ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಬೆಂಗಳೂರು :ದ.ಕ.ಜಿಲ್ಲೆಗೆ ಎಸ್.ಎಸ್.ಎಲ್.ಸಿ.ಯಲ್ಲಿ ಪ್ರಥಮ ಸ್ಥಾನದ ಭಾಗ್ಯ ಒಲಿಯಲಿಲ್ಲ. ಬಾರಿ ಪ್ರಥಮ ಸ್ಥಾನದ ಹೆಗ್ಗಳಿಕೆ ಚಿಕ್ಕೋಡಿ ಗೆ ಸಂದಿದ್ದು, ದ.ಕ. ನಿರಾಶೆತಾಳಿದೆ. ಎಸ್ಎಸ್ಎಲ್ ಸಿ 2010ರ ಪರೀಕ್ಷೆ ಫಲಿತಾಂಶವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಬುಧವಾರ ಪ್ರಕಟಿಸಿದ್ದು ಒಟ್ಟು ಶೇ. 68.77 ಫಲಿತಾಂಶ ದಾಖಲಾಗಿದೆ ಎಂದಿದ್ದಾರೆ. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಮೊದಲ ಬಾರಿಗೆ ಚಿಕ್ಕೋಡಿ(ಶೇ.79.92) ಜಿಲ್ಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿದ್ದರೆ, ಬೀದರ್ ಕೊನೆಯ ಸ್ಥಾನದಲ್ಲಿ ಸ್ಥಾನ ಭದ್ರಪಡಿಸಿದೆ.ಬೆಂಗಳೂರು ಗ್ರಾಮಾಂತರ (ಶೇ. 79.21) ಎರಡನೇ ಸ್ಥಾನ ಹಾಗೂ ಮಂಡ್ಯ(ಶೇ.79.12) ಮೂರನೇ ಸ್ಥಾನ ಗಳಿಸಿವೆ . ಈ ವರ್ಷ ಶೇಕಡಾವಾರು ಫಲಿತಾಂಶ ಕಡಿಮೆ ಆಗಿರುತ್ತದೆ. ಗುರವಾರ ಮಧ್ಯಾಹ್ನ 2 ಗಂಟೆಗೆ ಆಯಾ ಶಾಲೆಗಳಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶ ಲಭ್ಯವಾಗಲಿದೆ. ಕರ್ನಾಟಕ ಪಿಯುಸಿ ಫಲಿತಾಂಶ ಕೂಡ ಮೇ 6ರಂದೇ ಪ್ರಕಟವಾಗಲಿದ್ದು, ಸಂಜೆ 6ರ ನಂತರ ಅಂತರ್ಜಾಲ ತಾಣಗಳಲ್ಲಿ ಲಭ್ಯವಾಗಲಿದೆ.

0 comments:

Post a Comment