ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ವೈವಿಧ್ಯಕಾಂಡ್ಲ ಇದು ಅತ್ಯಂತ ಉಪಯುಕ್ತ ಮತ್ತು ಅವಶ್ಯಕ. ಆದರೆ ಇದೇ ಇಂದು ನಶಿಸುವ ಹಂತದಲ್ಲಿದೆ. ಇದರ ಉಳಿವು ಅತೀ ಅಗತ್ಯವೂ ಅನಿವಾರ್ಯವೂ ಹೌದು. ಜಿಲ್ಲೆಯಲ್ಲಿ ಒಟ್ಟು 22ಪ್ರಬೇಧಗಳನ್ನೊಳಗೊಂಡ 12ಕಾಂಡ್ಲ ಕುಟುಂಬಗಳು ಇವೆ. ಕಡಲ ಮತ್ತು ನದೀತೀರದಲ್ಲಿ ಗಣಿಗಾರಿಕೆ, ಅನಿಯಂತ್ರಿತ ಮೀನುಗಾರಿಕೆ, ಸೇರಿದಂತೆ ಇತರ ಚಟುವಟಿಕೆಗಳಿಂದಾಗಿ ಕಾಂಡ್ಲಾ ನೆಲೆಗಳು ನಾಶಗೊಳ್ಳುತ್ತಿವೆ ಎಂಬುದು ಆಘಾತಕಾರಿ.ಕಾಂಡ್ಲಗಳ ನೆಲೆ ಉಷ್ಣ ಪರಿಸರದಲ್ಲಿ. ತೀರ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಇದು ಸಸ್ಯಜಾತಿಗಳನ್ನು ಪೋಷಿಸುವುದಲ್ಲದೆ ಕಿನಾರೆಗಳಲ್ಲಿರುವ ಮಣ್ಣಿನ ಸವೆಕಳಿಯನ್ನು ತಡೆಗಟ್ಟುತ್ತವೆ. ಕಾಂಡ್ಲಗಳ ಬೇರುಗಳು ಮಣ್ಣನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುತ್ತವೆ.
ಅಭಿವೃದ್ಧಿಯ ಹೆಸರಿನಲ್ಲಿ ಕಾಂಡ್ಲಗಳಿಗೆ ಕೊಡಲಿಯೇಟು ಬೀಳಲಾರಂಭಿಸಿದೆ. ಗುರುಪುರ ಅಳಿವೆ, ಮುಲ್ಕಿ ಪಾವಂಜೆ ಅಳಿವೆ, ಉದ್ಯಾವರ ಅಳಿವೆ, ಪಾಂಗಾಳ ಹೊಳೆ ಸಂಕೀರ್ಣ, ಚಕ್ರಾ-ಹಾಲಾಡಿ -ಕೊಲ್ಲೂರು ಸಂಕೀರ್ಣ, ಬೈಂದೂರು ಹೊಳೆ, ಶಿರೂರು ಹೊಳೆ ಅತ್ಯಂತ ಮಹತ್ವದ ಅಳಿವೆಗಳಾಗಿವೆ. ಇಲ್ಲಿ ಕಾಂಡ್ಲಗಳು ಕಾಣಸಿಗುತ್ತವೆ.
ಗುರುಪುರ ಅಳಿವೆ ಮತ್ತು ಮುಲ್ಕಿ ಪಾವಂಜೆ ಸಂಕೀರ್ಣ, ಸ್ವಣರ್ಾ-ಸೀತಾನದಿ ಸಂಕೀರ್ಣ ಪ್ರದೇಶದಲ್ಲಿರುವ ಕಾಂಡ್ಲಾಗಳು ಅತ್ಯಂತ ಹೀನ ಸ್ಥಿತಿಯಲ್ಲಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

ಕಾಂಡ್ಲಾ ಮಹಿಮೆ
ಕಾಂಡ್ಲಾದ ಮಹಿಮೆ ವಿಶ್ವ ರೂಪದ್ದು. ಉತ್ತರ ಕನ್ನಡ ಜಿಲ್ಲೆಯ ಕುಮುಟಾ ತಾಲೂಕಿನ ಅಘನಾಶಿನಿ ನದೀ ಹಿನ್ನೀರು ಪ್ರದೇಶ ಕಾಗಾಲ ಮತ್ತು ಮಾಸೂರು ಪ್ರದೇಶಗಳಲ್ಲಿ ಈ ಕಾಂಡ್ಲಾಗಳು ಹುಲುಸಾಗಿವೆ. ಈ ಭಾಗದಲ್ಲಿರುವ ಜಲಚರಗಳ ವಂಶಾಭಿವೃದ್ಧಿಗೆ ಇದೊಂದು ಉತ್ತಮ ತಾಣದಂತಾಗಿ ಪರಿಣಮಿಸಿದೆ.

ಹೇಗೆ ಬೆಳೆಯುತ್ತೆ ಗೊತ್ತಾ?
ಕಾಂಡ್ಲಾದ ವಂಶಾಭಿವೃದ್ಧಿ `ಬೀಜ'ಗಳ ಮೂಲಕವಾಗುತ್ತವೆ. ನುಗ್ಗೆಬೀಜಗಳಂತಿರುವ ಕಾಂಡ್ಲಾಬೀಜಗಳು ನದೀ ತೀರದ ಕೆಸರಿನಲ್ಲಿ ಬಿದ್ದು ಅಲ್ಲೇ ಮೊಳಕೆಯೊಡೆದು ಬೆಳೆಯುತ್ತದೆ. ಈ ಸಸ್ಯ ತೀರದ ಮಣ್ಣು ನೀರಿನಲ್ಲಿ ಕೊರೆದು ಹೋಗದಂತೆ ತಡೆಗಟ್ಟಲು ಅತ್ಯಂತ ಉಪಕಾರಿ..

0 comments:

Post a Comment