ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ

ಮುಲ್ಕಿ: ಮೂಲ್ಕಿ ಬಳಿಯ ಕಿನ್ನಿಗೋಳಿ ಮತ್ತು ಹಳೆಯಂಗಡಿಯಲ್ಲಿ ಶೀಘ್ರದಲ್ಲಿಯೇ ಹೊರಠಾಣೆಯನ್ನು ಸ್ಥಾಪಿಸುವ ಬಗ್ಗೆ ಚಿಂತಿಸಲಾಗಿದೆ ಎಂದು ಮಂಗಳೂರು ಕಮಿಷನರೇಟ್ನ ಎಸಿಪಿ ಗಿರೀಶ್ ಎಸ್. ತಿಳಿಸಿದ್ದಾರೆ. ಮುಲ್ಕಿ ಪೊಲೀಸ್ ಠಾಣೆಗೆ ಭೇಟಿ ನೀಡಿದಾಗ ಈ ವಿಷಯ ತಿಳಿಸಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯು ಕಮಿಷನರೇಟ್ ಆದ ಹಿನ್ನಲೆಯಲ್ಲಿ ಪ್ರತಿ ಠಾಣಾ ವ್ಯಾಪ್ತಿಯಲ್ಲಿ ತಲಾ ಎರಡು ಹೆಚ್ಚುವರಿ ಹೊರಠಾಣೆಯನ್ನು ಸ್ಥಾಪಿಸುವ ಹಿನ್ನಲೆಯಲ್ಲಿ ಕಿನ್ನಿಗೋಳಿಯು ಬೆಳೆಯುತ್ತಿರುವ ವಾಣಿಜ್ಯ ವ್ಯವಹಾರ ಮತ್ತು ಸುತ್ತಮುತ್ತ ಪ್ರದೇಶದಲ್ಲಿ ಪ್ರಮುಖ ಜನ ಸಂಪರ್ಕದ ಕೇಂದ್ರವಾಗಿದೆ. ಈ ಹಿಂದೆ ಇಲ್ಲಿನ ಬಸ್ನಿಲ್ದಾಣದಲ್ಲಿ ಅಂದಿನ ಮೂಲ್ಕಿ ಠಾಣೆಯ ಎಸ್ಐ ಶ್ರೀನಿವಾಸ್ರವರ ಮುತುವರ್ಜಿ ಒಂದು ಹೊರಠಾಣೆಯನ್ನು ಸಾಂಕೇತಿಕವಾಗಿ ನಿರ್ಮಿಸಿದ್ದರು. ನಂತರ ಪಂಚಾಯಿತಿಯು ಬಸ್ನಿಲ್ದಾಣ ಕೆಡವಿದಾಗ ಹೊರಠಾಣೆಯು ರದ್ದುಗೊಂಡಿತ್ತು.ಪ್ರಸ್ತಾವನೆಯಂತೆ ರಾಷ್ಟ್ರೀಯ ಹೆದ್ದಾರಿ 17ರಲ್ಲಿನ ಅತಿ ಹೆಚ್ಚು ವಾಹನ ಸಂಚಾರವಿರುವ ಹಳೆಯಂಗಡಿಯಲ್ಲಿಯೂ ಅಗತ್ಯವಿದ್ದು ಒಳ ರಸ್ತೆಯಿಂದ ನೇರವಾಗಿ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕವನ್ನು ಪಡೆಯುವ ಈ ಪ್ರದೇಶದಲ್ಲಿ ಕ್ರೈಸ್ತ ಮಿಷಿನರಿಗಳ ಕೇಂದ್ರ, ಹಿಂದೂ ಮುಸ್ಲಿಂ ಧಾರ್ಮಿಕ ಕೇಂದ್ರಗಳು ಹಾಗೂ ಕೋಮು ಸೂಕ್ಷ್ಮ ಪ್ರದೇಶವಾಗಿ ಗುರುತಿಸಿರುವುದರಿಂದ ಇಲ್ಲಿ ಹೊರಠಾಣೆಗೆ ಪ್ರಾಮುಖ್ಯತೆ ನೀಡಲಾಗಿದೆ ಎಂದು ತಿಳಿಸಿದರು.

ಮತ್ತು ಸದಾ ಘರ್ಷಣೆ ನಡೆಯುವ ಕೆ.ಎಸ್.ರಾವ್ನಗರದ ಬಿಜಾಪುರ ಕಾಲೋನಿಯಲ್ಲಿಯೂ ಹೊರಠಾಣೆಯ ಬೇಡಿಕೆಯಿದ್ದು ಮುಂದೆ ನಿರ್ಮಿಸುವ ಯೋಜನೆಇದೆ. ಮೂಲ್ಕಿ ಠಾಣೆಗೆ ಪ್ರತ್ಯೇಕವಾಗಿ ಟ್ರಾಫಿಕ್ ವಿಭಾಗ, ಪ್ರತ್ಯೇಕ ವೃತ್ತ ನಿರೀಕ್ಷಕರು, ಇಬ್ಬರು ಸಬ್ಇನ್ಸ್ಪೆಕ್ಟರ್, ನಾಲ್ಕು ಎಎಸ್ಐ, ಎಂಟು ಹೆಡ್ಕಾನ್ಸ್ಟೇಬಲ್ ಜೊತೆಗೆ ಈಗಿರುವ ಸಿಬಂದಿಗಳ ಸಂಖ್ಯೆಯು ದ್ವಿಗುಣಗೊಳಿಸುವ ಸಾಧ್ಯತೆಯಿದೆ. ಈ ಪ್ರಕ್ರಿಯೆ ಚಾಲ್ತಿಗೆ ಬರಲು ಕನಿಷ್ಠ ಎರಡು ವರ್ಷ ಬೇಕಾಗಬಹುದು ಎಂದು ಗಿರೀಶ್ ತಿಳಿಸಿದ್ದಾರೆ.

ಪ್ರಸ್ತುತ 10 ಹೋಮ್ ಗಾರ್ಡ್ ದಿನವಹಿ 12 ಗಂಟೆಯ ದಿನಕೂಲಿಯ ಆಧಾರದಲ್ಲಿ ಪೊಲೀಸರೊಂದಿಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಂಗಳವಾರ ಕಿನ್ನಿಗೋಳಿಯ ಉದ್ಯಮಿಗಳಿಗೆ ಭೂಗತ ಲೋಕದ ಬೆದರಿಕೆಯ ಹಿನ್ನಲೆಯಲ್ಲಿ ಬೆಳಿಗ್ಗೆ ಠಾಣಾ ವ್ಯಾಪ್ತಿಯ ಎಲ್ಲಾ ರೌಡಿ ಶೀಟರ್ಗಳನ್ನು, ಮತೀಯ ಗಲಭೆಯಲ್ಲಿದ್ದವನ್ನು ಠಾಣೆಗೆ ಕರೆಯಿಸಿದ ಎಸಿಪಿ ಗಿರೀಶ್ ಎಸ್. ಎಚ್ಚರಿಕೆಯನ್ನು ನೀಡಿದರಲ್ಲದೇ ಪೊಲೀಸ್ ಸಿಬ್ಬಂದಿಗಳಿಗೂ ಕೆಲವೊಂದು ಸೂಚನೆಗಳನ್ನು ನೀಡಿದ್ದಾರೆ

ವರದಿ: ಭಾಗ್ಯವಾನ್ ಮುಲ್ಕಿ.

0 comments:

Post a Comment