ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ
`` ಈ ಕಲಿ ಕಾಲದಲ್ಲೂ ದೈವೀ ದರ್ಶನ... ಏನಚ್ಚರಿ... ನಂಬೋದಾದ್ರೂ ಹೇಗೆ...ಅನ್ನೋ ಮಾತು ನಿಮ್ಮಲ್ಲಿ ಉಂಟಾಯಿತೇ...? ಇಲ್ಲಿ ದೇವಿ ಮಾತನ್ನಾಡುತ್ತಾಳೆ... ಭಕ್ತರಿಗೆ ಅಕ್ಷರ ರೂಪದಲ್ಲಿ ಅಭಯ ನೀಡುತ್ತಾಳೆ... ಹಸ್ತ ರೂಪದಲ್ಲಿ ಅಭಯ ಹಸ್ತ ಚಾಚುತ್ತಾಳೆ...ಪುಟ್ಟ ಮಗುವಿನ ರೂಪದಲ್ಲಿ ಗೋಚರಿಸುತ್ತಾಳೆ... ಹುಲಿವಾಹನವೇರಿ ಬಂದಂತಹ ಅನುಭವ ನೀಡುತ್ತಾಳೆ... ಸ್ವಪ್ನದಲ್ಲಿ ಗೋಚರಿಸಿ ಅಭಯ ನೀಡುತ್ತಾಳೆ... ಹಾಗಾದರೆ ಇದೇನಾಶ್ಚರ್ಯ ಅಂತ ನಿಮಗನ್ನಿಸುತ್ತಿದೆಯಾ...? ಬನ್ನಿ ಈ ವಿಶಿಷ್ಠ ಅನುಭವ ಪಡೆಯೋಣ... ಇದು ಈ ಕನಸು ತಂಡದ ಈ ವಾರದ ಅಚ್ಚರಿ...ವಿಶೇಷ ವರದಿ...





ಈ ಕನಸು ತಂಡ ಈ ವಿಶೇಷ ಅನುಭವದ ಸ್ಥಳಕ್ಕೆ ಪ್ರಯಾಣ ಬೆಳೆಸಿತು...ಅಲ್ಲಿ ನಮಗೆ ಕಂಡದ್ದೇ ಬೇರೆ... ಅದೊಂದು ದೊಡ್ಡ ಕಲ್ಲು...ಬೃಹದಾಕಾರದ ಬಂಡೆ... ಆ ಬಂಡೆಯೇ ಈ ಎಲ್ಲಾ ವಿಶೇಷಗಳಿಗೆ ವಿಶಿಷ್ಠ ಅನುಭವಗಳಿಗೆ ಪ್ರೇರಣೆ ತಾಣ... ಹೌದು...ಅಲ್ಲಿ ನೀರವ ಮೌನ... ಶ್ರದ್ಧಾ ಭಕ್ತಿಯ ಮಂದಿಗೆ ಅದೊಂದು ಧ್ಯಾನಮಂದಿರ...ನಿಸರ್ಗವೇ ಅಲ್ಲಿ ಸೂರಾಗಿ ಪರಿಣಮಿಸಿದೆ. ಜನತೆ ತಮ್ಮ ಮನದ ಬೇನೆಗಳನ್ನು, ಕಷ್ಟ ಕಾರ್ಪಣ್ಯಗಳನ್ನು ಕಳೆಯಲು ಅಲ್ಲಿಗೆ ಬರುತ್ತಾರೆ... ಅದೇ ಪ್ರದೇಶದಲ್ಲಿ ಕುಳಿತು ಧ್ಯಾನಾಸಕ್ತರಾಗುತ್ತಾರೆ...ಅದಾಗ ನೋಡಿ ಅವರ ಭಕ್ತಿ ಶ್ರದ್ಧೆಗೆ ಅಲ್ಲಿ ದೇವರು ಭಿನ್ನ ವಿಭಿನ್ನ ರೂಪದಲ್ಲಿ ಗೋಚರಿಸುತ್ತಾಳೆ... ಅಭಯ ನೀಡುತ್ತಾಳೆ..




