ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಕಾ.ವಾ.ಆಚಾರ್ಯ ಶಿರ್ವ ಇವರು ಹುಟ್ಟಿದ್ದು ಕಾಸರಗೋಡಿನಲ್ಲಿ. ತಂದೆ ಅಪ್ಪಣ್ಣಾಚಾರ್ಯ ಖ್ಯಾತ ವಾಸ್ತುಶಿಲ್ಪಿ. ತಾಯಿ ಲಕ್ಷ್ಮೀ ಜಾನಪದ ಹಾಡುಗಾರ್ತಿ.1954ರಲ್ಲಿ ಕಾಸರಗೋಡಿನ ಬೋರ್ಡ್ ಹೈಸ್ಕೂಲಿನಲ್ಲಿ ಮೆಟ್ರಿಕ್ಯುಲೇಶನ್ ಪಾಸ್ ಮಾಡಿದರಲ್ಲದೆ ಆಗಿನ ಪ್ರಸಿದ್ಧ ಕಲಾ ಶಿಕ್ಷಕ ಕೆ.ವಿ.ನೋಂಡ ಇವರಲ್ಲಿ ಕಲಾಶಿಷ್ಯತ್ವ ಪಡೆದುಕೊಂಡರು. ಮದರಾಸು ಸರಕಾರದ ಡ್ರಾಯಿಂಗ್ ಹೈಯರ್ ಗ್ರೇಡ್ ಪರೀಕ್ಷೆಯಲ್ಲಿ ಪ್ರಥಮ ಬಾರಿಯೇ ಉತ್ತೀರ್ಣಗೊಂಡರು. 1956ರಿಂದ ಶಿರ್ವ ಹಿಂದೂ ಪ್ರೌಢಶಾಲೆಯಲ್ಲಿ ಕಲಾಧ್ಯಾಪಕರಾಗಿ 1995ರ ತನಕ ಸೇವೆ ಸಲ್ಲಿಸಿದರು. ಕಲಾ ಪ್ರದರ್ಶನ,ಸಾಹಿತ್ಯ ಚಟುವಟಿಕೆ, ನಾಟಕೋತ್ಸವಗಳನ್ನು ನಡೆಸಿದ್ದಾರೆ. ಶಾಲಾ ವಾರ್ಷಿಕೋತ್ಸವಗಳಲ್ಲಿ ಕಾ.ವಾ.ಆಚಾರ್ಯರದ್ದು ಪ್ರಮುಖ ಪಾತ್ರ. ನಾಟಕ ರಚನೆ, ನಿರ್ದೇಶನದಲ್ಲಿ ತೊಡಗಿಸಿಕೊಂಡವರು. ಚಿತ್ರಕಲೆ, ವ್ಯಂಗ್ಯಚಿತ್ರ, ಕಲಾವಿದರ ಪರಿಚಯ, ನಗೆಬರಹ ಹೀಗೆ ನೂರಕ್ಕೂ ಅಧಿಕ ಲೇಖನ ಅಧಿಕ ಲೇಖನಗಳು ಉಡುಪಿಯ ರಾಯಭಾರಿ ನವಭಾರತ, ಉದಯವಾಣಿ, ಪ್ರಜಾವಾಣಿ, ಸುಧಾ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.7ಚಿಕ್ಕ ಕಥಾ ಸಂಕಲನ, ಕಾದಂಬರಿ, ರಾಜ್ಯ ಶಿಲ್ಪ ಕಲಾ ಅಕಾಡೆಮಿಗಾಗಿ ಶಿಲ್ಪಿ ಶ್ಯಾಮರಾಯ ಆಚಾರ್ಯ, ವಿಶ್ವಕರ್ಮ ಸಂಸ್ಕೃತಿ ಭವನ ವಿಶ್ವಕರ್ಮ ಮೊದಲಾದ ಕೃತಿಗಳೂ ಪ್ರಕಟಗೊಂಡಿವೆ.
ಅದೆಷ್ಟೋ ಶಿಷ್ಯರ ಬದುಕಿಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಬೆಳಕಾದವರು ಕಾ.ವಾ.ಆಚಾರ್ಯ. ಆರ್ಥಿಕವಾಗಿಯೂ ಸಹಾಯಮಾಡಿದವರು. ಜೀವನ ಮಾರ್ಗದರ್ಶಿಯೂ ಆದವರು. 1995ರಲ್ಲಿ ಕಾ.ವಾ.ಆಚಾರ್ಯರು ವೃತ್ತಿಸೇವೆಯಲ್ಲಿ ನಿವೃತ್ತರಾದಾಗ ಅವರ ಹಳೆ ವಿದ್ಯಾರ್ಥಿಗಳು ಸಾರ್ವಜನಿಕ ನಡೆಲಯಲ್ಲಿ ಒಂದು ಹಗಲು ರಾತ್ರಿ ಪೂರ್ತಿ ಕಾರ್ಯಕ್ರಮ ಏರ್ಪಡಿಸಿದ್ದಲ್ಲದೆ ಸನ್ಮಾನಿಸಿ 1ಲಕ್ಷಕ್ಕೂ ಅಧಿಕ ಗೌರವಧನ ಸಮರ್ಪಿಸಿದ್ದು ಪ್ರಾಯ: ಕರಾವಳಿಯ ಕಲಾಶಿಕ್ಷಣದ ಇತಿಹಾಸದಲ್ಲೇ ಅವಿಸ್ಮರಣೀಯ.

ಪ್ರದರ್ಶನ:
ಕ.ವಾ.ಆಚರಾರ್ಯರ ಕಲಾಕೃತಿಗಳ ಪ್ರದರ್ಶನ ಜೂನ್ 4ರಂದು ಸಂಜೆ 5ಕ್ಕೆ ಮಂಗಳೂರಿನ ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ ನಡೆಯಲಿದೆ. ಉದ್ಘಾಟನೆಯನ್ನು ಡಾ.ಎಂ.ಮೋಹನ ಆಳ್ವ ನಡೆಸಲಿದ್ದಾರೆ. ಅಧ್ಯಕ್ಷತೆಯನ್ನು ಜಿ.ರಾಮಕೃಷ್ಣ ಆಚಾರ್ ವಹಿಸಲಿದ್ದಾರೆ.
ಕಲಾ ಪ್ರದರ್ಶನ ಜೂನ್ 6ರ ತನಕ ನಡೆಯಲಿದೆ. ಆಸಕ್ತರು ಪಾಲ್ಗೊಳ್ಳಬಹುದು.

ಬರಹ: ಧನಂಜಯ ಮುಡಬಿದಿರೆ.
ಪ್ರತಿನಿಧಿ, ಉದಯವಾಣಿ.

0 comments:

Post a Comment