ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ

ಮುಲ್ಕಿ:ಇಲ್ಲಿನ ಮೂಲ್ಕಿಯ ಕೆ.ಎಸ್.ರಾವ್ ನಗರ ಮತ್ತು ಕೆರೆಕಾಡು ಮತ್ತು ಬೆಳ್ಳಾಯರುವಿನಲ್ಲಿ ನಡೆಯುತ್ತಿದ್ದ ಮೊಬೈಲ್ ಮಟ್ಕಾ ಅಡ್ಡೆಗೆ ಮೂಲ್ಕಿ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ ಘಟನೆ ಬುಧವಾರ ರಾತ್ರಿ ನಡೆದಿದೆ.
ಪುನರೂರು ನಿವಾಸಿ ಸತೀಶ್ ಶೆಟ್ಟಿ ಕೆರೆಕಾಡು ಬೆಳ್ಳಾಯರುವಿನಲ್ಲಿ ಮೊಬೈಲ್ ಮೂಲಕ ಮಟ್ಕಾದ ಸಿಂಗಲ್ ನಂಬರ್ ವ್ಯವಹಾರ ನಡೆಸುತ್ತಿದ್ದಾನೆ ಎಂದು ಖಚಿತ ಮಾಹಿತಿಯಂತೆ ದಾಳಿ ನಡೆದಿದ್ದು ರೂ 310 ನಗದು ಮತ್ತು ಮೊಬೈಲನ್ನು ವಶಪಡಿಸಿಕೊಂಡಿದ್ದಾರೆ.ಈ ಸಂದರ್ಭ ಕೆ.ಎಸ್.ರಾವ್ನಗರದಲ್ಲಿಯೂ ದಾಳಿ ನಡೆದಿದ್ದು ಅಲ್ಲಿನ ನಿವಾಸಿ ಬಸವರಾಜು ಎಂಬಾತನನ್ನು ವಶಕ್ಕೆ ಪಡೆದು ಆತನ ಕೈಯಿಂದ ಮೊಬೈಲ್ ಮತ್ತು ರೂ 600ನ್ನು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಮಂಗಳೂರು ಕಮಿಷನರೇಟ್ನ ಎಸಿಪಿ ಗಿರೀಶ್ರವರು ಮೂಲ್ಕಿಯಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಉಡುಪಿ ಜಿಲ್ಲೆಯನ್ನು ಕೇಂದ್ರೀಕತ ಗೊಳಿಸಿ ಮಡ್ಕಾ ಜಾಲ ಮೂಲ್ಕಿ ಪರಿಸರದಲ್ಲಿ ನಡೆಯುತ್ತಿರುವ ಖಚಿತ ಮಾಹಿತಿ ತಿಳಿದಿದೆ ಎಂದಿದ್ದರು.ಈನಿಟ್ಟಿನಲ್ಲಿ ಕಾರ್ಯಾಚರಣೆ ನಡೆದಿದೆ.

ವರದಿ: ಭಾಗ್ಯವಾನ್ ಸನಿಲ್ ಮುಲ್ಕಿ.

0 comments:

Post a Comment