ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಮಂಗಳೂರು: ಕಡಬ ಸುತ್ತಮುತ್ತಲಿನ ಪರಿಸರದಲ್ಲಿ ಮೇ 30ರಿಂದ ಜೂನ್ 3ರವರೆಗೆ 139 ಜ್ವರಪೀಡಿತರು ಚಿಕಿತ್ಸೆ ಪಡೆದಿದ್ದು, ಇವರಿಗೆ ವೈರಲ್ ಜ್ವರ ಎಂದು ಜಿಲ್ಲಾ ಕುಟುಂಬ ಕಲ್ಯಾಣ ಮತ್ತು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.ಜೂನ್ 3ರಂದು ಈ ಸಂಬಂಧ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ 122 ಔಟ್ ಪೇಷಂಟ್ ಗಳಲ್ಲಿ 45 ಜನರಿಗೆ ಶೀತ ಜ್ವರವಿರುವುದು ಪತ್ತೆಯಾಗಿದೆ. ಇವರಲ್ಲಿ 36 ಜನರನ್ನು ರಕ್ತ ಪರೀಕ್ಷೆಗೆ ಒಳಪಡಿಸಿದಾಗ ಮಲೇರಿಯಾ ನೆಗೆಟಿವ್ ವರದಿಯಾಗಿದೆ. ಟೈಫಾಯ್ಡ್ ಗುಣಲಕ್ಷಣ ಒಬ್ಬರಲ್ಲಿ ಪತ್ತೆಯಾಗಿದೆ. ಕಡಬದ 8 ಸಬ್ ಸೆಂಟರ್ ನಲ್ಲಿ ಎರಡು ಕಡೆ ಮಾತ್ರ ಹುದ್ದೆ ಖಾಲಿ ಇದ್ದು, ಉಳಿದೆಡೆ ಅಗತ್ಯ ಸಿಬ್ಬಂದಿಗಳಿದ್ದಾರ ಎಂದು ಡಾ. ಜಗನ್ನಾಥ್ ತಿಳಿಸಿದರು.ಜ್ವರ ಲಕ್ಷಣದ ಬಗ್ಗೆ ಸ್ಥಳೀಯ ವೈದ್ಯಾಧಿಕಾರಿಗಳೊಂದಿಗೆ ಚರ್ಚಿಸಿದ್ದು, ಆಗಾಗ ಮಳೆ ಬರುತ್ತಿರುವುದರಿಂದ ಸೊಳ್ಳೆ ಉತ್ಪತ್ತಿ ತಾಣಗಳ ಅಭಿವೃದ್ಧಿಯಾಗುತ್ತಿದ್ದು, ಸೊಳ್ಳೆ ಉತ್ಪತ್ತಿ ತಡೆಯಲು ಕ್ರಮಕೈಗೊಳ್ಳಲಾಗುತ್ತಿದೆ ಎಂದರು. ಪ್ರಾಥಮಿಕ ಆರೋಗ್ಯ ಕೇಂದ್ರ, ಸಬ್ ಸೆಂಟರ್ ಮತ್ತು ಗ್ರಾಮೀಣ ಆರೋಗ್ಯ ಸಮಿತಿಗಳು ಸಂಯುಕ್ತವಾಗಿ ಕಾರ್ಯಾಚರಿಸಲು ಸೂಚನೆ ನೀಡಲಾಗಿದೆ ಎಂದರು.

ಅನಾರೋಗ್ಯ ಪೀಡಿತರಿಗೆ ಔಷಧಿ ಕೊರತೆ ಇಲ್ಲ ಎಂದ ಅವರು, ಮುಂಜಾಗ್ರತಾ ಕ್ರಮವಾಗಿ ಐಇಸಿ(ಮಾಹಿತಿ, ಶಿಕ್ಷಣ ಮತ್ತು ಸಂವಹನ) ಕಾರ್ಯಕ್ರಮಗಳನ್ನು ಬೇಸಿಕ್ ಹೆಲ್ತ್ ಎಜುಕೇಟರ್ಸ್ ಮುಖಾಂತರ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ. ಹಿರಿಯ ಆರೋಗ್ಯ ಸಹಾಯಕರಿಗೆ ಕೇಂದ್ರ ಸ್ಥಾನ ಬಿಡದಂತೆ ಹಾಗೂ ಪುತ್ತೂರು ತಾಲೂಕು ಆರೋಗ್ಯಾಧಿಕಾರಿಗಳಿಗೆ ಈ ಬಗ್ಗೆ ಹೆಚ್ಚಿನ ನಿಗಾ ವಹಿಸುವಂತೆ ಸೂಚಿಸಿದ್ದಾರೆ.
ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇಬ್ಬರು ಜ್ವರದಿಂದ ಬಳಲುತ್ತಿದ್ದು, ದಾಖಲಾಗಿದ್ದಾರೆ. ಬಿಳಿನೆಲೆ , ಕುಟ್ರುಪ್ಪಾಡಿ, ಸವಣೂರು, ಕಾಣಿಯೂರು, ಬಲ್ಯ, ಕೊಣಾಜೆ ಪರಿಸರದಲ್ಲಿ ವೈರಲ್ ಜ್ವರದಿಂದ ಜನರು ಬಳಲುತ್ತಿದ್ದಾರೆ. ಅನಾರೋಗ್ಯ ಪೀಡಿತರಿಗೆ ಶುಶ್ರೂಷೆ ನೀಡಲು ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ ಎಂದರು.

0 comments:

Post a Comment