ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರದೇಹೀ ಎಂದವರಿಗೆ ನಾಸ್ತಿ ಎನ್ನದ ಗೌಡರು...ಅದೇ ದೇವೇಗೌಡರು ವಿಜಯ ಮಲ್ಯರಿಗೆ `ಅಭಯ ನೀಡಿದ್ದಾರೆ...' ನೀವು ಮುಂದುವರೀರಿ...ಏನೇ ಆಗ್ಲಿ ನಾನಿದ್ದೇನೆ ಎಂದು... ಅದೇ ನೋಡಿ ಇವತ್ತು ರಾಜ್ಯಸಭೆಗೆ ನಾಮಪತ್ರ ಸಲ್ಲಿಸಲು ಕೊನೇ ದಿನವಲ್ವೇ...ಹಾಗೇ ಬೆಳಗ್ಗಿನಿಂದ್ಲೇ ಸಾಕಷ್ಟು ಸಜ ಇವತ್ತು ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ರು... ಬಿರುಸಿನ ರಾಜಕೀಯ ಕಾರ್ಯಗಳು ನಡೀತಿತ್ತು. ಏತನ್ಮಧ್ಯೆ ನಮ್ಮ ಯು.ಬಿ. ಸಮೂಹದ ಡಾ.ವಿಜಯ್ ಮಲ್ಯ ದೇವೇಗೌಡ್ರನ್ನು ಭೇಟಿ ಮಾಡಿದ್ರು. ದೇವೇಗೌಡ್ರ ಆಶೀರ್ವಾದದಿಂದ ನಾನು ಕಣಕ್ಕಿಳೀತೀನಿ ಅಂತಬೇರೆ ಹೇಳಿದ್ರು... ಇದೇ ಸಂದರ್ಭದಲ್ಲಿ ವಿಜಯ ಮಲ್ಯ ಅವರಿಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಜೆ.ಡಿ.ಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ರು. ಏನೇ ಇರಲಿ ಜೂನ್ 17ಕ್ಕೆ ರಾಜ್ಯ ಸಭೆ ಚುನಾವಣೆ ನಡೀಲಿಕ್ಕಿದೆ.

0 comments:

Post a Comment