ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಮೈಸೂರು:ಇಲ್ಲಿನ ಕೃಷ್ಣರಾಜನಗರ ತಾಲೂಕು ಹೆಬ್ಸೂರು ಗ್ರಾಮದ ಶ್ರೀ ಜಪ್ಯೇಶ್ವರ ಕ್ಷೇತ್ರ ಜಪದ ಕಟ್ಟೆಯಲ್ಲಿ ನೂತನ ಶಿಲಾಮಯ ದೇವಾಲಯದಲ್ಲಿ ಶ್ರೀ ಜಪ್ಯೇಶ್ವರ ಹಾಗೂ ಇತರ ದೇವತೆಗಳ ಪ್ರತಿಷ್ಠಾ ಮಹೋತ್ಸವ ಹಾಗೂ ಸಹಸ್ರಕುಂಭಾಭಿಷೇಕ ಜೂನ್ 17ರಿಂದ 21ರ ತನಕ ನಡೆಯಲಿದೆ. 17ರಂದು ಬೆಳಗ್ಗೆ 9ರಿಂದ ಗುರುಪ್ರಾರ್ಥನೆ, ಗಣಪತಿ ಪೂಜೆ, ಪುಣ್ಯಾಹವಾಚನ, ದೇವನಾಂದೀ, ಮಹಾಸಂಕಲ್ಪ, ಋತ್ವಿಗ್ವರಣೆ, ಮಂಟಪಸಂಸ್ಕಾರ, ಮಹಾಗಣಪತಿಹೋಮ, ಸಂಜೆ 6ರಿಂದ ಗೇಹಪರಿಗ್ರಹ,ಸ್ಥಾನಶುದ್ಧಿ, ಪ್ರಸಾದಶುದ್ಧಿ, ಸಪ್ತಶುದ್ಧಿ, ರಾಕ್ಷೋಘ್ನಹೋಮ, ವಾಸ್ತುಪೂಜಾ,ವಾಸ್ತುಹೋಮ,ಬಲಿ ನಡೆಯಲಿದೆ. ಬೆಳಗ್ಗೆ 11.30ಕ್ಕೆ ಸಭಾಕಾರ್ಯಕ್ರಮ ನಡೆಯಲಿದ್ದು ಪರಮಪೂಜ್ಯ ಶ್ರೀ ಶಂಕರಭಾರತೀ ಮಹಾಸ್ವಾಮಿಗಳು ಅನುಗ್ರಹವಚನ ನೀಡಲಿದ್ದಾರೆ. ಮುಖ್ಯಅಭ್ಯಾಗತರಾಗಿ ಎಚ್.ಡಿ.ದೇವೇಗೌಡ, ಹೆಚ್.ಡಿ.ಕುಮಾರಸ್ವಾಮಿ, ಎನ್.ಚೆಲುವರಾಯಸ್ವಾಮಿ, ಹೆಚ್.ವಿಶ್ವನಾಥ್, ಸಾ.ರಾ.ಮಹೇಶ್ ಭಾಗವಹಿಸಲಿದ್ದಾರೆ.18ರಂದು ಮಹಾರುದ್ರಾನುಷ್ಠಾನ ಪ್ರಾರಂಭಗೊಳ್ಳಲಿದೆ.19ರಂದು ಬೆಳಗ್ಗೆ 8.30ರಿಂದ ಸಮಷ್ಟೀಹೋಮ,ಸಂಜೆ 6ರಿಂದ ಗಣಪತ್ಯಾದಿ ದೇವತೆಗಳಲ್ಲಿ ಅಧಿವಾಸಾದಿ ಪೂಜೆ, ತತ್ಸಂಬಂಧ ಹೋಮಗಳು ನಡೆಯಲಿವೆ.
20ರಂದು ಬೆಳಗ್ಗೆ 8.30ರಿಂದ ಶ್ರೀ ಶಂಕರಾಚಾರ್ಯ,ಶ್ರೀ ಶಾರದಾಪರಮೇಶ್ವರೀ ,ಶ್ರೀ ಹೋಗಾಂಬಾ,ನವಗ್ರಹ,ಆಂಜನೇಯ ಪ್ರತಿಷ್ಠಾಂಗ ಹೋಮ ಮತ್ತು ಪೂಜೆಗಳು ಬ್ರಹ್ಮಕಲಶಾಧಿವಾಸ , ಸಹಸ್ರಕುಂಭ ಮಂಡಲ ರಚನೆ, ಸಂಜೆ 6ರಿಂದ ಸಹಸ್ರಕುಂಭಸ್ಥಾಪನೆ,ಅಧಿವಾಸಪೂಜಾ, ತತ್ತ್ವಾವಾಹನೆ, ಮಹಾಪೂಜಾ,ದೀಪಾರಾಧನೆ,ಯಂತ್ರಸ್ಥಾಪನೆ,ರತ್ನನ್ಯಾಸ,ಅಷ್ಟಬಂಧ ಸಂಯೋಜನೆ ನಡೆಯಲಿದೆ.
