ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
8:41 AM

ಮರೆಯದಿರಿ...

Posted by ekanasu

ರಾಜ್ಯ - ರಾಷ್ಟ್ರ

ಎಲ್ಲೆಡೆ ಇದೀಗ ನಿರಾಳ ...ಆದರೆ ಸೋತವರು ಪೆಚ್ಚುಮೋರೆ ಹಾಕಿ ಹಿಡಿಶಾಪ ಹಾಕಿದರೆ ಗೆದ್ದವರು ತಾವೇ `ರಿಯಲ್ ಹೀರೋ' ಎಂಬ ಫೋಸ್ ಕೊಡುತ್ತಿರುವುದು ಕಾಣಸಿಗುತ್ತದೆ. ಇದು ನಿನ್ನೆ ನಡೆದ ಗ್ರಾಮಪಂಚಾಯತ್ ಚುನಾವಣೆಯ ಮತ ಎಣಿಕೆ ನಂತರದ ಒಂದು ನೋಟ. ಹೆಂಡ, ಹಣ ಯಥಾ ಪ್ರಕಾರವಾಗಿ ಗ್ರಾಮಪಂಚಾಯತ್ ಚುನಾವಣೆಯಲ್ಲೂ ಎಲ್ಲೆ ಮೀರದೆ ಹರಿದಿದೆ. ಪಕ್ಷಗಳ ನೆರಳಿಲ್ಲದೆ ನಡೆಯಬೇಕಾಗಿದ್ದ ಗ್ರಾಮ ಪಂಚಾಯತ್ ಚುನಾವಣೆ ವಿಧಾನ ಸಭಾ ಚುನಾವಣೆಯಷ್ಟೇ `ಪೈಪೋಟಿ'ಯಲ್ಲಿ ನಡೆದಿದ್ದು ದುರಂತ. ಪಕ್ಷಗಳ ಮೇಲಾಟದಿಂದ ಚುನಾವಣೆ ನಡೆದಿದೆ. ಗೆದ್ದವರು ಯಾರೋ... ಆದರೆ ಪ್ರಾಮಾಣಿಕವಾಗಿ ಜನತೆಯ ಸೇವೆ ಸಲ್ಲಿಸುತ್ತಿದ್ದವರಿಗೆ ಅವಕಾಶವಿಲ್ಲ. ಹಣ, ಪ್ರತಿಷ್ಠೆಯ ಬಲವಿದ್ದವರು ಈ ಚುನಾವಣೆಯಲ್ಲಿ ಸ್ಥಾನ ಗಳಿಸಿಕೊಂಡಿದ್ದಾರೆ. ಇದೆಲ್ಲವೂ ಆಗಿಹೋದ ವಿಚಾರ. ಆದರೆ ಏತನ್ಮಧ್ಯೆ ಪಂಚಾಯತ್ ರಾಜ್ ವ್ಯವಸ್ಥೆಯ ಕುರಿತಾಗಿ ಒಂದಷ್ಟು ಚಿಂತಿಸುವ ಕಾಲ ಸನ್ನಿಹಿತವಾಗಿದೆ.ಹಳ್ಳಿಗೆ ಸರಕಾರವನ್ನು ತಂದಂತಹ ಹಳ್ಳಿಗಳಲ್ಲೆ ಸರ್ಕಾರವನ್ನು ತೋರಿಸಿದಂತಹ ಮಹಾನ್ ವ್ಯಕ್ತಿ ರಾಮಕೃಷ್ಣ ಹೆಗಡೆ ಎಂದರೆ ತಪ್ಪಾಗಲಾರದು. ಅವರ ಆಡಳಿತಾವಧಿಯಲ್ಲಿ ಅವರಿಗೆ ಬೆಂಬಲವಾಗಿದ್ದವರು ಗ್ರಾಮೀಣಾಭಿವೃದ್ಧಿ ಸಚಿವ ನಸೀರ್ ಸಾಬ್. ಇಡೀ ದೇಶಕ್ಕೆ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತಂದಂತಹವರು ಮಾಜಿ ಪ್ರಧಾನಿಯಾಗಿದ್ದಂತಹ ರಾಜೀವ್ ಗಾಂಧಿ ಯವರು. ಆದರೆ ಇಂದು ಜನತೆ ಇದನ್ನೆಲ್ಲ ಮರೆತಿದ್ದಾರೆ. ಕೇವಲ ಇವರ ಹೆಸರು ಹೇಳಿ ರಾಜಕೀಯ ಮಾಡುತ್ತಿದ್ದಾರೆ. ಆದರೆ ಅವರ ತತ್ವಗಳು, ಅವರ ಕೆಲಸ ಕಾರ್ಯಗಳ ಬಗ್ಗೆ ಯಾಕೆ ಕಿಂಚಿತ್ತು ಚಿಂತಿಸುತ್ತಿಲ್ಲ...? ಕೇವಲ ಅದೇನೋ ಬಾಯಿಗೆ ಬಂದಂತಹ ಮಾಹಿತಿಗಳನ್ನು ಹೇಳುತ್ತಾ `ಅದನ್ನು ಮಾಡಿದ್ದು ನಮ್ಮ ಪಕ್ಷ- ಇದನ್ನು ಅನುಷ್ಠಾನ ಗೊಳಿಸಿದ್ದು ಈ ಪಕ್ಷ' ಎಂಬ ಹೇಳಿಕೆಯನ್ನಷ್ಟೇ ನೀಡುವುದರಲ್ಲಿ ವೃಥಾ ಕಾಲ ಹರಣವಾಗುತ್ತಿದೆ. ಇಂದು ಇರುವ ಅಧಿಕಾರ ಶಾಹೀ ಪಕ್ಷಗಳು ಇಂತಹ ಒಳ್ಳೆ ಕೆಲಸಗಳತ್ತ ಚಿಂತಿಸಲಿ.


ಗ್ರಾಮ ಸರಕಾರಕ್ಕೆ ಇದೀಗ 25 ವರುಷದ ಸಂಭ್ರಮ . ಈ ಸಂದರ್ಭವನ್ನು ಕನ್ನಡದ ರಾಷ್ಟ್ರೀಯ ದೈನಿಕ `ಹೊಸದಿಗಂತ' ನೆನಪಿಸಿದೆ. ಅಭಿವೃದ್ಧಿ ಪರ ಪತ್ರಿಕೋದ್ಯಮದಲ್ಲಿ ದಾಪುಗಾಲಿಡುತ್ತಿರುವ ಈ ಪತ್ರಿಕೆ ಗ್ರಾಮ ಸರಕಾರದ ಕಾರ್ಯವನ್ನು ಶ್ಲಾಘಿಸಿದೆ. ನಮ್ಮ ಓದುಗರು ಈ ಮಾಹಿತಿಯನ್ನೂ ಓದಲಿ ಎಂಬ ಸದುದ್ದೇಶ ನಮ್ಮದು.

1 comments:

Anonymous said...

v.good ekanasu...
nandan

Post a Comment