ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರಕಾರವಾರ : ಪಶ್ಚಿಮ ಘಟ್ಟಗಳ ಅರಣ್ಯಗಳು ಕ್ಷೀಣಿಸುತ್ತಿರುವಂತೆ ಅರಣ್ಯ ಅವಲಂಬಿತ ಹಲವಾರು ಪ್ರಾಣಿ ಪಕ್ಷಿಗಳು ಈಗಾಗಲೇ ವಿರಳಗೊಂಡಿದ್ದು ಕೆಲವು ಅಪಾಯದ ಹಾಗೂ ಅಳಿವಿನ ಅಂಚಿಗೆ ತಲುಪಿದ ನಿದರ್ಶನಗಳು ಸಾಕಷ್ಟಿವೆ. ಜೋಯಿಡಾ ತಾಲ್ಲೂಕಿನ ಶೇ.90 ರಷ್ಟು ಅರಣ್ಯ ಪ್ರದೇಶ ಐದಾರು ದಶಕಗಳ ಹಿಂದೆ ಘೋರ ದಂಡಕಾರಣ್ಯವಾಗಿತ್ತು. ಆದರೆ ಈಗ ಬಹುತೇಕ ಕಡೆ ಅರಣ್ಯ ಕಡಿಮೆಯಾಗಿದ್ದು ಪ್ರಾಣಿ-ಪಕ್ಷಿ ಹಾಗೂ ಕೆಲ ಸಸ್ಯ ಪ್ರಭೇದಗಳು ಸಹ ಕಡಿಮೆಯಾಗಿವೆ.

ಇದೇ ಹಿನ್ನೆಲೆಯಲ್ಲಿ ಅರಣ್ಯ ಪರಿಸರ ನಾಶ ಹಾಗೂ ಜೀವಿಗಳ ವಾಸಸ್ಥಾನಕ್ಕೆ ಧಕ್ಕೆಯಾದಾಗ ಅವುಗಳ ಸಂತತಿಯು ಸಹ ಕಡಿಮೆಯಾಗಿರುವುದಕ್ಕೆ ಇಂಗ್ಲೀಷಿನಲ್ಲಿ ಕರೆಯಲಾಗುವ ಲೆಸ್ಸರ್ ವೂಲಿ ಹಾರ್ಸ ಶೂ ಜಾತಿಯ ಬಾವಲಿಯು ನಿದರ್ಶನವಾಗಿದೆ.
ವೈಜ್ಞಾನಿಕವಾಗಿ ರ್ಹಿನಿಲೋಫಸ್ ಬೆಡ್ಡೋಮ್ ಎಂದು ಕರೆಯಲಾಗುವ (Rhinilophus beddome) ಈ ಬಾವಲಿಯನ್ನು ಸಾಮಾನ್ಯವಾಗಿ ಲೆಸ್ಸರ್ ವೂಲಿ ಹಾರ್ಸ ಶೂ (Lesser wooly horse shoe) ಎಂದು ಕರೆಯಲಾಗುತ್ತಿದೆ. ಭಾರತ ಹಾಗೂ ಶ್ರೀಲಂಕಾದಲ್ಲಿ ಹೇರಳವಾಗಿ ಕಂಡುಬರುವ ಈ ಬಾವಲಿಯ ಸಂಖ್ಯೆ ಕಳೆದ ಮೂರ್ನಾಲ್ಕು ದಶಕಗಳಿಂದ ಕಡಿಮೆಯಾಗುತ್ತಿದೆ. ಅಲ್ಲದೇ ತನ್ನ ಸುತ್ತಲಿನ ಪರಿಸರದ ಧಕ್ಕೆಗೆ ಅತೀ ಸೂಕ್ಷ್ಮತೆ ಹೊಂದಿರುವ ಈ ಬಾವಲಿ ಮಾನವನ ಸಂಪರ್ಕವಿರದ ಅರಣ್ಯದ ಗುಹೆ , ಕಲ್ಲು ಬಂಡೆಗಳ ಸಂದಿಗಳಲ್ಲಿ ಹಾಗೂ ಜನನಿಬಿಡ ಕತ್ತಲು ಪ್ರದೇಶಗಳಲ್ಲಿ ವಾಸಿಸುತ್ತಿವೆಯೆಂದು ಬಾವಲಿಯನ್ನು ಗುರುತಿಸಿರುವ ಬಾವಲಿ ತಜ್ಞರಾದ ದಾಂಡೇಲಿ ಅರಣ್ಯ ಜೀವಿ ಅಭಯಾರಣ್ಯದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿರುವ ಡಾ: ಸುನಿಲ ಪನ್ವಾರ ಅಭಿಪ್ರಾಯ ಪಡುತ್ತಾರೆ. ಡಾ: ಪನ್ವಾರ ಅವರು ಭಾರತೀಯ ಅರಣ್ಯ ಸೇವೆ ಸೇರುವ ಮೊದಲು ಬಾವಲಿಗಳ ಮೇಲೆ ಸಂಶೋಧನಾ ಪ್ರಬಂಧ ಮಂಡಿಸಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಅಲ್ಲದೇ ಇತ್ತೀಚೆಗೆ ಬಾವಲಿಗಳ ಕುರಿತಾಗಿ ಪುಸ್ತಕವೊಂದನ್ನು ಹೊರತಂದಿದ್ದಾರೆ.

ಈ ರ್ಹಿನಿಲೋಫಸ್ ಬಾವಲಿಗಳು ಗುಂಪಾಗಿ ಕಾಣುವುದು ಅತೀ ಅಪರೂಪದ ಸಂಗತಿ. ಜೋಡಿಯಾಗಿ ಅಥವಾ ಏಕಾಂಗಿಯಾಗಿ ಜೋತುಬೀಳುವ ಸಂದರ್ಭಗಳೇ ಇತ್ತೀಚಿಗೆ ಹೆಚ್ಚಾಗಿ ಕಾಣಸಿಗುತ್ತವೆ. ಜೋಯಿಡಾ ತಾಲ್ಲೂಕಿನ ಡಿಗ್ಗಿ ಅರಣ್ಯ ಪ್ರದೇಶದಲ್ಲಿ ಸೆಂಟರ್ ಫಾರ್ ಗ್ರೀನ್ ಅರ್ಥ ಸದಸ್ಯರು ಚಾರಣ ಕೈಕೊಂಡಾಗ ಈ ಬಾವಲಿಯನ್ನು ಕಂಡು ಹಿಡಿದು ಇದರ ವೈಜ್ಞಾನಿಕ ವಿಶ್ಲೇಷಣೆಗಾಗಿ ಡಾ: ಸುನಿಲ ಪನ್ವಾರ ಅವರನ್ನು ಸಂಪರ್ಕಿಸಿದ್ದರು. ಈ ಬಾವಲಿಯ ಮುಖದ ಆಕಾರ ವಿಚಿತ್ರವಾಗಿರುವುದು ವಿಶೇಷ.

0 comments:

Post a Comment