ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಬೆಂಗಳೂರು: 4 ಲಕ್ಷ ಕೋಟಿ ರೂ. ಮೌಲ್ಯದ 353 ಸಂಖ್ಯೆಯ ಒಡಂಬಡಿಕೆಗಳಿಗೆ ಸಹಿ ಹಾಕಲಾಗಿದೆ. ಇದರಿಂದ ಸುಮಾರು 8.65 ಲಕ್ಷ ಮಂದಿಗೆ ಉದ್ಯೋಗ ದೊರೆಯಲಿದೆ.ಸಮಾವೇಶ ನಿರೀಕ್ಷೆಗೂ ಮೀರಿ ಯಶಸ್ಸು ಸಾಧಿಸಿದೆ.ಈ ಸಮಾವೇಶವನ್ನು ಈ ಪ್ರಮಾಣದಲ್ಲಿ ಯಶಸ್ಸು ಸಾಧಿಸಲು ಸಹಕಾರ ಹಾಗೂ ಬೆಂಬಲ ನೀಡಿದ ಎಲ್ಲಾ ಬಂಡವಾಳ ಹೂಡಿಕೆದಾರರಿಗೆ ಹಾಗೂ ಮಾಧ್ಯಮ ಮಿತ್ರರಿಗೆ ನನ್ನ ತುಂಬು ಹೃದಯದ ವಂದನೆಗಳು. ಇದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮನದಾಳದ ಮಾತುಗಳು.ಬಂಡವಾಳ ಹೂಡಿಕೆದಾರರ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ಜಾಗತಿಕ ಆರ್ಥಿಕ ಹಿಂಜರಿತದ ಹಿನ್ನೆಲೆಯಲ್ಲಿ ಸಾಕಷ್ಟು ಬಾರಿ ಮುಂದೂಡಿದ್ದ ಈ ಸಮಾವೇಶ ನಿರೀಕ್ಷೆಗೂ ಮೀರಿ ಯಶಸ್ಸು ಸಾಧಿಸಿದೆ ಎಂದರು.ಪ್ರಾರಂಭದ ಪ್ರತಿಕ್ರಿಯೆಯ ಮೇಲೆ ಸುಮಾರು 4 ಲಕ್ಷ ಕೋಟಿ ರೂ.ಗಳ ಬಂಡವಾಳವನ್ನು ಆಕರ್ಷಿಸುವ ಆಶಯ ನಮ್ಮಲ್ಲಿತ್ತು. ಆದರೆ, ಹಿಂದಿನ ಎಲ್ಲಾ ದಾಖಲೆಗಳನ್ನು ಮೀರಿ ಈ ಸಮಾವೇಶದಲ್ಲಿ ಬಂಡವಾಳ ಹೂಡಿಕೆ ರಾಜ್ಯದಲ್ಲಿ ಬಂದಿದೆ. ಒಟ್ಟು ಒಡಂಬಡಿಕೆಗಳನ್ನು ಕೂಡಿಸಿದಲ್ಲಿ ಪ್ರಾಯಶ: 5 ಲಕ್ಷ ಕೋಟಿ ರೂ.ಗಳನ್ನು ದಾಟುವ ಅಂದಾಜಿದೆ ಎಂದರು.
ಸಮಾಜದ ಎಲ್ಲಾ ಜನಸಮುದಾಯದ ಸಮಾನ ಅಭಿವೃದ್ಧಿ ನಮ್ಮ ಸರಕಾರದ ಗುರಿ ಎಂದ ಮುಖ್ಯಮಂತ್ರಿಗಳು ಕೈಗಾರಿಕಾ ಅಭಿವೃದ್ಧಿಯು ಉದ್ಯೋಗಗಳನ್ನು ಸೃಷ್ಠಿಸುವ ಮೂಲಕ ನಿರುದ್ಯೋಗ ಸಮಸ್ಯೆಗೆ ಪರಿಹಾರ ನೀಡಲಿದೆ. ಹಾಗೆಯೇ ಗ್ರಾಮೀಣ ಮಂದಿ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ಈ ಪ್ರಕ್ರಿಯೆ ತಪ್ಪಿಸಲಿದೆ ಎಂದರು.

ಕೃಷಿ ಹಾಗೂ ಕೈಗಾರಿಕೆಗಳು ಜೊತೆ ಜೊತೆಯಾಗಿಯೇ ವಿಕಾಸಗೊಳ್ಳಬೇಕು ಎಂಬ ಅರಿವು ನನಗಿದೆ. ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿಯು ಕೃಷಿ ಕ್ಷೇತ್ರಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸಬೇಕು. ನಮ್ಮ ಸರ್ಕಾರ ಕೃಷಿಕರ ವಿಕಾಸಕ್ಕಾಗಿ ಈಗಾಗಲೇ ಅನುಷ್ಠಾನ ಮಾಡಿರುವ ಯೋಜನೆಗಳ ಬಗ್ಗೆ ನಾನು ಹೇಳಲು ಬಯಸುವುದಿಲ್ಲ ಎಂದ ಸಿ.ಎಂ ರೈತಾಪಿ ಸಮುದಾಯದ ಅಭಿವೃದ್ಧಿಯ ವಿಷಯದಲ್ಲಿ ನಮ್ಮ ಸರಕಾರ ಎಂದೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಈ ಸಂದರ್ಭದಲ್ಲಿ ಮತ್ತೊಮ್ಮೆ ತಿಳಿಸಬಯಸುತ್ತೇನೆ ಎಂದರು.

0 comments:

Post a Comment