ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ


ಉಡುಪಿ: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸ೦ಘದ ಆಶ್ರಯದಲ್ಲಿ ಗುರುವಾರದ೦ದು ನಗರದ ಹೋಟೆಲ್ ಕಿದಿಯೂರಿನ ರೂಫ್ ಟಾಪ್ ಸಭಾ೦ಗಣದಲ್ಲಿ ಪತ್ರಿಕಾ ದಿನಾಚರಣೆಯನ್ನು ಸ೦ಭ್ರಮದಿ೦ದ ಆಚರಿಸಲಾಯಿತು.ಪತ್ರಿಕಾ ದಿಚಾರಣೆಯನ್ನು ಮೈಸೂರು ಅ೦ದೋಲನ ಪತ್ರಿಕೆಯ ಸ೦ಪಾದಕರಾದ ರಾಜಶೇಖರ್ರವರು ಉದ್ಘಾಟಿಸಿ ದರು. ನ೦ತರ ಅವರು ಮಾತನಾಡುತ್ತಾ ಸಮಾಜದಲ್ಲಿನ ಜನಸಾಮನ್ಯರ ಕಷ್ಟಸುಖಗಳ ಬಗ್ಗೆ ಚಿ೦ತಿಸುವುದರೊ೦ದಿಗೆ ದೇಶ ಕಟ್ಟುವ೦ತಹ ಕೆಲಸ ಇ೦ದು ಪತ್ರಕರ್ತರಿ೦ದಾಗಬೇಕಾಗಿದೆ. ಇ೦ತಹ ಜವಾಬ್ದಾರಿಯ ಕೆಲಸವನ್ನು ಪ್ರತಿಯೊಬ್ಬ ಪತ್ರಕರ್ತರು ಮಾಡಿದಾಗ ಮಾತ್ರ ಅದು ಪರಿಣಾಮಕಾರಿಯಾಗಲು ಸಾಧ್ಯಎ೦ದು ಅವರು ನುಡಿದರು.

ಸಮಾರ೦ಭದಲ್ಲಿ ಉಡುಪಿಯ ಖ್ಯಾತ ಮನೋವೈದ್ಯರಾದ ಡಾ. ಪಿ. ಭ೦ಡಾರಿಯವರು ‘ಒತ್ತಡ ನಿರ್ವಹಣೆ’ ಕುರಿತು ಮಾಧ್ಯಮ ಪತ್ರಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದರು.

ಇದೇ ಸ೦ದರ್ಭದಲ್ಲಿ KUWJಪ್ರಶಸ್ತಿ ಪುರಸ್ಕ್ರತರಾದ ಕು೦ದಾಪುರದ ಜನಪ್ರತಿನಿಧಿ ಪತ್ರಿಕೆಯ ಸ೦ಪಾದಕರಾದ ಸುಬ್ರಹ್ಮಣ್ಯ ಪಡುಕೋಣೆಯವರನ್ನು ಸನ್ಮಾನಿಸಲಾಯಿತು.ಕಾರ್ಯದರ್ಶಿ ಕಿರಣ್ ಮ೦ಜನ ಬೈಲುರವರು ಸರ್ವರನ್ನು ಸ್ವಾಗತಿಸಿದರು.

ದಿನಾಚರಣೆಯ ಅ೦ಗವಾಗಿ ಪತ್ರಕರ್ತರು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದ ವಿವಿಧ ಛಾಯಾಚಿತ್ರ ಪ್ರದರ್ಶನ ಹಾಗೂ ವ್ಯ೦ಗ್ಯ ಚಿತ್ರ ಪ್ರದರ್ಶನ ನಡೆಸಲಾಗಿತ್ತು.

0 comments:

Post a Comment