ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ
ಕಸಬ್ಗೆ ಶಿಕ್ಷೆ ಆಗಬೇಕಾದ್ದೇ. ಆದರೆ ಆತ ನಿಮಿತ್ತ ಮಾತ್ರ.
ಎಲ್ಲರಿಗೂ ಗೊತ್ತು, ಇದರಲ್ಲಿ ಪಾಕಿಸ್ಥಾನದ್ದು ಮುಖ್ಯಪಾತ್ರ.
ನಿಕ್ಕಂ ಅಂದಂತೆ ಪಾಕ್ ಕಾರ್ಖಾನೆ ಪ್ರಾಡಕ್ಟು ಈ ಕೊಲ್ಲುವ ಯಂತ್ರ.
ಯಂತ್ರ ಅಳಿದರೂ ಕಾರ್ಖಾನೆ ಉಳಿದರೆ ಪ್ರೊಡಕ್ಷನ್ ಸತತ, ಮಿತ್ರಾ!


ಕಸಬ್ಗೆ ಶಿಕ್ಷೆ ಆಯಿತು, ಆದರೆ ಉಳಿದಿಬ್ಬರನ್ನು ಬಿಟ್ಟದ್ದೇಕೆ?
ಹಸ್ತಾಕ್ಷರ, ಕಸಬ್ ನುಡಿ, ಇವಕ್ಕಿಂತ ಆಧಾರ ಬೇಕೇ?
ಆಧಾರದ ಕೊರತೆಯಲ್ಲಿ ಪುಢಾರಿ 'ಕೈ'ವಾಡ ಇರಬಾರದ್ಯಾಕೆ?
ಪಾತಕಿಗಳ 'ಕೈ'ಹಿಡಿದರೆ ಪಾಕಿನ ಸಂಚು ಹೆಚ್ಚೀತು, ಜೋಕೆ!

ನಮಗೆ ಬೇಕಾಗಿರುವುದು ಶಾಂತಿ-ಸೌಹಾರ್ದದ ಜೀವನ,
ಆಕ್ರಮಿತ ಕಾಶ್ಮೀರದಿಂದ ಪಾಕಿಸ್ಥಾನದ ನಿರ್ಗಮನ.
ಆದರೆ, ಪಾಕ್ ಎಂದಾದರೂ ಸರಿದಾರಿಗೆ ಬಂದೀತೇ?
ಆದ್ದರಿಂದ ಆ ದೇಶವನ್ನು ಸುಮ್ಮನೆ ಬಿಡಲಾದೀತೇ?


ಎಚ್. ಆನಂದರಾಮ ಶಾಸ್ತ್ರೀ

0 comments:

Post a Comment