ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ-ರಾಷ್ಟ್ರ

ಬೆಂಗಳೂರು: ಮಾವು ಹಣ್ಣುಗಳ ರಾಜ, ಇದು ರಾಜ್ಯದಲ್ಲಿ ಬೆಳೆಯುಲಾಗುತ್ತಿರುವ ಇತರೆಲ್ಲ ಹಣ್ಣುಗಳಿಗಿಂತ ಹೆಚ್ಚು ಜನಪ್ರಿಯ ಮತ್ತು ವಾಣಿಜ್ಯ ದೃಷ್ಟಿಯಿಂದ ಅತ್ಯಂತ ಹೆಚ್ಚು ಮಹತ್ವ ಪಡೆದ ಹಣ್ಣಾಗಿರುತ್ತದೆ. ರಾಜ್ಯದಲ್ಲಿ ಮಾವನ್ನು ಸುಮಾರು 1.4 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೇಸಾಯ ಮಾಡುತ್ತಿದ್ದು, ವಾರ್ಷಿಕ ಇಳುವರಿ ಸುಮಾರು 8 ಲಕ್ಷ ಟನ್ ಗಳು. ಈ ಹಣ್ಣುಗಳ ಮೌಲ್ಯ ಸುಮಾರು ರೂ 800 ಕೋಟಿಗಳಷ್ಟು. ಮಾವನ್ನು ತಿನ್ನುವ ಹಣ್ಣಿನಂತೆಯೂ ಹಾಗೂ ಸಂಸ್ಕರಿಸಿದ ವಿವಿಧ ಪದಾರ್ಥಗಳಾಗಿಯೂ ಬಳಸಲಾಗುತ್ತಿದೆ. ಸುಮಾರು 50 ಬಗೆಯ ಸಂಸ್ಕರಿಸಿದ ಪದಾರ್ಥಗಳನ್ನು ಮಾವಿನಿಂದ ಮಾಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಮಾವಿನ ಹಣ್ಣನ್ನು ವಿದೇಶಗಳಿಗೆ ರಫ್ತು ಮಾಡಿ ವಿದೇಶಿ ವಿನಿಮಯವನ್ನು ಸಹ ಗಳಿಸಲಾಗುತ್ತಿದೆ. ಮಧ್ಯ ಪ್ರಾಚ್ಯ ಯುರೋಪ್ ದೇಶಗಳಲ್ಲದೇ ಕಳೆದೆರಡು ವರ್ಷಗಳಿಂದ ಜಪಾನ್ ಮತ್ತು ಅಮೇರಿಕಗಳಿಗೂ ಸಹ ಮಾವಿನ ಹಣ್ಣುಗಳನ್ನು ರಫ್ತು ಮಾಡಲಾಗುತ್ತಿದೆ.
ಇಂತಹ ಮಹತ್ವ ಪೂರ್ಣವಾದ ಮಾವಿನ ಹಣ್ಣಿನ ಬೇಸಾಯವನ್ನು ಹೆಚ್ಚು ವೈಜ್ಞಾನಿಕವಾಗಿ ಕೈಗೊಳ್ಳಲು ತೋಟಗಾರಿಕೆ ಇಲಾಖೆಯು ರೈತರಿಗೆ ತಾಂತ್ರಿಕ, ಮಾರ್ಗದರ್ಶನ, ಉತ್ತಮ ಗುಣಮಟ್ಟದ ಕಸಿಗಿಡಗಳ ಪೂರೈಕೆ, ಹನಿ ನೀರಾವರಿ, ಸಸ್ಯ ಸಂರಕ್ಷಣೆ, ಬೇಸಾಯ ಕ್ರಮಗಳಿಗಾಗಿ ಸಹಾಯಧನವನ್ನು ವಿವಿಧ ಯೋಜನೆಗಳಡಿ ನೀಡುತ್ತಿದೆ. ರಾಷ್ಟ್ರೀಯ ತೋಟಗಾರಿಕೆ ಮಿಷನ್ ಮತ್ತು NREGA ಯೋಜನೆಗಳಡಿಯಲ್ಲಿ ಅನುಕ್ರಮವಾಗಿ ತಲಾ 4 ಹೆಕ್ಟೇರ್ ಮತ್ತು 2 ಹೆಕ್ಟೇರ್ ಪ್ರದೇಶಗಳಿಗೆ ಮಾವು ಬೆಳೆಗೆ ಸಹಾಯಧನ ನೀಡಲಾಗುತ್ತಿದೆ. ಈ ಸಹಾಯಧನವನ್ನು ಉಪಯೋಗಿಸಿಕೊಂಡು ಕಳೆದ 5 ವರ್ಷಗಳಲ್ಲಿ ಸುಮಾರು 75,000 ಹೆಕ್ಟೇರ್ ಪ್ರದೇಶದಲ್ಲಿ ಹೊಸದಾಗಿ ರೈತರು ಮಾವಿನ ಬೆಳೆ ಪ್ರಾರಂಭಿಸಿರುತ್ತಾರೆ.

