ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
2:11 PM

ಬಂದ್ ಯಶಸ್ವಿ

Posted by ekanasu

ರಾಜ್ಯ - ರಾಷ್ಟ್ರ

ಬೆಂಗಳೂರು/ಮಂಗಳೂರು: ತೈಲ ಬೆಲೆ ಏರಿಕೆ ವಿರೋಧಿಸಿ ಕರೆನೀಡಿದ ಭಾರತ್ ಬಂದ್ ಯಶಸ್ವಿಯಾಗಿದೆ. ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಹಲವು ಕಡೆಗಳಲ್ಲಿ ಸ್ವಯಂಪ್ರೇರಿತವಾಗಿ ಬಂದ್ ನಡೆದಿದೆ. ಒಟ್ಟಿನಲ್ಲಿ ತೈಲ ಬೆಲೆ ಏರಿಕೆಯ ಬಿಸಿ ಪ್ರತಿಯೊಬ್ಬರನ್ನೂ ತಟ್ಟಿದೆ ಎಂಬುದನ್ನು `ಬಂದ್' ಯಶಸ್ವಿಯಾಗುವಲ್ಲಿಯೇ ಅರಿಯುವಂತಾಗಿದೆ.
ಭಾರತ ಬಂದ್ ಬೆಂಬಲಿಸಿ ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಅಂಗಡಿಗಳನ್ನು ಮುಚ್ಚಿ ಬಂದ್ ಗೆ ಬೆಂಬಲ ನೀಡಿದ್ದಾರೆ. ಎಲ್ಲೆಡೆಗಳಲ್ಲೂ ಶಿಕ್ಷಣ ಸಂಸ್ಥೆಗಳಿಗೆ ರಜೆ ನೀಡಲಾಗಿತ್ತು. ಖಾಸಗೀ ಬಸ್ಸುಗಳು , ಸರಕಾರಿ ಬಸ್ಸುಗಳ ಓಡಾಟವೂ ಮೊಟಕಾಗಿದ್ದವು. ಕೆಲವು ಕಡೆಗಳಲ್ಲಿ ರೈಲ್ವೇ ಸಂಚಾರಕ್ಕೂ ಅಡ್ಡಿಪಡಿಸಿದ ಘಟನೆಗಳು ವರದಿಯಾಗಿವೆ. ಮಂಗಳೂರ , ಬೆಂಗಳೂರು ಕಡೆಗಳಲ್ಲಿ ರೈಲ್ವೇ ನಿಲ್ದಾಣದಲ್ಲಿ ಪ್ರತಿಭಟನೆಗಳು ನಡೆದಿವೆ.

ಕೆಲವೊಂದು ಪ್ರದೇಶದಲ್ಲಿ ಸಣ್ಣ ಮಟ್ಟಿನ ಅಹಿತಕರ ಘಟನೆಗಳು ವರದಿಯಾಗಿವೆ. ಬಸ್ಸುಗಳಿಗೆ ಕಲ್ಲುತೂರಾಟ ಘಟನೆಗಳು ನಡೆದಿವೆ. ಹಲವು ಪ್ರದೇಶದಲ್ಲಿ ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ.

0 comments:

Post a Comment