ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ -ರಾಷ್ಟ್ರ
ವೇಣೂರು: ಕಳೆದ 48ವರುಷಗಳಿಂದ ಮಸ್ತಕಾಭಿಷೇಕವಿಲ್ಲದೆ ನಿಂತಿದ್ದ ವಿರಾಟ್ ಬಾಹುಬಲಿ ಸ್ವಾಮಿಯ ವಿಗ್ರಹಕ್ಕೆ ಫೆ.10.2000 ರಿಂದ 18ರ ತನಕ ಮಹಾಮಸ್ತಕಾಭಿಷೇಕ ಅಭೂತಪೂರ್ವವಾಗಿ ನಡೆದು ಇಡೀ ಭಕ್ತ ಸಾಗರದಲ್ಲಿ ಸಂಚಲನವುಂಟಾಗುವಂತಹ ಚಾರಿತ್ರಿಕ ಘಟನೆ ನಡೆದಿತ್ತು. ಇದೀಗ ಈಗ 10 ವರುಷಗಳು ಸಂದಿವೆ.ಇದೇ 2012ರಲ್ಲಿ ಮತ್ತೆ ವೇಣೂರ ಗೊಮ್ಮಟನಿಗೆ ಮಹಾಮಸ್ತಕಾಭಿಷೇಕ ಕಾರ್ಯಗಳು ನಡೆಯಲಿವೆ. ಇದಕ್ಕಾಗಿ ಈಗಾಗಲೇ ಪೂರ್ವಭಾವೀ ಕಾರ್ಯಗಳು ಭರದಿಂದ ಸಾಗುತ್ತಿವೆ. ಗೊಮ್ಮಟ ವಿಗ್ರಹದ ಸುರಕ್ಷಾ ಕಾರ್ಯಗಳ ಕಾರ್ಯ ಸದ್ಯದಲ್ಲೇ ನಡೆಯಲಿವೆ. ನಂತರ ಮಹಾಮಸ್ತಕಾಭಿಷೇಕದ ರೂಪುರೇಷೆಗಳ ಬಗ್ಗೆ ಸಮಾಲೋಚನೆಗಳು ನಡೆಯಲಿವೆ. ಹತ್ತು ವರುಷಗಳ ಹಿಂದೆ ಮಹಾಮಜ್ಜನ ನಡೆದ ಸಂದರ್ಭದಲ್ಲಿ ವೇಣೂರಿನಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆದಿದ್ದವು. ಇದೀಗ ಮಹಾಮಜ್ಜನದ ಹೆಸರಿನಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಬೇಕಾಗಿದೆ.

0 comments:

Post a Comment