ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ

ಭಾರತದ ನ್ಯಾಯಾಂಗವು ದೇಶದ ಇತರ ವ್ಯವಸ್ಥೆಗಳಂತಾಗಿರದೆ ಬಹುತೇಕ ಶುದ್ಧವೂ ಪ್ರಾಮಾಣಿಕವೂ ಶಿಸ್ತುಬದ್ಧವೂ ಆಗಿ ಉಳಿದುಕೊಂಡುಬಂದಿದೆ. ಪ್ರಶಾಂತ ತಿಳಿನೀರಿನಮೇಲೊಂದು ಪುಟ್ಟ ಕಲ್ಲು ಬಿದ್ದಂತೆ ಇದೀಗ ನ್ಯಾಯಮೂರ್ತಿಗಳಿಬ್ಬರ ನಡುವಣ ಸಂಘರ್ಷವು ನಮ್ಮ ಸುಂದರ ನ್ಯಾಯಾಂಗಕ್ಕೊಂದು ಕಪ್ಪುಚುಕ್ಕೆಯಾಗಿ ಕಾಡುವ ಲಕ್ಷಣಗಳು ಗೋಚರಿಸುತ್ತಿವೆ. ಸದ್ಯಕ್ಕೇನೋ ನ್ಯಾ.ಶೈಲೇಂದ್ರಕುಮಾರ್ ಅವರಿಗೆ ಸರ್ವೋಚ್ಛ ನ್ಯಾಯಾಲಯವು ಶಿಸ್ತಿನ ಪಾಠ ಬೋಧಿಸಿದೆ. ಆದರೆ, ಈ ಬೆಳವಣಿಗೆ ಇಷ್ಟಕ್ಕೇ ಸುಖಾಂತ್ಯ ಕಂಡೀತೆಂಬ ಭರವಸೆಯಿಲ್ಲ. ಏಕೆಂದರೆ, ಇಡೀ ಪ್ರಕರಣವು ಶಿಸ್ತು ಮತ್ತು ನಿಯಮ ಇವೆರಡರ ನಡುವಿನ ಕದನವಾಗಿದೆ.

ಸಾಮಾನ್ಯ ನಾಗರಿಕರಾದ ನಮಗೆ, ಶಿಸ್ತಿನ ವಿಷಯದಲ್ಲಿ ನ್ಯಾ.ದಿನಕರನ್ ಪರವಾದ ಸರ್ವೋಚ್ಛ ನ್ಯಾಯಾಲಯದ ಕ್ರಮ ಸರಿಯೆನ್ನಿಸಿದರೆ ನಿಯಮದ ವಿಷಯದಲ್ಲಿ ನ್ಯಾ.ಶೈಲೇಂದ್ರಕುಮಾರ್ ಕ್ರಮ ಸರಿಯೆನ್ನಿಸುತ್ತಿದೆ. ಶಿಸ್ತು ಹೆಚ್ಚು ಮುಖ್ಯವೋ, ನಿಯಮ ಹೆಚ್ಚು ಮುಖ್ಯವೋ ಎಂಬುದಿಲ್ಲಿ ಪ್ರಶ್ನೆ. ಈ ವಿಷಯದಲ್ಲಿ ನಮಗಿಂತ ಹೆಚ್ಚು ಪ್ರಾಜ್ಞರಾದ ನ್ಯಾಯಮೂರ್ತಿಗಳೇ ಒಟ್ಟಿಗೆ ಕುಳಿತು ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದನ್ನು ಸಾಮಾನ್ಯ ನಾಗರಿಕರಾದ ನಾವು ಅಪೇಕ್ಷಿಸುತ್ತೇವೆ.ನಮಗಂತೂ ಈ ಇಬ್ಬರು ನ್ಯಾಯಮೂರ್ತಿಗಳಮೇಲೂ ಗೌರವವಿದೆ. ನ್ಯಾಯದೇವತೆಯ ದೂತರು ಇವರು. ಆ ಪಾವಿತ್ರ್ಯವನ್ನು ಇವರೀರ್ವರೂ ಕಾಪಾಡಿಕೊಂಡು ಮುನ್ನಡೆಯುವರೆಂಬ ಭರವಸೆಯನ್ನು ನಾಗರಿಕರಾದ ನಾವೆಲ್ಲ ಹೊಂದಿದ್ದೇವೆ. ನಮ್ಮ ಈ ಭರವಸೆಯ ಮೇಲೆ ನ್ಯಾಯವ್ಯವಸ್ಥೆಯ ಬಗೆಗಿನ ನಮ್ಮ ಭರವಸೆ ನಿಂತಿದೆ.


ಎಚ್. ಆನಂದರಾಮ ಶಾಸ್ತ್ರೀ

0 comments:

Post a Comment