ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
4:10 PM

ಬಿಸಿ ಬಿಸಿ...

Posted by ekanasu

ರಾಜ್ಯ - ರಾಷ್ಟ್ರ

ಮಂಗಳೂರು: ಜೂನ್ ತಿಂಗಳೆಂದೇ ಗೊತ್ತಾಗುತ್ತಿಲ್ಲ. ಕರಾವಳಿಯಲ್ಲಿ ಇನ್ನೂ ಸುಡುಬಿಸಿಲು. ಜೂನ್ ತಿಂಗಳ ಮುಂಗಾರು ಮಳೆ ಮಾಯವಾಗಿದೆ. ತುಂತುರು ಮಳೆಹನಿ ಕಾಣುತ್ತಿಲ್ಲ. ಬದಲಾಗಿ ಬಿಸಿಲ ಝಳ ಹೆಚ್ಚಾಗಿದೆ. ಮನೆಯಿಂದ ಹೊರಗಿಳಿಯಲು ಸಾಧ್ಯವಾಗದಂತಹ ಸುಡುಬಿಸಿಲು... ಆ ರೀತಿಯಲ್ಲಿ ಬಿಸಿಲು ಅತಿಯಾಗಿದೆ.
ಜೂನ್ ಬಂತೆಂದರೆ ಮಳೆ ಗ್ಯಾರಂಟಿ ಎಂಬ ಕಾಲವೊಂದಿತ್ತು. ಆದರೆ ಈಗ ಜೂನ್ ತಿಂಗಳೆಂದೇನಲ್ಲ. ಮಳೆಗಾಲ ಮನಬಂದಂತೆ ಎಂಬಂತಾಗುತ್ತಿದೆ. ಮಾರ್ಚ್, ಎಪ್ರಿಲ್, ಮೇ ತಿಂಗಳಲ್ಲೂ ಮಳೆ ಧಾರಾಕಾರವಾಗಿ ಸುರಿಯುತ್ತದೆ. ಆದರೆ ಈ ಬಾರಿ ಮಳೆ ಏಪ್ರಿಲ್ , ಮೇ ತಿಂಗಳಲ್ಲಿ ಸುರಿದಿದೆಯಾದರೂ ಇದೀಗ ಬಿಸಿಲ ಝಳ ಮಾತ್ರ ತೀವ್ರರೀತಿಯಲ್ಲಿ ಏರಿಕೆಯಾಗಿದೆ. ಜನತೆ ಕಂಗೆಟ್ಟಿದ್ದಾರೆ. ಕೃಷಿಕರು ಕೃಷಿಕಾರ್ಯಕ್ಕೆ ಮಳೆರಾಯನ ಆಗಮನಕ್ಕೆ ಕಾಯುತ್ತಿದ್ದಾರೆ.

1 comments:

ಮಿಥುನ said...

ಬಿಸಿಗೆ ಎಂಆರ್ಪಿಎಲ್ ನಾಗಾರ್ಜುನ, ಎಂಸಿಎಫ್, ಬಿಎಸ್ಎಫ್ಗಳಂತಹವುಗಳ ಕೊಡುಗೆಯೂ ಸಾಕಷ್ಟಿದೆ.

Post a Comment