ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಮಂಗಳೂರು/ಬೆಂಗಳೂರು: ಜೂನ್ ತಿಂಗಳು ಪ್ರಾರಂಭಗೊಂಡು 3ದಿನ ಸಂದರೂ ಮುಂಗಾರಿನ ಮುನ್ನುಡಿ ಪ್ರಾರಂಭಗೊಂಡಿಲ್ಲ. ಕೃಷಿಕರು ಆಗಸದತ್ತ ಮುಖಮಾಡುವಂತಾಗಿದೆ. ಏತನ್ಮಧ್ಯೆ ಕೆಲವೆಡೆಗಳಲ್ಲಿ ಮುಂಗಾರಿನ ಮುನ್ನುಡಿಯಾದ ಬಗ್ಗೆ ತಿಳಿದು ಬಂದಿದೆ. ಬೆಂಗಳೂರಿನಲ್ಲಿ ಸೂರ್ಯಕಂತುವ ವೇಳೆ ಆಲಿಕಲ್ಲು ಸಹಿತ ಮಳೆಯಾಗಿ ಇಳೆಗೆ ತಂಪಾಗಿದೆ. ಇತ್ತ ದಕ್ಷಿಣ ಕನ್ನಡದ ಕೆಲವಡೆಗಳಲ್ಲಿ ಮಧ್ಯಾಹ್ನದ ವೇಳೆಗೆ ಭಾರೀ ಗುಡುಗು ಸಹಿತ ಮಳೆಯಾಗಿದೆ. ಗಾಳಿ,ಗುಡುಗು, ಮಿಂಚುಗಳಿಂದ ಕೂಡಿದ ಮಳೆ ಸಂಜೆಯ ತನಕ ಭರದಿಂದ ಸುರಿದಿದ್ದು ಇಳೆಗೆ ತಂಪೆರೆದಿದೆ. ಕೃಷಿಕರ ಮೊಗದಲ್ಲಿ ಸಂತಸ ತರಿಸಿದೆ. ಆದರೆ ರಾತ್ರಿಯ ವೇಳೆಗೆ ಮಳೆಯ ಛಾಯೆಯೂ ಇಲ್ಲದಂತಾಗಿದೆ. ಒಟ್ಟಿನಲ್ಲಿ ಮುಂಗಾರು ತನ್ನ ಎಂದಿನ ಛಾಪು ಮೂಡಿಸಿದ್ದು ಕಂಡುಬಂದಿಲ್ಲ.

0 comments:

Post a Comment