ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರೈಲ್ವೆ ಹಳಿ ಮೇಲೆ ನಿಂತ ಕ್ರೇನ್ : ತಪ್ಪಿದ ಅನಾಹುತ

ಚಿಕ್ಕಮಗಳೂರು : ಬೀರೂರು ರೈಲ್ವೆ ಕ್ರಾಸ್ ಗೇಟ್ ರೈಲು ಹಳಿ ಮೇಲೆ ಕ್ರೇನ್ ಸಾಗಿಸುತ್ತದ್ದ ಟ್ರಾಲಿ ನಿಂತ ಪರಿಣಾಮ ಪ್ರಯಾಣಿಕರು ಮತ್ತು ವಾಹನಗಳು ಬಾಕಿಯಾದ ಘಟನೆ ಶುಕ್ರವಾರ ಬೀರೂರಿನಲ್ಲಿ ನಡೆದಿದೆ. ಹೊಸನಗರದಿಂದ ಮಣಿಪಾಲಕ್ಕೆ ಕ್ರೇನ್ ಸಾಗಿಸುತ್ತಿದ್ದ ಟ್ರಾಲಿ ಬೀರೂರು ಲೆವೆಲ್ ಕ್ರಾಸ್ ಹಳಿ ಮೇಲೆ ಬೆಳಿಗ್ಗೆ ಎಂಟು ಗಂಟೆ ಸುಮಾರಿಗೆ ಬಾಕಿಯಾಯಿತು. ಇದರಿಂದ ಹತ್ತು ಸಾವಿರಕ್ಕೂ ಅಧಿಕ ಪ್ರಯಾಣಿಕರು ತೊಂದರೆಗೆ ಸಿಕ್ಕಕೊಂಡರು.ಜೊತೆಗೆ ನೂರಾರು ವಾಹನಗಳು ರೈಲ್ವೆ ಗೇಟ್ನ ಎರಡೂ ಕಡೆಯಲ್ಲಿ ಬಾಕಿಯಾದವು. ರೈಲ್ವೆ ಅಧಿಕಾರಿಗಳ ಸಮಯ ಪ್ರಜ್ಞೆಯಿಂದ ಸಂಭವನೀಯ ಅನಾಹುತ ತಪ್ಪಿದೆ. ರೈಲ್ವೆ ಅಧಿಕಾರಿಗಳು, ಪೊಲೀಸರು ಮತ್ತು ಸ್ಥಳೀಯರು ರೈಲ್ವೆ ಹಳಿಯ ಮೇಲೆ ನಿಂತ ಟ್ರಾಲಿಯನ್ನು ಮಧ್ಯಾಹ್ನದ ಹೊತ್ತಗೆ ತೆರವು ಮಾಡಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ರೈಲ್ವೆ ಗೇಟ್ ಹಳಿ ಮೇಲೆ ಟ್ರಾಲಿ ಬಾಕಿಯಾಗಿ ರೈಲು ಪ್ರಯಾಣ ನಿಲುಗಡೆಯಾದ ನಿಮಿತ್ತ ಸ್ಥಳೀಯರು ಮತ್ತು ಪ್ರಯಾಣಿಕರು ಪ್ರತಿಭಟನೆ ನಡೆಸಿದರು.
ಬಾಕಿ ಹೇಗಾಯ್ತು : ಹೊಸನಗರ ದಿಂದ ಕ್ರೇನ್ ಹೊತ್ತ ಟ್ರಾಲಿ ಬೀರೂರು ಲೆವಲ್ ಗೇಟ್ ಹಳಿ ಮೇಲೆ ತಾಂತ್ರಿಕ ದೋಷದಿಂದ ಬಾಕಿ ಆಯಿತು. ಹಳಿ ಮೇಲೆ ಬಾಕಿಯಾದ ಟ್ರಾಲಿ ತೆರವು ಗೊಳಿಸಲು ಚಾಲಕ ಶತ ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ಅಷ್ಟರಲ್ಲಿ ರೈಲ್ವೆ ಹಳಿ ಮೇಲೆ ಬಾಕಿಯಾದ ಟ್ರಾಲಿ ವಿಷಯವನ್ನು ಆಯಾ ರೈಲ್ವೆ ಸ್ಟೇಷನ್ಗೆ ಮುಟ್ಟಿಸಲಾಯಿತು. ಹಾಗಾಗಿ ಅಪಘಾತ ನಡೆಯುವುದು ತಪ್ಪಿದೆ.ಎರಡು ಜೆಸಿಬಿ ಮತ್ತು ಗಾಳಿ ಯಂತ್ರದ ಮೂಲಕ ಟ್ರಾಲಿ ತೆರವು ಮಾಡಲಾಯಿತು.