ನಮ್ಮ ತಂಡವೂ ಅಷ್ಟೇ... ಆ ಅಚ್ಚರಿಯ ಪ್ರದೇಶವನ್ನೊಮ್ಮೆ ಕಣ್ಣಾರೆ ನೋಡಬೇಕು... ಅಲ್ಲಿನ ಭಾವನೆಗಳನ್ನು ಅನುಭವಿಸಬೇಕು... ಎಂಬ ಸಂಕಲ್ಪತೊಟ್ಟು ಆ ಪ್ರದೇಶದತ್ತ ಹೆಜ್ಜೆ ಹಾಕಿತು...ನೋಡಿದರೆ ಅದೆಲ್ಲವೂ ಹೌದು ಎಂಬಂತೆ ಭಾಸವಾಯಿತು... ಕಾರಣ ಅಲ್ಲಿದ್ದ ಕಲ್ಲು ಬಂಡೆ ಸಂಕೇತಗಳ ರೂಪದಲ್ಲಿಯೇ ಅಲ್ಲಿನ ಮಹಿಮೆಗಳನ್ನು ಸಾರಿ ಹೇಳುತ್ತಿತ್ತು. ಇಡೀ ಬೃಹದಾಕಾರದ ಬಂಡೆಯ ತುಂಬೆಲ್ಲಾ ಬೇರೆ ಬೇರೆ ನೈಜ ಕೆತ್ತನೆಗಳಂತೆ ತೋರಿ ಬರುವ ರೂಪಗಳು ಭಾಸವಾಯಿತು... ಅಲ್ಲೆಲ್ಲಾ ನೂರಾರು ಔಷಧೀಯ ವೃಕ್ಷಗಳು, ಬಳ್ಳಿಗಳು...ಇಡೀ ಬಂಡೆಯನ್ನಾವರಿಸಿತ್ತು. ಬಂಡೆಯ ಸುತ್ತಲೂ ಅಡಿಕೆ ಮರದ ಸಿಂಗಾರದ ರೀತಿಯಲ್ಲಿ ನೈಜವಾದ ನಿಸರ್ಗದತ್ತವಾದ ಕೆತ್ತನೆಗಳು ಕಂಡು ಬರುತ್ತವೆ. ಅಷ್ಟೇ ಅಲ್ಲ ಬೃಹದಾಕಾರದ ಬಂಡೆಯ ಸುತ್ತಲೂ ಸರ್ಪದ ವಿವಿಧ ಆಕಾರಗಳು, ಹೆಡೆಗಳು ಗೋಚರಿಸುತ್ತಿವೆ. ಋಷಿಯೋರ್ವ ತಪಗೈಯುತ್ತಿದ್ದಂತಹ ರೂಪ ಸ್ಪಷ್ಟವಾಗಿ ಗೋಚರಿಸುತ್ತಿದೆ... ವಿವಿಧ ಪ್ರಾಣಿ ಪಕ್ಷಿಗಳ ರೂಪಗಳೂ, ಗಣಪತಿಯ ಮುಖದ ಭಾಗವೂ ಅಲ್ಲಲ್ಲಿ ಎದ್ದು ಕಾಣುತ್ತದೆ... ಇದೆಲ್ಲವೂ ನೋಡಿ ಅಚ್ಚರಿ ಆ ಪ್ರದೇಶದ ಕಾರಣೀಕ ಮಹಿಮೆಗಳಿ ಸಾಕ್ಷಿ...





ಅದು ಸುಮಾರು 50 ವರುಷಗಳ ಹಿಂದಿನ ಕಥೆ... ಎಸ್.ವಾಸುದೇವ ಶೆಟ್ಟಿಗಾರ್ ಎಂಬವರಿಗೆ ಒಂದು ಪ್ರಭಾವ ಆದಂತಾಯಿತು... ಅದೇನೋ ಗೊತ್ತಿಲ್ಲ ಅವರ ಜೀವನದುದ್ದಕ್ಕೂ ಅಂತಹುದೇ ಅನೇಕಾನೇಕ ಪ್ರಭಾವಗಳು ದೈವೀ ಶಕ್ತಿಗಳು ಆಗಾಗ ಗೋಚರಿಸಿ ಒಂದು ಪ್ರೇರಣೆ ನೀಡುತ್ತಿದೆ. ಅದು ಇಂದಿಗೂ ಮುಂದುವರಿದಿದೆ ಎಂಬುದು ಅವರ ಮಾತು. ಆ ಪ್ರಕಾರ ಅವರು ಆ ಪ್ರದೇಶದಲ್ಲೇನೋ ಒಂದು ಶಕ್ತಿ ಅಡಗಿದೆ ಎಂಬುದನ್ನು ಗ್ರಹಿಸಿದರು. ಬಲ್ಲವರಲ್ಲಿ ಅದರ ಬಗ್ಗೆ ವಿಚಾರಿಸಿದರು. ಕೊನೆಗೂ ಕಂಡು ಬಂದಿದ್ದು ಅದೇ ನೋಡಿ ಅಚ್ಚರಿ...





