ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ
ಚಿಕ್ಕಮಗಳೂರು : ಎಚ್ಚರಿಕೆ... ಚಿಕ್ಕಮಗಳೂರು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಿಗೆ ಇನ್ನು ಮುಂದೆ ಪ್ಲಾಸ್ಟಿಕ್ ವೈಯುವಂತಿಲ್ಲ. ಪರಿಸರ ಸ್ವಶ್ಚತೆಯ ದೃಷ್ಟಿಯಲ್ಲಿ ಪ್ಲಾಸ್ಟಿಕ್ ಬಳಕೆಗೆ ನಿಷೇಧ ಹೇರಲಾಗಿದೆ.ಹಾಗಾಗಿ ಇನ್ನೂ ಮಂದೆ ಪ್ರವಾಸಿಗರು ಪ್ಲಾಸ್ಟಿಕ್ ಕೊಂಡ್ಯೊದೀರಾ ಜೋಕೆ. ಚಿಕ್ಕಮಗಳೂರು ಜಿಲ್ಲಾಡಳಿತ ಪ್ರವಾಸಿ ಮತ್ತು ಶ್ರದ್ದಾ ಕೇಂದ್ರಗಳನ್ನು ಪ್ಲಾಸ್ಟಿಕ್ ಮುಕ್ತಾವಾಗಿರಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯಿಟ್ಟಿದೆ. ಪ್ಲಾಸ್ಟಿಕ್ ಬಳಕೆಗೆ ಶುಕ್ರವಾರದಿಂದ ಜಿಲ್ಲಾಡಳಿತ ನಿರ್ಬಂಧ ಹೇರಿದೆ.

ಎಲ್ಲೆಲ್ಲಿ ಪ್ಲಾಸ್ಟಿಕ್ ನಿರ್ಬಂಧ

ಇನಾಂ ದತ್ತಾತ್ರೇಯಪೀಠ, ಮಾಣಿಕ್ಯಧಾರ, ಮುಳ್ಳಯ್ಯನ ಗಿರಿಗಳು ಇನ್ನು ಮುಂದೆ ಪ್ಲಾಸ್ಟಿಕ್ ಮುಕ್ತಾ. ಚಿಕ್ಕಮಗಳೂರು ಜಿಲ್ಲಾಡಳಿತ ಈ ಪ್ರದೇಶಗಳನ್ನು ಪ್ಲಾಸ್ಟಿಕ್ ಮುಕ್ತಾ ಪ್ರದೇಶವನ್ನಾಗಿ ಪರಿವರ್ತಿಸುವ ಪಣತೊಟ್ಟಿದೆ. ಅಲ್ಲದೇ ಇಲ್ಲಿನ ಸ್ವಚ್ಚತೆ ಕಾಪಾಡುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ನಿಸರ್ಗ ಸೊಬಗಿನಿಂದ ಕಂಗೊಳಿಸುವ ಚಿಕ್ಕಮಗಳೂರು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಾದ ಇನಾಂ ದತ್ತಾತ್ರೇಯ ಪೀಠ, ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಮಾಣಿಕ್ಯಧಾರಗಳು ತನ್ನ ನೈಜ ಸೌಂದರ್ಯದಿಂದ ಪ್ರವಾಸಿಗರನ್ನು ತನ್ನತ್ತ ಸೆಳೆಯುವ ತಾಕತ್ತು ಹೊಂದಿದೆ. ವರ್ಷಂಪ್ರತಿ ಇಲ್ಲಿಗೆ ಬರುವ ಲಕ್ಷಾಂತರ ಮಂದಿ ಪ್ರವಾಸಿಗರು ತರುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆದು ಪರಿಸರ ಮಾಲಿನ್ಯಕ್ಕೆ ಕೊಡುಗೆ ನೀಡುತ್ತಿದ್ದರು. ಪ್ರವಾಸಿಗರು ತಂದು ಸುರಿದ ಪ್ಲಾಸ್ಟಿಕ್ ಪರಿಸರದ ಅಂದ ಹಾಳುಮಾಡಿ ಹಾಕಿತ್ತು.

ಚಿಕ್ಕಮಗಳೂರಿನ ಪ್ರಮುಖ ಪ್ರವಾಸಿ ಸ್ಥಳಗಳು ಪ್ಲಾಸ್ಟಿಕ್ ಮಯವಾಗಿ ಹೋಗಿದೆ. ಇದನ್ನು ಪರಿಗಣನೆಗೆ ತೆಗೆದುಕೊಂಡ ಜಿಲ್ಲಾಡಳಿತ ಈ ಪ್ರವಾಸಿ ತಾಣಗಳಲ್ಲಿ ಪ್ಲಾಸ್ಟಿಕ್ ಬಳಕೆಗೆ ನಿಷೇಧ ಹೇರಿದೆ. ಜೊತೆಗೆ ಪ್ರವಾಸಿ ತಾಣಗಳಲ್ಲಿ ಅನಾಥವಾಗಿ ಬಿದ್ದ ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯ ರಾಶಿಯನ್ನು ಸ್ವಶ್ಚ ಟ್ರಸ್ಟ್ ಚಿಕ್ಕಮಗಳೂರು ಮತ್ತು ನಗರಸಭೆ ಸಹಯೋಗದಲ್ಲಿ ವಿಲೇವಾರಿ ಮಾಡುವ ಕೆಲಸ ಆರಂಭಿಸಿದೆ. ಸ್ವಚ್ಛತಾ ಕಾರ್ಯಕಕ್ಕೆ ಚಿಕ್ಕಮಗಳುರು ಜಿಲ್ಲಾಧಿಕಾರಿ ಚಾಲನೆ ನೀಡಿದ್ದು ವಿಶೇಷ.

