ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ವಿದೇಶಕ್ಹೋಗಿ ಸ್ವದೇಶವನ್ನು ತೆಗಳಿದೆಯಲ್ಲೋ ಜೈರಾಮ್, ಜೈಜೈರಾಮ್
ಚೀನಾ ರಾಜಧಾನೀಲಿ ಏನೋ ಬೊಗಳಿದೆಯಲ್ಲೋ ಜೈರಾಮ್, ಜೈಜೈರಾಮ್
ಭಾರತಕ್ಕೆ ನಿಮ್ಮಮೇಲೆ ಅನುಮಾನ ಅಂದ್ಯಲ್ಲೋ ಜೈರಾಮ್, ಜೈಜೈರಾಮ್
'ಪಂಚಶೀಲ'ಗೆಟ್ಟವರು ಅವರೆಂಬುದು ಗೊತ್ತಿಲ್ವೆ? ಜೈರಾಮ್, ಜೈಜೈರಾಮ್

ಟಿಬೆಟ್ ನುಂಗಿ ನಮ್ಮತ್ತ ನುಗ್ಗಿದ್ದು ಯಾರಪ್ಪಾ? ಜೈರಾಮ್, ಜೈಜೈರಾಮ್
ಅರುಣಾಚಲಪ್ರದೇಶದಮೇಲೆ ಕಣ್ಣು ಯಾರದು? ಜೈರಾಮ್, ಜೈಜೈರಾಮ್
ನಮ್ಮ ವೆಬ್ಸೈಟ್ ಹ್ಯಾಕ್ ಮಾಡ್ತಿರೋದ್ಯಾರು? ಜೈರಾಮ್, ಜೈಜೈರಾಮ್
ಇಂಥ ಚೀನಾದೆದ್ರು ಯಾಕ್ ಲೂಸ್ ಮಾತಾಡ್ದೆ? ಜೈರಾಮ್, ಜೈಜೈರಾಮ್ಚೀನಾ ವಸ್ತುಗಳಿಗೆ ಭಾರತದಲ್ಲಿ ಬರವೆ? ಜೈರಾಮ್, ಜೈಜೈರಾಮ್
ಚೀನಾ ಮಾರ್ಕೆಟ್ಟನ್ನೇ ತರಿಸಿಟ್ಕೊಂಡಿದ್ದೀವಿ, ಜೈರಾಮ್, ಜೈಜೈರಾಮ್
ಭಾರತದ ಉದ್ಯಮಕ್ಕೇ ಏಟು ಕೊಟ್ಟಿದೆ ಚೀನಾ ಜೈರಾಮ್, ಜೈಜೈರಾಮ್
ಇಂಥ ಚೀನಾದ ಪರ ವಕಾಲತ್ತೇ ನಿನ್ನದು?! ಜೈರಾಮ್, ಜೈಜೈರಾಮ್

ಭೋಪಾಲ್ ಕಾನ್ವೊಕೇಷನ್ನಲ್ಲಿ ಗೌನ್ ಕಳಚಿಟ್ಟೆ ಜೈರಾಮ್, ಜೈಜೈರಾಮ್
ದೇಶಾಭಿಮಾನ ಮೆರೆದು ಮೆಚ್ಚುಗೆ ಗಳಿಸಿದೆ ಜೈರಾಮ್, ಜೈಜೈರಾಮ್
ಈಗೇನಾಯ್ತಪ್ಪ ನಿನಗೆ ಚೀನಾಕ್ಕೆ ಹೋದಾಗ ಜೈರಾಮ್, ಜೈಜೈರಾಮ್
ದೇಶದ ಮಾನ ಹರಾಜ್ಹಾಕೋಕ್ಹೊರಟ್ಯಲ್ಲೋ ಜೈರಾಮ್, ಜೈಜೈರಾಮ್!

(ಕೇಂದ್ರ ಪರಿಸರ ಸಚಿವ ಜೈರಾಮ್ ರಮೇಶ್ ಅವರಿಗೆ ಸಮರ್ಪಿತ)

ಎಚ್. ಆನಂದರಾಮ ಶಾಸ್ತ್ರೀ

1 comments:

Padyana Ramachandra said...

ಕೇಂದ್ರ ಪರಿಸರ ಸಚಿವ ಜೈರಾಮ್ ರಮೇಶ್ ಅವರಿಗೆ ಸಮರ್ಪಿತ,

ಶ್ರೀ.ಎಚ್. ಆನಂದರಾಮ ಶಾಸ್ತ್ರೀ ವಿರಚಿತ,

ಜೈರಾಮ್, ಜೈಜೈರಾಮ್! ಕವನ ಪ್ರಕಾಶಕ,

ಈ-ಕನಸು ತಂಡಕ್ಕೆ

ಕತಾರ್ ಕನ್ನಡಿಗನ

ವಂದನೆಗಳು

-ಪ.ರಾಮಚಂದ್ರ
ರಾಸ್ ಲಫ್ಫಾನ್, ಕತಾರ್

Post a Comment