ಅದು ಶ್ರೀ ಆದಿ ಬನಶಂಕರಿಯ ಶಕ್ತಿ ಪ್ರದೇಶ ಎಂಬುದು ಸ್ಪಷ್ಟವಾಯಿತು...ಅಲ್ಲಿಂದಲೇ ನೋಡಿ ಅನೇಕಾನೇಕ ಪವಾಡರೀತಿಯ ದೈವೀ ಕಾರಣೀಕಗಳು ಆ ಕ್ಷೇತ್ರದಲ್ಲಿ ನಿರಂತರ ನಡೆಯುತ್ತಾ ಹೋಯಿತು... ಮನಸಾರೆ ನಂಬಿದ ಭಕ್ತರಿಗೆ ಆ ಮಾತೆ ಅಭಯ ನೀಡತೊಡಗಿದಳು... ತನ್ನ ಭಕ್ತರನ್ನು ಹರಸಿ ಅವರವರ ಕಷ್ಟ ನಿವಾರಣೆಗೆ ಕಾರಣವಾಯಿತು.

ಮನಸಾರೆ ದೇವರ ನೆನೆದು ಅಲ್ಲಿ ನಂಬಿಕೊಂಡದ್ದು ಸತ್ಯವಾಗುತ್ತದೆ. ಅದಕ್ಕೆ ಸಾಕ್ಷಿ ಕ್ಷೇತ್ರದ ಅರ್ಚಕರು ಎಸೆಯುವ ಹಿಂಗಾರದ ಎಳೆಗಳೇ ಸಾಕ್ಷಿಯಾಗುತ್ತವೆ. ಕ್ಷೇತ್ರದಲ್ಲಿ ಪೂಜಾ ಸಮಯದಲ್ಲಿ ದೇವರ ಶಿರದಿಂದ ಹಿಂಗಾರ ಬೀಳುವುದು ಚಿಲ್ಲರೆ ಅಭಿಷೇಕದ ಸಂದರ್ಭದಲ್ಲಿ ಅದು ಉದುರುವುದು ನಮ್ಮ ಮನದ ಕಾರ್ಯಗಳು ಸಾಂಗವಾಗಿ ನೆರವೇರುವುದನ್ನು ಸಂಕೇತಿಸುತ್ತದೆ.
ಅಂಗ ವೈಕಲ್ಯತೆಯನ್ನೂ ದೂರಮಾಡಿ, ಸುಖೀ ಸಂಸಾರಕ್ಕೆ ಈ ಕ್ಷೇತ್ರದ ಕಾರಣೀಕಗಳು ಸಾಕ್ಷಿಯಾಗಿವೆ. ಕಿಡ್ನಿ ವೈಫಲ್ಯದಿಂದ ತೊಂದರೆಗೊಳಗಾದ ಮಂದಿ ಈ ಕ್ಷೇತ್ರಕ್ಕಾಗಮಿಸಿ ಸೇವೆ ಸಲ್ಲಿಸಿ ಪ್ರಾರ್ಥಿಸಿ ದಾಗ ಕಾಯಿಲೆ ನಿವಾರಣೆಯಾದ ಸಾಕ್ಷಿಗಳು ಇಲ್ಲಿವೆ. ತೊನ್ನು ರೋಗಕ್ಕೆ ಈ ಕ್ಷೇತ್ರದ ಮೃತ್ತಿಗೆ ದಿವ್ಯೌಷಧಿ... ಭಯ, ದುಷ್ಟ ಶಕ್ತಿಗಳ ನಿಗ್ರಹ ಹೀಗೆ ಅನೇಕಾನೇಕ ತೊಂದರೆಗಳನ್ನು ಈ ಮಾತೆ ದೂರಮಾಡಿದ್ದಾಳೆ...




