ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ
ಮಲ್ಲೇಶ್ವರ ಜನರ ಬದುಕು ನರಕಮಾಡಿದ ಫ್ಲೋರೈಡ್ ನೀರು
ವಿಶೇಷ ವರದಿ: ಶ್ರೀಪತಿ ಹೆಗಡೆ ಹಕ್ಲಾಡಿ
ಚಿಕ್ಕಮಗಳೂರು : ಮಲ್ಲೇಶ್ವರ ಎಂಬ ಪುಟ್ಟ ಊರಲ್ಲಿ ಹೆಚ್ಚಿನವರು ಅನಾರೋಗ್ಯ ಪೀಡಿತರು! ಜೀವಜಲ ವಿಷವಾಗಿ ಪರಿಣಮಿಸಿದರೆ ಬದುಕು ಹಳ್ಳಹತ್ತುತ್ತದೆ ಎಂಬುದಕ್ಕೆ ಚಿಕ್ಕ ಹಳ್ಳಿ ಜ್ವಲಂತ ಸಾಕ್ಷಿ.ಹಾಲುಗಲ್ಲದ ಹಸುಳೆ ಮೈಯಲ್ಲಿ ರಕ್ತದ ಛಾಯೆಯಿಲ್ಲ. ವಯೋವೃದ್ಧರು ಎದ್ದು ನಿಲ್ಲುವ ತಾಕತ್ತು ಕಳೆದುಕೊಂಡಿದ್ದಾರೆ. ಪುರಷರು ಪರುಷತ್ವ ಕಳೆದುಕೊಳ್ಳುತ್ತಿದ್ದಾರೆ. ಮಹಿಳೆಯರ ಸಂತಾನ ಶಕ್ತಿ ಕ್ಷೀಣಿಸುತ್ತಿದೆ. ಅಬಾಲವೃದ್ಧರಾದಿಯಾಗಿ ಒಂದೆಲ್ಲಾ ಒಂದು ಸೀಕಿನಿಂದ ನರಳುತ್ತಿದ್ದಾರೆ. ಅಂಗವಿಕಲತೆ, ರಕ್ತಹೀನತೆ,ಜಲಂಧರ ಹಾಗೂ ಮೈಬೀಗುವಿಕೆ ಮತ್ತು ಗಳಗಂಡದಂತಹ ಮಾರಕ ರೋಗದಿಂದ ಮಲ್ಲೇಶ್ವರ ನಿವಾಸಿಗಳು ಬದುಕು ನರಕ. ರೋಗಬಾಧೆಯಿಂದ ಇಪ್ಪತ್ತಕ್ಕೂ ಮಿಕ್ಕ ಜನರು ಇಹಲೋಕ ತ್ಯಜಿಸಿದ್ದಾರೆ. ಮತ್ತೆ ಕೆಲವರು ದಿನ ಎಣಿಸುತ್ತಿದ್ದಾರೆ. ಜೀವಜಲ ವಿಷವಾದರೆ ಏನಾಗುತ್ತದೆ ಎಂಬದಕ್ಕೆ ಮಲ್ಲೇಶ್ವರ ಚಿಕ್ಕ ಸ್ಯಾಂಪಲ್.ಮಲ್ಲೇಶ್ವರಕ್ಕೆ ಅಂಟಿದ ಶಾಪ

ಚಿಕ್ಕಮಗಳೂರು ಜಿಲ್ಲೆ, ಕಡೂರು ತಾಲೂಕಿನಲ್ಲಿರುವ ಮಲ್ಲೇಶ್ವರ ಎಂಬ ಪುಟ್ಟ ಊರಿಗೆ ಗಣಿಗಾರಿಕೆಯೇ ಮೃತ್ಯು ಕೂಪವಾಗಿದೆ. ಸುಮಾರು ಇನ್ನೂರು ಮನೆಗಳ ಸಂಚಯ ಮಲ್ಲೇಶ್ವರ. ಮಕ್ಕಳು, ಮರಿಗಳು ಸೇರಿ ಒಂದೂ ಸಾವಿರಕ್ಕೂ ಮಿಕ್ಕ ಕ್ರೌಡ್ ಇದೆ. ದೇವರು, ದಿಂಡಿರು, ಜಾತ್ರೆ ಮುಂತಾದ ನಂಬಿಕೆ ಆಚರಣೆಯಲ್ಲಿದೆ. ಮಲ್ಲೇಶ್ವರ ಜಾತ್ರೆ ಕಡೂರು ತಾಲೂಕಿಗೆ ಫೇಮಸ್.