ಎಲ್ಲಾ ರೈಲುಗಳು ಬಾಕಿ : ರೈಲ್ವೆ ಹಳಿ ಮೇಲೆ ಟ್ರಾಲಿ ಬಾಕಿಯಾದ ನಿಮಿತ್ತ ಹತ್ತಾರು ರೈಲು ಸಂಚಾರ ಸ್ಥಗಿತಗೊಂಡಿತು. ಇಂಟರ್ಸಿಟಿ, ಜನಶತಾಬ್ಧಿ, ಹುಬ್ಬಳ್ಳಿ-ಬೆಂಗಳೂರು, ಬೆಂಗಳೂರು ಹುಬ್ಬಳ್ಳಿ, ಮೈಸೂರು ಮುಂತಾದ ಕಡೆಗೆ ಚಲಿಸುವ ರೈಲುಗಳು ರೈಲ್ವೆ ಸ್ಟೆಷನ್ನಲ್ಲಿ ಬಾಕಿಯಾದವು. ಟ್ರಾಲಿ ತೆರವು ನಂತರ ರೈಲು ಸಂಚಾರ ಮುಂದುವರಿಯಿತು. ರೈಲು ಹಳಿ ಮೇಲೆ ಟ್ರಾಲಿ ಬಾಕಿಯಾದ ಕಾರಣ ರೈಲು ಸಂಚಾರದ ಜೊತೆಗೆ ಇತರೆ ವಾಹನ ಸಂಚಾರಕ್ಕೂ ತೊದರೆಯಾಯಿತು.ಲೆವಲ್ ಕ್ರಾಸ್ ಎರಡೂ ಕಡೆಯಲ್ಲೂ ಹನುಮಂತನ ಬಾಲದಂತೆ ವಾಹನಗಳು ಸಾಲುಗಟ್ಟಿ ನಿಂತವು. ಕೆಲ ವಾಹನಗಳು ಬದಲಿ ಮಾರ್ಗದಲ್ಲಿ ಸಂಚರಿಸಿದವು.

ಪ್ರತಿಭಟನೆ : ರೈಲು ಸಂಚಾರ ಸ್ಥಗಿತಗೊಂಡ ಕಾರಣ ಪ್ರಯಾಣಿಕರು ತೊಂದರೆಗೆ ಸಿಕ್ಕಿಕೊಂಡರು ಬೇರೆ ಬೇರೆ ಊರಿಗೆ ಜರೂರು ಕೆಲಸಕ್ಕಾಗಿ ಹೊರಟವರು ಬೇರೆ ದಾರಿಯಿಲ್ಲದೆ ರೈಲ್ವೆ ಸ್ಟೇಷನ್ನಲ್ಲಿ ಬಾಕಿಯಾಗಿ, ರೈಲ್ವೆ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿರುವ ದಶ್ಯ ಸಾಮಾನ್ಯವಾಗಿತ್ತು. ಅಂತ್ಯ ಸಂಸ್ಕಾರಕ್ಕೆ ಹೊರಟಿದ್ದ ಓರ್ವ ಪ್ರಯಾಣಿಕನ ಸ್ಥಿತಿಯಂತೂ ಶೋಚನೀಯವಾಗಿತ್ತು. ಬೀರೂರು ಲೆವೆಲ್ ಕ್ರಾಸ್ ಸಮೀಪ ಅವಗಢ ನಡೆಯುತ್ತಿರುವುದು ಇದು ಮೊದಲೇನು ಅಲ್ಲ. ಕಳೆದ ವಾರ ಇಲ್ಲಿ ನಡೆದ ಅಪಘಾತದಲ್ಲಿ ನಾಲ್ಕು ಎಮ್ಮೆ ದಾರುಣ ಸಾವು ಕಂಡಿದ್ದವು. ಬೀರೂರು ಲೆವೆಲ್ ಕ್ರಾಸ್ ಬಳಿ ನಿರಂತರ ಅವಗಢಗಳ ಮೇಲೆ ಅವಗಢ ನಡೆಯುತ್ತಿದೆ. ರೈಲ್ವೆ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಆದರೆ ರೈಲ್ವೆ ಅಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆ ಎಂದು ಆಪಾದಿಸಿ ಸ್ಥಳೀಯರು ಪ್ರತಿಬಟನೆ ನಡೆಸಿದರು.
ವರದಿ: ಶ್ರೀಪತಿ ಹೆಗಡೆ ಹಕ್ಲಾಡಿ
ಚಿತ್ರ: ಎಂ.ಎನ್ ವಾಘಾ

0 comments:

Post a Comment