ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಾಹಿತ್ಯ

ಪಾಲ್ ಅಲೆನ್ ಅಲ್ಲೇನ್ ನಿನ್ನ ಹೆಸರು?
ಪಾಲಿಸೆಮ್ಮನು, ಭವಿಷ್ಯವನು ಉಸುರು.

ಕಾಲ್ಚೆಂಡಾಟದಲಿ ನಿಜ ನಿನ್ನ ನುಡಿಯು
ಮೇಲ್ಕೊಂಡಾಡುವೆನು 'ನಿನಗಾರು ಸರಿಯು?'

ಅಷ್ಟಪಾದಿಯೆ, ನೀನು ಈ ಬುವಿಗೆ
ಇಷ್ಟವಾಗಿಹೆ, ವಂದಿಸುವೆವೈ ನಿನಗೆ.

ಅಷ್ಟದಿಕ್ಕುಗಳಲ್ಲು ಅಹ ನಿನ್ನ ಸ್ತುತಿಯು!
ಅಷ್ಟದಿಗ್ಗಜಸಮಾನ ನಿನ್ನ್ ಮತಿಯು!ಅಷ್ಟಮಂಗಲಸಹಿತ ಅರ್ಚಿಸುವೆ ನಿನ್ನ
ಅಷ್ಟಾಂಗಸಹಿತ ಪೊಡಮಡುವೆವ್ ಚಿನ್ನ!

ಎಷ್ಟು ಹೊಗಳಿದರೂ ಕಮ್ಮಿ ನಿನ್ನನ್ನು
ಕಷ್ಟ ತಿಳಿವುದು ನಿನ್ನ ಅಂತರಂಗವನು

ಜ್ಯೋತಿಷವು ಶಾಸ್ತ್ರ; ಅದಲ್ಲ ಠಸ್ಪುಸ್
ಆದರದನಿಂದು ನುಡಿವುದು ಆಕ್ಟೊಪಸ್!


ಎಚ್. ಆನಂದರಾಮ ಶಾಸ್ತ್ರೀ

0 comments:

Post a Comment