ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಉಡುಪಿ: ಉಡುಪಿ ಜಿಲ್ಲೆ, ಕುಂದಾಪುರ ತಾಲ್ಲೂಕು ಹಳ್ಳಾಡಿ-ಹರ್ಕಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಾವಳಿಯಲ್ಲಿ ನೂತನ ಶಿಲಾಯುಗದ ನಿವೇಶನ ಮತ್ತು ಕಲ್ಲಿನ ಆಯುಧೋಪಕರಣಗಳು ಪತ್ತೆಯಾಗಿವೆ ಎಂದು ಶಿರ್ವ ಎಂ.ಎಸ್.ಆರ್.ಎಸ್.ಕಾಲೇಜಿನ ಪುರಾತತ್ವ ಉಪನ್ಯಾಸಕ ಪ್ರೊ.ಟಿ.ಮುರುಗೇಶಿಯವರು ತಿಳಿಸಿರುತ್ತಾರೆ. ಗಾವಳಿಯಲ್ಲಿ ಈ ಹಿಂದೆ ದಿ.ವಸಂತ ಶೆಟ್ಟಿಯವರು ಸಂಶೋಧಿಸಿದ್ದ ಬಂಡೆ ಚಿತ್ರಗಳ ನಿವೇಶನದಿಂದ ಉತ್ತರಕ್ಕೆ ಸುಮಾರು ಅರ್ಧ ಕಿ.ಮೀ. ಅಂತರದಲ್ಲಿರುವ ಒಂದು ಚಿಕ್ಕ ಗುಡ್ಡದ ಮೇಲೆ ತ್ರಿಕೋನಾಕರದ ಡಾಲರೈಟ್ ಶಿಲೆಯ ನೂತನ ಶಿಲಾಯುಗದ ಆಯುಧವೊಂದು ದೊರೆತಿದೆ. ಈ ಬೆಟ್ಟ ಸಮುದ್ರ ಮಟ್ಟದಿಂದ 245 ಅಡಿ ಎತ್ತರದಲ್ಲದೆ. ಇದರ ದಕ್ಷಿಣದ ಇಳಿಜಾರಿನಲ್ಲಿ ಏಕಮುಖ ಬಾಯುಳ್ಳ, ಉಜ್ಜಿ ನಯಗೊಳಿಸದ ಬಾಚಿಯಂತಹ ಆಯುಧವೊಂದು ಕಂಡು ಬಂದಿದೆ. ಈ ಆಯುಧವು ತ್ರಿಕೋನಾಕಾರದಲ್ಲಿದ್ದು ಡಾಲರೈಟ್ ಶಿಲೆಯಲ್ಲಿ ತಯಾರಿಸಲಾಗಿದೆ. ಇಳಿಜಾರಿನ ಅಂಚಿನ ಗದ್ದೆ ಬದಿಯಲ್ಲಿ ಅತ್ಯುತ್ತಮ ಮರಳುಗಲ್ಲಿನಲ್ಲಿ ತಯಾರಿಸಿದ ತುಂಡಾದ ನೂತನ ಶಿಲಾಯುಗದ ಕಲ್ಲಿನಾಯುದವೊಂದು ಪತ್ತೆಯಾಗಿದೆ. ಬಂಡೆ ಚಿತ್ರಗಳ ಸಮೀಪದಲ್ಲಿಯೇ ದಕ್ಷಿಣಕ್ಕೆ ಗಾತ್ರದಲ್ಲಿ ಚಿಕ್ಕದಾದ ತ್ರಿಕೋನಾಕೃತಿಯ ಆಯಧವೊಂದು ಕಂಡು ಬಂದಿದೆ.ಇದನ್ನು ಸಹ ಡಾಲರೈಟ್ ಶಿಲೆಯಲ್ಲಿ ರಚಿಸಲಾಗಿದೆ. ಏಕ ಮುಖ ಬಾಯುಳ್ಳ ಈ ಆಯುಧದ ಬಾಯನ್ನು ಮಾತ್ರ ಉಜ್ಜಿ ನಯಗೊಳಿಸಲಾಗಿದೆ.ಸಂಶೋಧನೆಯ ಪ್ರಾಮುಖ್ಯತೆ