ಇತ್ತೀಚಿನ ದಿನಗಳಲ್ಲಿ ರೈತರು ಮಾವು ಬೇಸಾಯಕ್ಕೆ ಸಂಬಂಧಿಸಿದಂತೆ, ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇವುಗಳಲ್ಲಿ ಮುಖ್ಯವಾದದು ಕೀಟರೋಗಗಳ ನಿಯಂತ್ರಣ, ಗುಣಮಟ್ಟ ಸುಧಾರಣೆ ಮತ್ತು ಮಾರುಕಟ್ಟೆಗೆ ಸಂಬಂಧಿಸಿದಂತೆ ರೈತರು ಎದುರಿಸುತ್ತಿರುವ ಸಮಸ್ಯೆಗಳು ಪ್ರಮುಖವಾಗಿರುತ್ತವೆ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ರಾಜ್ಯ ಸರ್ಕಾರವು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ಮಾವು ಅಭಿವೃದ್ಧಿ ಕೇಂದ್ರಗಳನ್ನು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸ್ಥಾಪಿಸಲಾಗುತ್ತಿದೆ. ಈ ಕೇಂದ್ರಗಳ ಮೂಲಕ ರೈತರಿಗೆ ಮಾವು ಉತ್ಪಾದನಾ ತಂತ್ರಜ್ಞಾನದ ಬಗ್ಗೆ ತರಬೇತಿ, ವಿವಿಧ ವಿಷಯಗಳ ಮೇಲೆ ಪ್ರಾತ್ಯಕ್ಷಿಕೆಗಳು, ಕೊಯ್ಲೋತ್ತರ ತಂತ್ರಜ್ಞಾನ ಪ್ರಸರಣ, ಮಾರುಕಟ್ಟೆ ಮತ್ತು ರಫ್ತಿಗೆ ಸಂಬಂಧಿಸಿದಂತೆ ಅಗತ್ಯ ತಿಳುವಳಿಕೆ ಮತ್ತು ಮಾರ್ಗದರ್ಶನ ನೀಡುವುದು ಈ ಕೇಂದ್ರಗಳ ಪ್ರಮುಖ ಧ್ಯೇಯಗಳಾಗಿರುತ್ತವೆ.

ಸುಮಾರು ರೂ 19 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಕೇಂದ್ರಗಳು 2011 ರಲ್ಲಿ ಕಾರ್ಯಾರಂಭ ಮಾಡುವವು. ಆಗ ಮಾವು ಬೆಳೆಗಾರರಿಗೆ ಅತ್ಯಗತ್ಯವಿರುವ Backward Linkages ಮತ್ತು Forward Linkages ಗಳ ಆಸರೆ ದೊರಕಿ ಮಾವು ಬೆಳೆಗಾರರು ಮತ್ತು ಉದ್ದಿಮೆದಾರರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ತಿಳಿಸಿದರು.ಪ್ರಾರಂಭದಲ್ಲಿ ತೋಟಗಾರಿಕೆ ಇಲಾಖೆ ನಿದರ್ೆಶಕರಾದ ಶ್ರೀ ಎನ್. ಜಯರಾಮ್ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು.

0 comments:

Post a Comment