ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
7:36 PM

ಪರಸ್ಪರ

Posted by ekanasu

ಸಾಹಿತ್ಯ
ಹರಿದುಬಂತು ನಾಲ್ಕು ಲಕ್ಷ ಕೋಟಿ ಬಂಡವಾಳ
ಕೊಡಬೇಕಿನ್ನವರಿಗೆ ನಾವ್ ಭೂಮಿ ಭಾಳಭಾಳ!
ಜೊತೆಗೆ ನೀರು ಮತ್ತು ಕರೆಂಟ್ ಕೂಡ ನೀಡಬೇಕು
ತೆರಿಗೆ, ಶುಲ್ಕ ಎಲ್ಲವನ್ನು ಮಾಫಿ ಮಾಡಬೇಕು

ನೀಡೋಣ, ಮಾಡೋಣ, ನಮಗೇ ಲಾಭ ತಾನೆ?
ಕೈಗಾರಿಕೆಯಿಂದ ರಾಜ್ಯ ಬೆಳೆವುದು ತಂತಾನೇ.
ಆದರೀಗ ಸಮಸ್ಯೆಯೇ ನೀರು, ಕರೆಂಟ್ನದ್ದು
ಜೊತೆಗೆ, ಭೂಮಿಬಿಡಲೊಪ್ಪದ ರೈತ ಬಂಧುಗಳದುಕುಡಿಯಲಿಕ್ಕೇ ನೀರಿಲ್ಲ, ಮನೆಗೆ ಕರೆಂಟಿಲ್ಲ,
ಬೆಳೆ ಬೆಳೆದೂ ರೈತರಿಗೂ ನಮಗೂ ಸುಖವಿಲ್ಲ.
ಕೈಗಾರಿಕೆ ಬೇಕೆಂದರೆ ಕಷ್ಟ ಸಹಿಸಬೇಕು
ಪ್ರಗತಿಗಾಗಿ ನೀರು, ಕರೆಂಟ್, ಭೂಮಿ ತ್ಯಜಿಸಬೇಕು?

ಈ ದಿಸೆಯಲಿ ಜನರಿಗಾವ ಸಮಸ್ಯೆ ಇರದಂತೆ
ನೋಡಿಕೊಳುವ ಜವಾಬ್ದಾರಿ ಸರ್ಕಾರದ್ದಂತೆ
ಪರ್ಯಾಯ ಮಾರ್ಗಗಳನು ಹುಡುಕಲಿ ಸರ್ಕಾರ
ಜೊತೆಗೆ ನಾವು ಸಹಕರಿಸುತ್ತಿರೋಣ ಭರಪೂರ


ಎಚ್. ಆನಂದರಾಮ ಶಾಸ್ತ್ರೀ

0 comments:

Post a Comment