ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
8:47 PM

ಫಲಿತಾಂಶ ಉತ್ತಮ

Posted by ekanasu

ಪ್ರಾದೇಶಿಕ ಸುದ್ದಿ

ಮುಲ್ಕಿ : ಹೋಬಳಿಯ ವಿದ್ಯಾ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಗಳಿಸಿಕೊಂಡಿದ್ದಾರೆ.ಮೂಲ್ಕಿಯ ನಾರಾಯಣಗುರು ಆಂಗ್ಲ ಮಾಧ್ಯಮ ಶಾಲೆಯ 90 ವಿದ್ಯಾರ್ಥಿಗಳಲ್ಲಿ 86 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ.95.6 ಫಲಿತಾಂಶ ದಾಖಲಾಗಿ 17 ಡಿಸ್ಟಿಂಕ್ಷನ್,44ಪ್ರಥಮ ದರ್ಜೆ ಬಂದಿದೆ. ಕಿಲ್ಪಾಡಿ ವ್ಯಾಸ ಮಹಿರ್ಷಿ ವಿದ್ಯಾಮಂದಿರದ 44 ವಿದ್ಯಾರ್ಥಿಗಳಲ್ಲಿ 42 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.95 ದಾಖಲಾಗಿದ್ದು 6 ಡಿಸ್ಟಿಂಕ್ಷನ್ ಬಂದಿದೆ. ಕಿನ್ನಿಗೋಳಿ ಬಳಿಯ ಐಕಳದ ಪಾಂಪೈ ಶಾಲೆಯಲ್ಲಿ 75 ವಿದ್ಯಾರ್ಥಿಗಳಲ್ಲಿ 72 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ.96 ದಾಖಲಾಗಿ 3 ಡಿಸ್ಟಿಂಕ್ಷನ್ ಪಡೆದಿದ್ದಾರೆ.ಮೂಲ್ಕಿ ಮೆಡಲಿನ್ ಶಾಲೆಯ 108 ವಿದ್ಯಾರ್ಥಿಗಳಲ್ಲಿ 100 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.93 ದಾಖಲಾಗಿದ್ದು 3 ಡಿಸ್ಟಿಂಕ್ಷನ್ ಇದೆ. ಕಟೀಲು ದುರ್ಗಾಪರಮೇಶ್ವರಿ ದೇವಳ ಪದವಿ ಪೂರ್ವ ಕಾಲೇಜಿನಲ್ಲಿ 141 ವಿದ್ಯಾರ್ಥಿಗಳಲ್ಲಿ 127 ಉತ್ತೀರ್ಣರಾಗಿದ್ದು ಶೇ.90 ಫಲಿತಾಂಶದಲ್ಲಿ 9 ಡಿಸ್ಟಿಂಕ್ಷನ್ ಬಂದಿದೆ.
ಕಾರ್ನಾಡು ಸರ್ಕಾರಿ ಪದವಿ ಪೂರ್ವ ಕಾಲೇಜಿನ 92 ವಿದ್ಯಾರ್ಥಿಗಳಲ್ಲಿ 48 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ.52 ಫಲಿತಾಂಶ ಬಂದಿದೆ.

ಪಿಯುಸಿ ಫಲಿತಾಂಶ

ಮೂಲ್ಕಿ ವಿಜಯಾ ಪಿಯು ಕಾಲೇಜಿನಲ್ಲಿ 204 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 176 ಮಂದಿ ಉತ್ತೀರ್ಣಗೊಂಡಿದ್ದು 20 ಡಿಸ್ಟಿಂಕ್ಷನ್,94 ಪ್ರಥಮ ದರ್ಜೆಯೊಂದಿಗೆ ಶೇ86.2% ಫಲಿತಾಂಶ ಗಳಿಸಿದೆ.ಮೂಲ್ಕಿ ಶ್ರೀ ನಾರಾಯಣ ಗುರು ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ 87ಮಂದಿ ಪರೀಕ್ಷೆಗೆ ಹಾಜರಾಗಿ 73ಮಂದಿ ಉತ್ತೀರ್ಣರಾಗಿದ್ದಾರೆ.8 ಡಿಸ್ಟಿಂಕ್ಷನ್,44ಪ್ರಥಮ ದರ್ಜೆಯೊಂದಿಗೆ ಶೇ84%ಫಲಿತಾಂಶ ಬಂದಿದೆ.ಮೂಲ್ಕಿ ವಿಜಯಾ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ಶೃದ್ಧಾ ಸುವರ್ಣ 582/600(97%) ಅಂಕಗಳಿಸಿ ಕಾಲೇಜಿಗೆ ಫ್ರಥಮರಾಗಿದ್ದಾರೆ.ಇವರು ಮೂಲ್ಕಿ ಮಾನಂಪಾಡಿಯ ಶಿವಾನಂದ ಸುವರ್ಣ ಮತ್ತು ಹೇಮಾವತಿ ಸುವರ್ಣರ ಪುತ್ರಿ .

ಚಿತ್ರ-ವರದಿ: ಭಾಗ್ಯವಾನ್ ಸನಿಲ್

0 comments:

Post a Comment