ಇಲ್ಲಿ ಭಕ್ತರಿಗೆ ಹರಕೆ ಹೊರುವುದು ಬೇಡ...ದೇವಿಗೆ ಹಣ, ದೊಡ್ಡ ದೊಡ್ಡ ಸೇವೆಗಳು ಬೇಡ...ಚಿನ್ನ ಬೆಳ್ಳಿಗಳ ಹರಕೆಗಳು ಬೇಡ...ಕೇವಲ ನಿಮ್ಮ ಭಕ್ತಿ ಶ್ರದ್ಧೆಗಳಷ್ಟೇ ಇರಲಿ ಎಂಬುದು ಈ ಕ್ಷೇತ್ರದ ಅರ್ಚಕರ ಮನದಾಳದ ಮಾತುಗಳು. ದೇಗುಲವು ಹಣಮಾಡುವ ವಾಣಿಜ್ಯ ಕೇಂದ್ರಗಳಾಗಬಾರದು. ಕೇವಲ ಭಕ್ತಿ, ಮನಕ್ಕೆ ಒಂದು ನೆಮ್ಮದಿ ಒದಗಿಸುವ ನೆಮ್ಮದಿ ಕೇಂದ್ರಗಳಾಗಿರಬೇಕೆಂಬುದು ಅವರ ಮನದಾಳದ ಮಾತುಗಳು. ಅದು ಹೌದು ಕೂಡಾ...




ಇಲ್ಲಿ ಮಾತೆಯ ವಿಗ್ರಹವಿಲ್ಲ. ಕೇವಲ ಪಾದರೂಪಕ್ಕಷ್ಟೇ ಇಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ಕರ್ಪೂರದಾರತಿ, ದೇವರಿಗೆ ದೀಪ ಹಚ್ಚುವುದೇ ಇಲ್ಲಿ ವಿಶೇಷ ಪೂಜೆ. ನಿತ್ಯ ಮಾತೆಗೆ ಇಲ್ಲಿ ಪೂಜೆ ಸಲ್ಲುತ್ತದೆ. ಭಕ್ತರು ಅಧಿಕ ಸಂಖ್ಯೆಯಲ್ಲಿ ಇಲ್ಲಿಗಾಗಮಿಸಿ ನಿರಂತರ ಸೇವೆ ಭಜನೆ ಸಲ್ಲಿಸುತ್ತಿದ್ದಾರೆ. ಅನ್ನದಾನ, ನವರಾತ್ರಿ ವಿಶೇಷ ಕಾರ್ಯಕ್ರಮಗಳು ಇಲ್ಲಿ ಸಲ್ಲುತ್ತವೆ. ಹೀಗೆ ನೈಸರ್ಗಿಕವಾಗಿ ಆಕರ್ಷಕವಾಗಿ ಗೋಚರಿಸುತ್ತಿರುವ ಓಂ ಶ್ರೀ ಶೃಂಗಾರಕಲ್ಲು ಶ್ರೀ ಆದಿ ಶ್ರೀ ಬನಶಂಕರೀ ಮಾತಾ ಗೃಹಾರಾಧನಾ ಶಕ್ತಿ ಮಂದಿರ ನಂಬಿದವರಿಗೆ ಇಂಬು ನೀಡುವುದರಲ್ಲಿ ಸಂದೇಹವಿಲ್ಲ.

ವಿಶೇಷ ವರದಿ - ಚಿತ್ರ: ಹರೀಶ್ ಕೆ.ಆದೂರು.

4 comments:

Anonymous said...

tumba upayuktha mahiti neediddiri suktha vilasa sigabahude....

Ashwin

Anonymous said...

ದೂರದರ್ಶನ ವಾಹಿನಿಗಳಲ್ಲಿ ಮೂಡಿಬರುವಂತಹ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಿದ ಈ ಕನಸು.ಕಾಂ ತಂಡಕ್ಕೆ ಹಾಗೂ ಹರೀಶ್ ಅವರಿಗೆ ಅಭಿನಂದನೆಗಳು. ಮುಂದೆಯೂ ಇಂತಹ ಇನ್ನಷ್ಟು ವಿಚಾರಗಳು ಈ ಕನಸಿನಲ್ಲಿ ಬರಲಿ.

ರಾಮಚಂದರ್ ಬೆಂಗಳೂರು.

Anonymous said...

good keep it up

Anonymous said...

ನಾನು ತುಂಬಾ ಸಮಸ್ಯೆಯಲ್ಲಿದ್ದೇನೆ. ಇಲ್ಲಿ ಹೇಳಿಕೊಳ್ಳು ಅಸಾಧ್ಯ. ನನಗೆ ಆ ಕ್ಷೇತ್ರದ ವಿಳಾಸ ಅಲ್ಲಿಗೆ ಹೇಗೆ ಬರಬೇಕೆಂಬುದರ ಬಗೆಗೆ ಮಾಹಿತಿ ನೀಡುವಿರಾ...
ನಮ್ಮ ಸಮಸ್ಯೆಗಳು ಅಲ್ಲಿ ಪರಿಹಾರವಾಗಬಹುದೇ..

ಸುರೇಶ್ ಮಣಿಪಾಲ

Post a Comment