ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ಮಂಗಳೂರು: ಗ್ರಾ.ಪಂ.ಚುನಾವಣೆ ಮುಗೀತು. ಮತ ಎಣಿಕೆ ಕಾರ್ಯವೂ ಮುಗಿದು ಸದಸ್ಯರು ಯಾರ್ಯಾರೆಂಬುದು ನಿಗಧಿಯೂ ಆಯ್ತು...ಇನ್ನೀಗ ಅಧ್ಯಕ್ಷ ಯಾರಾಗ್ತಾರೆ ಉಪಾಧ್ಯಕ್ಷ ಯಾರು ಎಂಬ ಕುತೂಹಲ...! ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮ ಪಂಚಾಯತ್ ಗಳ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ನಿಗದಿಪಡಿಸುವ ಪ್ರಕ್ರಿಯೆ ವಿವಿಧ ತಾಲೂಕುಗಳಲ್ಲಿ ಜೂನ್ 2 ರಿಂದ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಪ್ರಭಾಕರ ಶರ್ಮ ತಿಳಿಸಿದ್ದಾರೆ.
ವಿವರ ಇಂತಿದೆ: ಬೆಳ್ತಂಗಡಿ ತಾಲೂಕು : ಜೂನ್ 2ರಂದು ಬೆಳಗ್ಗೆ 10.30ಗಂಟೆಗೆ ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾಭವನ ಗುರುವಾಯನಕೆರೆ. ಪುತ್ತೂರು ತಾಲೂಕು : ಜೂನ್ 2ರಂದು ಮಧ್ಯಾಹ್ನ 3 ಗಂಟೆಗೆ ಪುತ್ತೂರು ಪುರಭವನ.ಸುಳ್ಯ ತಾಲೂಕು : ಜೂನ್ 3ರಂದು ಬೆಳಗ್ಗೆ 10.30ಗಂಟೆಗೆ ಸುಳ್ಯ ಕೆವಿಜಿ ಪುರಭವನ. ಬಂಟ್ವಾಳ ತಾಲೂಕು : ಜೂನ್ 4ರಂದು ಬೆಳಗ್ಗೆ 10 ಗಂಟೆಗೆ ಬ್ರಹ್ಮ ಶ್ರೀ ನಾರಾಯಣ ಮಂದಿರ ಬಿ.ಸಿ.ರೋಡ್. ಮಂಗಳೂರು ತಾಲೂಕು : ಜೂನ್ 4 ರಂದು ಮಧ್ಯಾಹ್ನ 3 ಗಂಟಗೆ ಮಂಗಳೂರು ಪುರಭವನ. ಈ ಹಿಂದಿನ ಐದು ಅವಧಿಯ ಮೀಸಲಾತಿಯನ್ನು ಪರಿಗಣಿಸಿ ಮುಂದಿನ ಮೀಸಲಾತಿ ನಿಗದಿಪಡಿಸಲಾಗುವುದು.

0 comments:

Post a Comment