ಇಲ್ಲಿನ ನಿವಾಸಿಗಳಲ್ಲಿ ಕೃಷಿಕರಿದ್ದಾರೆ. ಕೃಷಿ ಕಾರ್ಮಿಕರಾಗಿ ದುಡಿಯುವವರೂ ಇದ್ದಾರೆ. ಕೂಲಿ ಮಾಡಿ ಸಂಸಾರದ ನೊಗಕ್ಕೆ ಹೆಗಲುಕೊಟ್ಟವರಿ ಗೇನು ಕಡಿಮೆಯಿಲ್ಲ. ತರಕಾರಿ ಮಾರಿ ಜೀವಿಸುವ ಕಷ್ಟ ಜೀವಿಗಳೂ ಇದ್ದಾರೆ. ಕಷ್ಟದಲ್ಲೇ ನೆಮ್ಮದಿ ಕಾಣುತ್ತಿದ್ದ ಮಲ್ಲೇಶ್ವರ ನಿವಾಸಿಗಳ ಬದುಕಿಗೆ ಕೊಳ್ಳಿಯಿಟ್ಟಿದ್ದು ಗಣಿಗಾರಿಕೆ ಎಂಬ ರಕ್ಕಸ!

ಗಣಿಗಾರಿಕೆ ಆರಂಭವಾಗುವುದಕ್ಕೂ ಹಿಂದೆ ಇಲ್ಲಿಯ ನಿವಾಸಿಗಳು ಮಾಮೂಲಾಗಿದ್ದರು. ಗಣಿಗಾರಿಕೆ ಆರಂಭವಾದ ನಂತರದ ದಿನಗಳಲ್ಲಿ ಇಲ್ಲಿನ ನಿವಾಸಿಗಳಲ್ಲಿ ಹಂತಹಂತವಾಗಿ ಅನಾರೋಗ್ಯ ಬಾಧೆ ಕಾಣಿಸಿಕೊಳ್ಳ ತೊಡಗಿದೆ. ಪ್ರಸಕ್ತ ಕಾಲಘಟ್ಟದಲ್ಲಿ ಮಲ್ಲೇಶ್ವರ ನಿವಾಸಿಗಳಲ್ಲಿ ಶೇ.80 ರಷ್ಟು ಅನಾರೋಗ್ಯದಿಂದ ನರಳುತ್ತಿದ್ದಾರೆ. ಕಲ್ಲು ಕೋರೆಯಲ್ಲಿ ನಡೆಸುವ ಸ್ಪೋಟ ಮತ್ತು ಬಳಸುವ ರಾಸಾಯನಿಕ ಪದಾರ್ಥ ಹಾಗೂ ಧೂಳು ಜೀವಜಲವನ್ನು ವಿಷಜಲವಾಗಿ ಪರಿವರ್ತಿಸಿದೆ. ಫ್ಲೋರೈಡ್ ನೀರು ಮಾನವ ಶರೀಕರದ ಮೇಲೆ ಒಂದೆಲ್ಲಾ ಒಂದು ಪರಿಣಾಮ ಉಂಟು ಮಾಡುತ್ತಿದೆ.