ಈವರಗೆ ಉಡುಪಿ ಮತ್ತು ಉತ್ತರಕನ್ನಡ ಜಿಲ್ಲೆಯ ಅಲ್ಲಲ್ಲಿ ಒಂದೊಂದು ನೂತನ ಶಿಲಾಯುಗ ಕಾಲದ ಆಯುಧೋಪಕರಣಗಳು ಸಂಶೋಧನೆಯಾಗಿದ್ದವು. ಈ ಶೋಧನೆಗಳು, ಪಶ್ಚಿಮ ಕರಾವಳಿಯಲ್ಲಿ ಪ್ರಾಗೈತಿಹಾಸಿಕ ಕಾಲದ ಮಾನವ ಚಟುವಟಿಕೆಗಳು ಇರಲೇ ಇಲ್ಲ ಎಂಬ ವಾದವನ್ನು ಸ್ಪಷ್ಟವಾಗಿ ತಳ್ಳಿಹಾಕಿದರೂ, ನವಶಿಲಾಯುಗ ಕಾಲದ ನಿವೇಶನವನ್ನು ಗುರುತಿಸುವಲ್ಲಿ ವಿಫಲವಾಗಿದ್ದವು. ಈಗ ಉಡುಪಿಯ ಸಮುದ್ರ ಮಟ್ಟದಿಂದ 245 ಅಡಿ ಎತ್ತರದಲ್ಲಿ ನೂತನ ಶಿಲಾಯುಗದ ನಿವೇಶನವನ್ನು ಇದೇ ಪ್ರಥಮ ಬಾರಿಗೆ ಸ್ಪಷ್ಟವಾಗಿ ಗುರುತಿಸಲಾಗಿದೆ. ಗಾವಳಿಯ ಬಂಡೆ ಚಿತ್ರಗಳನ್ನು ಡಾ. ಅ.ಸುಂದರರವರು ಬೃಹತ್ ಶಿಲಾಯುಗ ಕಾಲದ ಚಿತ್ರಗಳೆಂದು ನಿರ್ಧರಿಸಿ, ಅವುಗಳ ಕಾಲವನ್ನು ಕ್ರಿ. ಪೂ. 800-600 ಇರಬಹುದೆಂದು ನಿರ್ಧರಿಸಿದ್ದರು.


ಈಗ ಗಾವಳಿಯ ಬಂಡೆ ಚಿತ್ರಗಳ ಪರಿಸರದಲ್ಲಿಯೇ ನೂತನ ಶಿಲಾಯುಗದ ನಿವೇಶನ ಹಾಗೂ ನೂತನ
ಶಿಲಾಯುಗದ ಕಲ್ಲಿನಾಯುಧಗಳು ಪತ್ತೆಯಾಗಿರುವುದು ಮತ್ತು ನಂದಿ ಪಂಥ ಜಗತ್ತಿನೆಲ್ಲೆಡೆ ನೂತನ ಶಿಲಾಯುಗ ಕಾಲದ ಒಂದು ಪ್ರಮುಖ ಲಕ್ಷಣವಾಗಿರುವುದರ ಆಧಾರದ ಮೇಲೆ ಗಾವಳಿಯ ಬಂಡೆ ಚಿತ್ರಗಳು ಸಂಶಯಾತೀತವಾಗಿ ನೂತನ ಶಿಲಾಯುಗ ಕಾಲದ ಚಿತ್ರಗಳೆಂದು ಪ್ರೊ.ಟಿ.ಮುರುಗೇಶಿಯವರು ತಿಳಿಸಿರುತ್ತಾರೆ. ಉಜ್ಜಿ ನಯಗೊಳಿಸದ ಒರಟಾದ ಹೊರಮೈಯುಳ್ಳ ಗಾವಳಿಯ ಶಿಲಾಯುಧಗಳು ಅತ್ಯಂತ ಸ್ಪಷ್ಟವಾಗಿ ನೂತನ ಶಿಲಾಯುಗದ ಆರಂಭಿಕ ಹಂತವನ್ನು ಪ್ರತಿನಿಧಿಸುತ್ತಿದ್ದು ಈ ನೆಲೆಯ ಕಾಲಮಾನವನ್ನು ಕ್ರಿ. 2000-1500 ವರ್ಷಗಳಷ್ಟು ಪ್ರಾಚೀನ ನಿವೇಶನವೆಂದು ನಿರ್ಧರಿಸಿರುವುದಾಗಿ ಪ್ರೊ.ಟಿ.ಮುರುಗೇಶಿಯವರು ತಿಳಿಸಿರುತ್ತಾರೆ. ಎಂ.ಎಸ್.ಆರ್.ಎಸ್. ಕಾಲೇಜಿನ ಪುರಾತತ್ವ ಉಪನ್ಯಾಸಕ ಪ್ರೊ.ಟಿ.ಮುರುಗೇಶಿ. ಮಂಗಳೂರು ವಿಶ್ವವಿದ್ಯಾನಿಲಯದ ಸಾಗರ ಭೂಗರ್ಭಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಡಾ.ಗಂಗಾಧರ್ ಭಟ್, ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಪ್ರೊ. ಪ್ರಶಾಂತ್ ಶೆಟ್ಟಿ ಹಾಗೂ ಉಡುಪಿ ಚಿತ್ರಕಲಾ ಶಾಲೆಯ ಕಲಾ ಪ್ರಾಧ್ಯಾಪಕ ರಾಘವೇಂದ್ರ ಅಮೀನ್ ಇವರನ್ನು ಒಳಗೊಂಡ ಸಂಶೋಧಕರ ತಂಡ ಕರ್ನಾಟಕ ಕರಾವಳಿಯ ಮಹತ್ತರವಾದ, ಮೊಟ್ಟಮೊದಲ ನೂತನ ಶಿಲಾಯುಗದ ನಿವೇಶನವನ್ನು ಪತ್ತೆ ಹಚ್ಚಿದೆಯೆಂದು ಪ್ರೊ.ಟಿ.ಮುರುಗೇಶಿಯವರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರೊ. ಟಿ. ಮುರುಗೇಶಿ ಎಂ.ಎಸ್.ಆರ್.ಎಸ್.ಕಾಲೇಜು ಶಿರ್ವ-574116. 9448019626.

ವರದಿ: ಕಿರಣ್ ಮಂಜನಬೈಲು, ಉಡುಪಿ

0 comments:

Post a Comment