶೇಷ ಅಭಿನಂದನಾ ಗ್ರಂಥವನ್ನು ನಿಟ್ಟೆ ವಿಶ್ವ ವಿದ್ಯಾನಿಲಯದ ಕುಲಪತಿಗಳು ಮತ್ತು ಮಂಗಳೂರಿನ ಖ್ಯಾತ ವೈದ್ಯರಾದ ಡಾ.ಶಾಂತರಾಮ ಶೆಟ್ಟಿ ಬಿಡುಗಡೆಗೊಳಿಸಲಿದ್ದಾರೆ. ಕೇರಳದ ಶಿವಗಿರಿ ಮಠದ ಸತ್ಯಾನಂದ ಸ್ವಾಮೀಜಿ ಮತ್ತು ಕಟೀಲು ದೇವಳದ ಲಕ್ಷ್ಮೀನಾರಾಯಣ ಆಸ್ರಣ್ಣ ಆಶೀರ್ವಚನ ನೀಡುವರು.

ಸೋಮಪ್ಪ ಸುವರ್ಣರ ಅಭಿನಂದನಾ ಭಾಷಣವನ್ನು ಮಂಗಳೂರು ವೃತ್ತಿಪರ ಶಿಕ್ಷಣ ಸಂಸ್ಥೆಯ ನಿರ್ದೇಶಕ ಪ್ರೊ.ಸ್ಯಾಮ್ ಮಾಬೆನ್ ನಡೆಸಲಿದ್ದಾರೆ. ಕರ್ನಾಟಕ ವಿಧಾನ ಸಭಾ ವಿಪಕ್ಷದ ಮುಖ್ಯ ಸಚೇತಕ ಅಭಯಚಂದ್ರ, ಮಂಗಳೂರಿನ ತುಂಬೆ ಸಮೂಹ ಸಂಸ್ಥೆಯ ಮುಖ್ಯಸ್ಥ ಅಹಮ್ಮದ್ ಹಾಜಿ ಮೊಯ್ದಿನ್, ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಜಯ ಸುವರ್ಣ ಉಪಸ್ಥಿತರಿರುವರು. ಈ ಸಂದರ್ಭ ಸಮಿತಿಯ ಎಂ.ಬಿ.ನೂರ್ ಮಹಮ್ಮದ್, ಹರಿಶ್ಚಂದ್ರ ಸಾಲಿಯಾನ್, ಬಿ.ಎಂ.ಆಸಿಫ್, ಬಾಲಚಂದ್ರ ಸನಿಲ್, ಧನಂಜಯ ಕೋಟ್ಯಾನ್ ಉಪಸ್ಥಿತರಿದ್ದರು.

ಚಿತ್ರ - ವರದಿ: ಭಾಗ್ಯವಾನ್ ಸನಿಲ್.

0 comments:

Post a Comment