ಗಣಿಗಾರಿಕೆ ಶುರು

ಮಲ್ಲೇಶ್ವರದಲ್ಲಿ ಸುಮಾರು ಇಪ್ಪತ್ತು ವರ್ಷದಿಂದ ಕಪ್ಪು ಶಿಲೆಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಆರಂಭದಲ್ಲಿ ಇಲ್ಲಿನ ನಿವಾಸಿಗಳು ಗಣಿಗಾರಿಕೆ ವಿರುದ್ಧ ದ್ವನಿ ಎತ್ತಿದ್ದರು. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಬದ್ಧತೆ ಕೊರೆತೆಯಿಂದ ಗಣಿಗಾರಿಕೆ ಚಾಲೂ ಆಯಿತು. ಅಂದಿನಿಂದ ಇಂದಿನವರೆಗೆ ಗಣಿಗಾರಿಕೆ ಬೇಡಾ ಅಂತ ಜನರು ಗಂಟಲು ದೊಡ್ಡದು ಮಾಡುತ್ತಾ ಬಂದಿದ್ದಾರೆ. ಪ್ರತಿಫಲ ಮಾತ್ರ ಶೂನ್ಯ. ಜನಪ್ರತಿನಿಧಿಗಳು ಗಣಿಗಾರಿಕೆಯಲ್ಲಿ ರಾಜಕೀಯ ಮಾಡಿದರೇ ಹೊರತು ನಮಗೆ ನ್ಯಾಯ ಒದಗಿಸಿಲ್ಲ ಎಂದು ಇಲ್ಲಿನ ನಿವಾಸಿಗಳು ಆರೋಪಿಸುತ್ತಾರೆ.

ಮಲ್ಲೇಶ್ವರ ಗಣಿಗಾರಿಕೆಯಿಂದ ಪರಿಸರದ ಮನೆಗಳೂ ಬರ್ಕತ್ತಾಗಿಲ್ಲ. ಗಣಿಗಾರಿಕೆ ಸ್ಪೋಟಕ್ಕೆ ಮನೆಗಳ ಗೋಡೆ ಬಿರುಕು ಬಿಟ್ಟಿದೆ. ಒಮ್ಮೊ ಮ್ಮೆ ಹೆಂಚುಗಳು ಕಳಚಿಕೊಳ್ಳುವುದುಂಟು ಎಂದು ಇಲ್ಲಿನ ನಿವಾಸಿಗಳು ಅವಲತ್ತು ಕೊಳ್ಳುತ್ತಾರೆ. ಸ್ಪೋಟದ ಶಬ್ಧದಿಂದ ಕೆಲವರ ಕಿವಿ ಕೂಡಾ ಮಂದವಾಗಿದೆ ಎಂದು ಹೇಳುವುದನ್ನು ಅವರು ಮರೆಯುವುದಿಲ್ಲ. ಬೆನ್ನುಬೆನ್ನಿಗೆ ನಡೆಯುವ ಸ್ಪೋಟದಿಂದ ಜನ, ಜಾನುವಾರು, ಪಶು, ಪಕ್ಷಿಗಳು ಪಥರಗುಟ್ಟಿಹೋಗಿವೆ. ಇಷ್ಟೆಲ್ಲಾ ಅನಾಹುತ ಸಂಭವಿಸಿದರೂ ಯಾರು ನಮ್ಮ ನೆರೆವಿಗೆ ಬರೋದಿಲ್ಲ ಎಂಬುದು ಇಲ್ಲಿಯ ವಾಸಿಗಳ ಅಳಲು.

ನಿರಂತರ ಗಣಿಗಾರಿಕೆಯಿಂದ ಏಳುವ ದೂಳು ಕೆರ, ಕೊಳ್ಳ, ಮರಗಿಡದ ಮೇಲೆ ಹೋಗಿ ಕೂರುತ್ತಿದೆ. ದೂಳು ಕೂರುವುದರಿಂದ ದ್ಯುತಿ ಸಂಷ್ಲೇಶಣಾ ಪ್ರಕ್ರಿಯೆ ನಿಂತು ಮರಮಟ್ಟುಗಳು ಒಣಗುತ್ತಿದೆ. ನೀರಿನ ಮರು ಪೂರಣಕ್ಕೆ ಧಕ್ಕೆ ಬಂದಿದೆ. ದೂಳು ಕರೆ, ಹಳ್ಳ ಕಳವೆ ಬಾವಿಗಳ ಮೂಲಕ ಜನರ ಹೊಟ್ಟೆ ಸೇರುತ್ತಿದೆ. ಜಾನುವಾರುಗಳು ಇದ್ದಕ್ಕಿದಂತೆ ಸಾಯುತ್ತಿವೆ. ತೊಟ್ಟಿ ಅಥವಾ ಕೊಡಪಾನದಲ್ಲಿ ನೀರು ಶೇಖರಿಸಿಟ್ಟರೆ ಸುಣ್ಣದಂತೆ ನೀರು ಹೆಪ್ಪುಗಟ್ಟುತ್ತದೆ. ಈ ನೀರು ಸೇವಿಸದ ಜನರ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತಿದೆ. ನೀರಿನ ರುಚಿ ಕೂಡಾ ಒಗರು.

