ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ
ದೇವರ ಬಸವನಿಗೆ ಜಾತ್ರಾ ಸಮಯದಲ್ಲಿ ದರ್ಶನ ಬರೋದು, ದೇವರ ಕೆರೆಯಲ್ಲಿ ಅಚ್ಚರಿ ಹುಟ್ಟಿಸುವ ಅತ್ಯಂತ ಉದ್ದದ ಏಕೈಕ ಮೀನು ಜೀವಿಸುತ್ತಿದೆ... ದೇವರ ಸರೋವರದಲ್ಲಿ ಏಕೈಕ ಮೊಸಳೆ ಇದೆ... ಅಚ್ಚರಿ ಹುಟ್ಟಿಸುವ ರೀತಿಯಲ್ಲಿ ಶ್ವೇತವರ್ಣದ ದನವೊಂದು ಕ್ಷೇತ್ರದೆದರು ಪ್ರತ್ಯಕ್ಷಗೊಂಡು ಅದೃಶ್ಯಗೊಂಡಿತು...ಹೀಗೆ ಅಚ್ಚರಿಯ ಮೇಲೆ ಅಚ್ಚರಿಯನ್ನು ಎಳೆ ಎಳೆಯಾಗಿ ನಿರಂತರವಾಗಿ ಜನತೆಯೆದುರು ತೆರೆದಿಡುತ್ತಾ ಬಂದಂತಹ ಮಂಗಳೂರಿನ ಮೊದಲ ಕನ್ನಡ ಅಂತರ್ಜಾಲ ಪತ್ರಿಕೆ ಈ ಕನಸು.ಕಾಂ ಇದೀಗ ಇಂತಹುದೇ ಮತ್ತೊಂದು ಅಚ್ಚರಿಯನ್ನು ನಿಮ್ಮೆಲ್ಲರ ಮುಂದೆ ತೆರೆದಿಡುತ್ತಿದೆ...

ಇದು ಚಿಕ್ಕಮಗಳೂರು ಜಿಲ್ಲೆಯ ಕಥೆ. ಈ ಬಾರಿಯ ನಮ್ಮ ಪಯಣ ಚಿಕ್ಕಮಗಳೂರು ಜಿಲ್ಲೆಯತ್ತ ಸಾಗಿದೆ. (ಪೂರಕವಾಗಿ ಈ ಕೆಲವು ದಿನಗಳ ಹಿಂದೆ ಮಲಯಮಾರುತ- ಮಂಜರಾಬಾದ್ ಕೋಟೆಯ ಕಥೆಯ ವ್ಯಥೆ ನೋಡಿದ್ದೀರಲ್ಲಾ...) ಚಿಕ್ಕಮಗಳೂರು ಜಿಲ್ಲೆಯ ಮೂಡುಗೆರೆ ಬಣಕಲ್ಲು ಎಂಬ ಪ್ರದೇಶದಲ್ಲಿರುವ ಅಚ್ಚರಿಯನ್ನು ನಮ್ಮ ಓದುಗರಿಗೆ ಪರಿಚಯಿಸುತ್ತಿದ್ದೇವೆ...

ಹುತ್ತ ಎಂದರೆ ಅದೇನೋ ಒಂದು ಭಾವನೆ. ಅದು ಹಿಂದೂ ಧರ್ಮೀಯರಿಗಷ್ಟೇ ಅಲ್ಲ. ಇತರ ಧರ್ಮೀಯರಿಗೂ ಕೂಡಾ... ಹುತ್ತದಲ್ಲಿ ಹಾವಿದೆಯೋ...ಹುತ್ತಕ್ಕೆ ಅಪಮಾನ, ತೊಂದರೆ ಉಂಟುಮಾಡಿದರೆ ಹಾವು ಮುನಿಸುವುದೋ... ಅದರಿಂದ ಮುಂದೆ ಸರ್ಪ ದೋಷಗಳು ಕಂಡುಬರುವುದೋ ಹೀಗೆ ಹತ್ತಾರು ಅನುಮಾನಗಳು ಜನತೆಗೆ ನಿರಂತರವಾಗಿ ಕಾಡುತ್ತಿರುತ್ತವೆ. ಅವೆಲ್ಲವುಗಳಿಗೂ ಪುಷ್ಠಿ ನೀಡುವಂತೆ ಹುತ್ತವೊಂದು ಅಚ್ಚರಿ ಹುಟ್ಟಿಸುತ್ತಿದೆ ನೋಡಿ. ಅದೇ ಈ ಬಾರಿಯ ಈ ಕನಸು.ಕಾಂ ಬಿಗ್ ಸ್ಟೋರಿ.

