ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಬೆಂಗಳೂರು/ಮಂಗಳೂರು: ಎಲ್ಲಾ ಪಿ.ಯು. ಕಾಲೇಜುಗಳೆದುರು ವಿದ್ಯಾರ್ಥಿಗಳು ಅವರ ಹೆತ್ತವರು ಜಮಾಯಿಸಿದ್ದಾರೆ. ಪ್ರಥಮ ಪಿಯುಸಿಗೆ ಪ್ರವೇಶ ಅರ್ಜಿ ಪಡೆಯಲು ನಾಳೆ ಕೊನೆಯ ದಿನ. ಈ ಕಾರಣಕ್ಕೆ ಜನಜಂಗುಳಿಯೇ ಸೇರಿದೆ. ಪ್ರಥಮ ಪಿ.ಯು. ಪ್ರವೇಶಕ್ಕೆ ಹರಸಾಹಸ ಪಡುವ ಸನ್ನಿವೇಶ ಎದುರಾಗಿದೆ.


ಈ ಬಾರಿ ಉತ್ತಮ ರಿಸಲ್ಟ್ ಪಡೆದ ಕಾಲೇಜುಗಳಲ್ಲಂತೂ ಹಾಲು ಹಾಕುವಂತಿಲ್ಲ. ಅಷ್ಟರ ಮಟ್ಟಿಗೆ ನೂಕು ನುಗ್ಗಲು ಉಂಟಾಗಿದೆ. ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆ ಸೇರಿದಂತೆ ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಜನ ಜಂಗುಳಿ ಕಂಡುಬರುತ್ತಿದೆ. ಬೆಂಗಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೂ ಇದೇ ಅವಸ್ಥೆ.
ತರಗತಿಗಳು ಜೂನ್.9ರಿಂದ ಆರಂಭವಾಗುತ್ತವೆ. ವಿದ್ಯಾರ್ಥಿಗಳು ಇದೀಗ ಹೊಸ ಕಾಲೇಜುಗಳಲ್ಲಿ ಹೊಸ ಅನುಭವದ ಸವಿ ಸವಿಯಲು ಸಿದ್ಧರಾಗುತ್ತಿದ್ದಾರೆ.

0 comments:

Post a Comment