ಪ್ರವಾಸಿತಾಣಗಳ ಸ್ವಚ್ಛತೆಯ ದೃಷ್ಟಿಯಲ್ಲಿ ಅಲ್ಲಲ್ಲಿ ಕಸದ ತೊಟ್ಟಿ ಇರಿಸಲಾಗಿದೆ. ಅಲ್ಲದೇ ಪಶ್ಚಿಮ ಘಟಗಳ ಸಾಲಿನಲ್ಲಿರುವ ಶಿಖರಗಳಿಗೆ ಸಾಗುವ ಮಾರ್ಗದಲ್ಲಿ ಚೆಕ್ಪೋಸ್ಟ್ ತೆರೆಯಲಾಗಿದ್ದು, ಎಲ್ಲಾ ವಾಹನ ತಪಾಸಣೆಗೆ ಒಳಪಡಿಸಲಾಗುತ್ತ್ತದೆ. ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಯಂತ್ರಿಸುವ ನಿಟ್ಟಿನಲ್ಲಿ ವಿಶೇಷ ತಂಡ ರಚಿಸಲಾಗಿದೆ. ತಂಡದ ಸದಸ್ಯರು ಪ್ರವಾಸಿ ತಾಣಗಳಿಗೆ ಭೇಟಿ ನೀಡಲಿದ್ದು, ಪ್ಲಾಸ್ಟಿಕ್ ಬಳಸಿದವರ ವಿರುದ್ದ ಕ್ರಮ ಜರುಗಿಸುವ ಜತೆಗೆ ಪ್ಲಾಸ್ಟಿಕ್ ಬಳಕೆ ಮಾಡುವವರಿಗೆ ದಂಡ ಕೂಡಾ ವಿಧಿಸಲಿದೆ.

ಜಿಲ್ಲಾಧಿಕಾರಿ ಹೇಳಿದ್ದು

ಪ್ರಮುಖ ಪ್ರವಾಸಿ ತಾಣಗಳಲ್ಲಿನ ಸ್ವಚ್ಛತೆ ಕಾಪಾಡಲು ಚಕ್ಕಮಗಳೂರಿನ ಸ್ವಚ್ಚ ಟ್ರಸ್ಟ್ ಕೈಜೋಡಿಸಿದೆ. ಅಲ್ಲದೇ ಅರಣ್ಯ ಇಲಾಖೆ, ಪೋಲಿಸ್ ಇಲಾಖೆ ಹಾಗೂ ಇತರ ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿವೆ.ಪ್ರತಿ ಹಂತದಲ್ಲೂ ಪ್ಲಾಸ್ಟಿಕ್ ಬಳಕೆಯಿಂದ ಎದುರಾಗುವ ಸಮಸ್ಯೆಗಳ ಕುರಿತು ನಾಮಫಲಕ ಅಳವಡಿಸಲಾಗಿದೆ. ಅಲ್ಲದೇ ಎಲ್ಲಾ ಕಡೆಗಳಲ್ಲಿ ಕರಗದ ಹಾಗೂ ಕರುಗುವ ಕಸಗಳನ್ನು ಹಾಕಲು ಪ್ರತ್ಯೇಕ ತೊಟ್ಟಿ ಇರಿಸಲಾಗಿದೆ. ಇಲ್ಲಿಗೆ ಬರುವ ಪ್ರವಾಸಿಗರು ಪ್ಲಾಸ್ಟಿಕ್ ಬಳಕೆ ಮಾಡದೆ, ಸ್ವಚ್ಛತೆ ಕಾಪಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಎಚ್.ಎನ್.ಚೆನ್ನಪ್ಪ ಗೌಡ ಹೇಳಿದ್ದಾರೆ.

ಕೊನೆಗೂ ಎಚ್ಚೆತ್ತ ಜಿಲ್ಲಾಡಳಿತ ಇನಾಂ ದತ್ತಾತ್ರೆಯ ಪೀಠ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡಿರುವುದು ಶ್ಲಾಘನೀಯ. ಆದರೆ ಈ ಕಾನೂನು ಎಷ್ಟು ದಿನಗಳವರಗೆ ಜಾರಿಯಲ್ಲಿರುತ್ತದೆ ಹಾಗೂ ಜಿಲ್ಲಾಡಳಿತ ಕ್ರಮವನ್ನು ಪ್ರವಾಸಿಗರು ಎಷ್ಟರಮಟ್ಟಗೆ ಪಾಲಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ ಎಂದು ಸ್ವಚ್ಚ ಟ್ರಸ್ಟ್ ವ್ಯಾಖ್ಯಾನಿಸಿದೆ.

ವಿಶೇಷ ವರದಿ : ಶ್ರೀಪತಿ ಹೆಗಡೆ ಹಕ್ಲಾಡಿ

0 comments:

Post a Comment