ಅದೊಂದು ಬಯಲು ಪ್ರದೇಶ...ಅರ್ಥಾತ್ ಅದೊಂದು ಖಾಲಿ ಜಾಗ. ಅಲ್ಲೊಂದು ಹುತ್ತವಿದೆ. ಸುಮಾರು ಹದಿನೆಂಟರಿಂದ 20 ಅಡಿಗಳಷ್ಟು ಎತ್ತರವಿದೆ. ವಿಶಾಲವಾದ ತಲಭಾಗವನ್ನು ಹೊಂದಿದ ಈ ಹುತ್ತ ಶಿವಲಿಂಗಾಕೃತಿಯಲ್ಲಿ ಬೆಳೆದು ನಿಂತಿದೆ. ಮುಡುಗೆರೆಯ ಬಣಕಲ್ ಗ್ರಾಮದ ಬಗ್ಗಸಗೂಡು ಎಂಬ ಪ್ರದೇಶದಲ್ಲಿ ಈ ಹುತ್ತವಿದೆ. ಹೆಚ್ಚಾಗಿ ದನ ಕಾಯುವವರು ಈ ಪ್ರದೇಶದಲ್ಲಿದ್ದು ಮೊದಲಿಗೆ ಅವರಿಗೇ ಈ ಹುತ್ತ ಕಾಣಿಸಿತ್ತು. ಸುಮಾರು ನೂರಿನ್ನೂರು ವರುಷಗಳಷ್ಟು ಪುರಾತನವಾದ ಹುತ್ತ ಇದಾಗಿದೆ ಎಂದು ಅಂದಾಜಿಸಲಾಗಿದೆ. ಪ್ರತೀ ದಿನವೂ ಇದು ಒಂದಷ್ಟು ಎತ್ತರಕ್ಕೆ ಬೆಳೆಯುತ್ತದೆ.

ಇಲ್ಲಿ ಈ ಹುತ್ತಕ್ಕೆ ಪೂಜೆ ನಡೆಯುತ್ತದೆ. ಕಷ್ಟ ಕಾರ್ಪಣ್ಯಗಳನ್ನು ಜನ ಈ ಹುತ್ತದ ಮುಂದೆ ತಂದು ಅರುಹುತ್ತಾರೆ. ಅನೇಕ ವ್ಯಾಧಿಗಳಿಗೆ ಈ ಹುತ್ತ ಪರಿಹಾರ ನೀಡಿದೆ. ಈ ಬಗ್ಗೆ ಊರವರು ಖುಷಿಯಿಂದಲೇ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಇಷ್ಟೇನಾ ಎಂಬ ಮಾಹಿತಿ ಭಾವನೆ ನಿಮ್ಮೆದುರು ಬರಬಹುದು...ಆದರೆ ಇನ್ನೂ ಒಂದು ಅಚ್ಚರಿ ಆ ಹುತ್ತದಲ್ಲಿದೆ. ಹೌದು...ಅದೇ ನೋಡಿ ... ಹುತ್ತವೇ ಇಲ್ಲಿ ತಲೆತೂಗುತ್ತದೆ...ಅದೂ ಹಾವಿನಂತೆ ತಲೆ ಅಲ್ಲಾಡಿಸುತ್ತದೆ...ಇದು ಅಚ್ಚರಿಯೂ ಹೌದು...ನಂಬಲು ಅಸಾಧ್ಯವಾದ ಮಾತು ಕೂಡಾ ಹೌದು...
ಇಲ್ಲಿ ಪ್ರತೀವರುಷ ದೀಪಾವಳಿಯ ಸಂದರ್ಭದಲ್ಲಿ (ದೀಪಾವಳಿಯ ನಂತರದ ಹುಣ್ಣಿಮೆ ದಿನ ವಿಶೇಷ ಪೂಜೆ)ಪೂಜೆ ನಡೆಯುತ್ತದೆ. ಈ ಸಂದರ್ಭದಲ್ಲಿ ಬೆಳಗಲಾಗುವ ಮಂಗಳಾರತಿಯ ಸಂದರ್ಭದಲ್ಲಿ ಹುತ್ತ ತಲೆತೂಗುತ್ತದೆ. ಇದಕ್ಕೆ ಈ ಊರ ಮಂದಿಯೇ ಸಾಕ್ಷಿಯಾಗಿದ್ದಾರೆ. ಅಂತೂ ಇಲ್ಲಿ ಹುತ್ತ ತಲೆದೂಗುತ್ತದೆ. ಅದೂ ಪೂಜೆಯಾದಬಳಿಕ ಮಂಗಳಾರತಿಯ ಸಂದರ್ಭದಲ್ಲಿ. ಇಂತಹ ಅಚ್ಚರಿ ನಿಜಕ್ಕೂ ಎಲ್ಲರಿಗೂ ಕುತೂಹಲ ತಂದೊಡ್ಡುತ್ತಿದೆ. ಆದರೂ ನಂಬಲೇ ಬೇಕಾದಂತಿದೆ....

2 comments:

Anonymous said...

very nice story. thanku ekanasu
bk, bangalore

Anonymous said...

ತುಂಬಾ ಮಾಹಿತಿಪೂರ್ಣ ವರದಿಗಳು ಈ ಕನಸು.ಕಾಂ ನಲ್ಲಿ ಬರುತ್ತಿದೆ. ಧನ್ಯವಾದಗಳು. ಇನ್ನಷ್ಟು ಮಾಹಿತಿಯುಕ್ತ ವರದಿಗಳು ಮೂಡಿಬರಲಿ.
ಚೈತ್ರ, ಬೆಂಗಳೂರು.

Post a Comment