ಅದೇ ದಿನ ಸಂಜೆ 5.30ಕ್ಕೆ ದಕ್ಷಿಣಾಮ್ನಾಯ ಶ್ರೀ ಶೃಂಗೇರಿ ಶಾರದಾಪೀಠಾದೀಶ್ವರ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ ದಿವ್ಯಾಗಮನ ಆಗಲಿದೆ. ರಾತ್ರಿ ಪರಮಪೂಜ್ಯ ಜಗದ್ಗುರುಗಳಿಂದ ಶ್ರೀ ಶಾರದಾಚಂದ್ರಮೌಳೀಶ್ವರರ ಪೂಜೆ.21ರಂದು ಬೆಳಗ್ಗೆ 7ಘಂಟೆಯಿಂದ ಪ್ರಾಣಪ್ರತಿಷ್ಠಾ, ಪರಮಪೂಜ್ಯ ಶಂಕರಾಚಾರ್ಯ ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ದಿವ್ಯ ಹಸ್ತಗಳಿಂದ ಶ್ರೀ ಜಪ್ಯೇಶ್ವರ ಹಾಗೂ ಇತರ ದೇವತೆಗಳ ಮಹಾಕುಂಭಾಭಿಷೇಕ, ಮಹಾಪೂಜೆ, ಮಂಗಲೋಪನ್ಯಾಸ ನಡೆಯಲಿದೆ. ಚತುರ್ವೇದ ಪಾರಾಯಣ, ಪ್ರಸ್ಥಾನತ್ರಯ ಶಾಂಕರ ಭಾಷ್ಯ ಪಾರಾಯಣ, ಸುಂದರಕಾಂಡಪಾರಾಯಣ ಸಮಾಪ್ತಿಯಾಗಲಿದೆ. ಮಧ್ಯಾಹ್ನ 12ಕ್ಕೆ ಪರಮಪೂಜ್ಯ ಜಗದ್ಗುರುಗಳ ದಿವ್ಯ ಉಪಸ್ಥಿತಿಯಲ್ಲಿ ಮಹಾರುದ್ರಹವನದ ಪೂರ್ಣಾಹುತಿ ,ತೀರ್ಥಪ್ರಸಾದ ವಿತರಣೆ ನಡೆಯಲಿವೆ.
ಸಂಜೆ 4.30ಕ್ಕೆ ನಡೆಯಲಿರುವ ಸಭಾಕಾರ್ಯಕ್ರಮದಲ್ಲಿ ದಕ್ಷಿಣಾಮ್ನಾಯ ಶ್ರೀ ಶೃಂಗೇರಿ ಶಾರದಾಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಭಾರತೀ ಮಹಾಸ್ವಾಮಿಗಳ ದಿವ್ಯ ಸಾನಿಧ್ಯ ಹಾಗೂ ಅನುಗ್ರಹವಚನ ನಡೆಯಲಿದೆ. ಯಡತೊರೆ ಶ್ರೀಯೋಗಾನಂದೇಶ್ವರ ಸರಸ್ವತೀ ಮಠಾಧೀಶ್ವರ ಪರಮಪೂಜ್ಯ ಶ್ರೀ ಶ್ರೀ ಶಂಕರಭಾರತೀ ಸ್ವಾಮಿಗಳವರು ಉಪಸ್ಥಿತರಿರುತ್ತಾರೆ.
ರಾಜ್ಯಪಾಲ ಹನ್ಸರಾಜ್ ಭಾರದ್ವಾಜ್ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾಗವಹಿಸಲಿದ್ದಾರೆ. ರಾತ್ರಿ 6.30ರಿಂದ ರಂಗಪೂಜೆ, ರಾತ್ರಿ ಪರಮಪೂಜ್ಯ ಶ್ರೀ ಶ್ರೀ ಜಗದ್ಗುರುಗಳವರಿಂದ ಶ್ರೀ ಶಾರದಾಚಂದ್ರಮೌಳೀಶ್ವರ ಪೂಜೆ ನಡೆಯಲಿವೆ.
22ರಂದು ಪರಮಪೂಜ್ಯ ಶ್ರೀ ಶ್ರೀ ಶಂಕರಭಾರತೀಸ್ವಾಮಿಗಳವರಿಂದ ಪರಮಪೂಜ್ಯ ಶ್ರೀ ಶ್ರೀ ಜಗದ್ಗುರುಗಳಿಗೆ ಪಾದಪೂಜೆ ನಡೆಯಲಿದೆ.

0 comments:

Post a Comment