ನೀರು ಫ್ಲೋರೈಡ್

ಮಲ್ಲೇಶ್ವರ ಜನರ ಆರೋಗ್ಯ ಪರೀಕ್ಷಿಸಿದ ಸ್ಥಳೀಯ ಆರೋಗ್ಯಾಧಿಕಾರಿ ಪರಿಸರದ ನೀರು ಕುಡಿಯದಂತೆ ಶಿಪಾರಸ್ಸು ಮಾಡಿದ್ದಾರೆ. ನೀರಿನಲ್ಲಿ ಫ್ಲೋರೈಡ್ ಸೇರಿರುವುದೇ ಈ ಎಲ್ಲಾ ಅನಾರೋಗ್ಯಕ್ಕೆ ಕಾರಣ ಎಂದು ಅವರು ಷರಾ ಬರೆದಿದ್ದಾರೆ. ಆದರೆ ಇಲ್ಲಿನ ವಾಸಿಗಳಿಗೆ ಈ ನೀರು ಕುಡಿಯದೆ ವಿಧಿಯಿಲ್ಲ.

ಊರವರು ಏನು ಹೇಳುತ್ತಾರೆ

ಗಣಿಗಾರಿಕೆ ಬೇಡಾ ಎಂದರು ನಮ್ಮ ಮಾತಿಗೆ ಕಿಮ್ಮತ್ತು ಕೊಡಲಿಲ್ಲ. ಪ್ಲೋರೈಡ್ ನೀರು ಕುಡಿದು ಸಾಯೋದು ನಮ್ಮ ಹಣೆ ಮೇಲೆ ಬರೆದಿದೆ ಅಂತ ಕಾಣುತ್ತೆ. ಈಗಾಲೇ ಒಂದಿಷ್ಟು ಜನರನ್ನು ಕಳೆದುಕೊಂಡಿದ್ದಾಗಿದೆ. ಮತ್ತೆಷ್ಟು ಜನರನ್ನು ಕಳದೆಕೊಳ್ಳಬೇಕೋ ಗೊತ್ತಿಲ್ಲ.

ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ನಮ್ಮ ತೊಂದರೆ ತಾಪಾತ್ರೆಯ ವಿವರಿಸಿದ್ದಾಗಿದೆ. ಅವರು ತಿಪ್ಪೇ ಸಾರುತ್ತಲೇ ಬಂದಿದ್ದಾರೆ. ಮಲ್ಲೇಶ್ವರಕ್ಕೆ ಕುಡಿಯುವ ನೀರು ಬೇರೆಕಡೆಯಿಂದ ಒದಗಿಸಿ ಅಂದರೂ ಕೇಳುತ್ತಿಲ್ಲ. ನಮಗೂ ಹೇಳಿ ಸಾಕಾಗಿದೆ. ನಮ್ಮ ಸಮಸ್ಯೆಗೆ ಸ್ಪಂಧಿಸದಿದ್ದರೆ ಆಮರಣಾಂತ ಉಪವಾಸದಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಇಲ್ಲಿನ ನಿವಾಸಿಗಳು ಹೇಳುತ್ತಾರೆ. ಜನಪ್ರತಿ ನಿಧಿಗಳು ಇವರ ಕೂಗನ್ನ ಕೇಳಿಸಿಕೊಳ್ಳಬೇಕಷ್ಟೇ.

0 comments:

Post a Comment