ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
1:17 PM

ಇದು ನ್ಯಾಯವಲ್ಲ...

Posted by ekanasu

ವಿಶೇಷ ವರದಿ: ಹರೀಶ್ ಕೆ.ಆದೂರು
ಮಂಗಳೂರು:ಇಡೀ ಹಸಿರನ್ನು ನಾಶಮಾಡುವ ಹುನ್ನಾರ...ಇದಕ್ಕೆ ಸರಕಾರದ ಮುದ್ರೆ. ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬಂತೆ. ಹೌದು ಗುಂಡ್ಯ ಪರಿಸರದಲ್ಲಿ ನಿರ್ಮಾಣ ಹಂತದಲ್ಲಿರುವ ಪವರ್ ಪ್ರಾಜೆಕ್ಟ್ ಗೆ ಇದೀಗ ಸರಕಾರ ಅನುಮತಿ ನೀಡಿದೆ. ಪರಿಣಾಮ ಪರಿಸರ ನಾಶಕ್ಕೆ ಕೇಂದ್ರ ಸರಕಾರವೇ ನೇರವಾಗಿ ಹೊಣೆಯಾದಂತಾಗಿದೆ.ಗುಂಡ್ಯದ ಕೆಂಪುಹೊಳೆ ಪರಿಸರದಲ್ಲಿ `ಇಂಟರ್ ನ್ಯಾಶನಲ್ ಪವರ್ ಪ್ರಾಜೆಕ್ಟ್ ಕಂಪೆನಿಯು'ಕೆಂಪುಹೊಳೆ ಮಿನಿ ಹೈಡಲ್ ಪವರ್ ಪ್ರಾಜೆಕ್ಟ್ ಗಾಗಿ ಸ್ಥಳ ನಿಗಧಿ ಪಡಿಸಿ ಕಾಮಗಾರಿಯನ್ನು ಕಳೆದ ಐದಾರು ವರ್ಷಗಳ ಹಿಂದೆಯೇ ಆರಂಭಿಸಿದೆ. ಈ ಪ್ರದೇಶಧಲ್ಲಿ ಜಲವಿದ್ಯುತ್ ಯೋಜನೆಗಾಗಿ ಅಣೆಕಟ್ಟು ನಿರ್ಮಾಣವಾಗಿದೆ. ಇದರಿಂದಾಗಿ ಅನೇಕ ಮರಗಿಡಗಳು ಜಲಸಮಾಧಿಯಾಗಿದೆ. ಪವರ್ ಪ್ರಾಜೆಕ್ಟ್ ನಲ್ಲಿ ಉತ್ಫಾದಿಸಲ್ಪಡುವ ವಿದ್ಯುತ್ ಹಾದು ಹೋಗಲು ಬೇಕಾದ ಟವರ್ ನಿರ್ಮಾಣದಲ್ಲೂ ಅನೇಕ ಮರಗಿಡಗಳು ಧಾರಾಶಾಹಿಯಾಗಿದೆ. ಒಟ್ಟಿನಲ್ಲಿ ಸ್ವಚ್ಛಂದವಾಗಿದ್ದ ಘಾಟಿ ಪ್ರದೇಶದಲ್ಲಿ ಇದೀಗ ಜಲವಿದ್ಯುತ್ ಯೋಜನೆಯ ನೆಪವೊಡ್ಡಿ ಬೃಹತ್ `ದಂಧೆ' ಪ್ರಾರಂಭಗೊಂಡಿದೆ.

ಹೀಗೇಕೆ?
ಗುಂಡ್ಯ ಮಾರ್ಗವಾಗಿ ಬೆಂಗಳೂರಿಗೆ ಸಾಗುವ ಘಾಟಿ ರಸ್ತೆಯಲ್ಲಿ ಸಂಚರಿಸುವುದೇ ಒಂದು ಸಡಗರ. ಈ ರಸ್ತೆಯ ಅಂಚಿನಲ್ಲೇ ಕೆಳ ಭಾಗದಲ್ಲಿ `ಕೆಂಪುಹೊಳೆ ಹೈಡಲ್ ಪವರ್ ಪ್ರಾಜೆಕ್ಟ್' ಸಂಸ್ಥೆಯು ಪವರ್ ಪ್ರಾಜೆಕ್ಟ್ ಗಾಗಿ ಅನೇಕ ಪ್ರದೇಶವನ್ನು ನೆಲಸಮಗೊಳಿಸಿ ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟಿದೆ.
ಜೊತೆಗೆ ನೂರಾರು ಕಾರ್ಮಿಕರನ್ನಿಟ್ಟುಕೊಂಡು ದಿನನಿತ್ಯ ವಿದ್ಯುತ್ ಯೋಜನೆ ನಿರ್ಮಾಣಕ್ಕಾಗಿ ನಿರಂತರ ಕಾಮಗಾರಿ ನಡೆಸುತ್ತಿದೆ. ಈ ಪ್ರದೇಶವಲ್ಲದೆ ಸನಿಹದಲ್ಲೇ ಇನ್ನೂ ಹಲವಾರು ಜಲವಿದ್ಯುತ್ ಯೋಜನೆ ರೂಪಿಸಲು `ಸ್ಕೆಚ್' ಹಾಕಿದೆ.
ಈ ಪ್ರದೇಶ ಇಳಿಜಾರಾಗಿರುವುದರಿಂದ ನೀರು ಕೆಳಮುಖವಾಗಿ ರಭಸವಾಗಿ ಹರಿದು ಹೋಗುವುದರಿಂದ ಇಲ್ಲಿ ಜಲವಿದ್ಯುತ್ ಯೋಜನೆ ನಿರ್ಮಿಸಿದ್ದೇ ಆದಲ್ಲಿ ಮಳೆಗಾಲವೂ ಸೇರಿದಂತೆ ಇತರ ದಿನಗಳಲ್ಲೂ ವಿದ್ಯುತ್ ಘಟಕವನ್ನು ಚಾಲನೆಯಲ್ಲಿರಿಸಲು ಸಾಧ್ಯವಿದೆ ಎಂಬ `ಕುಹಕ'ಯೋಜನೆಯನ್ನು ಕಂಪೆನಿಯವರು ರೂಪಿಸಿದ್ದಾರೆ. ಇದರಿಂದಾಗಿ ದಟ್ಟ ಕಾನನದಲ್ಲಿ ವಿದ್ಯುತ್ ಘಟಕದ ಬೃಹತ್ ಯಂತ್ರಗಳ ಸದ್ದು ಕೇಳಿಬರುವಂತಾಗಿದೆ.ಹೊಂಗಡಹಳ್ಳ ಡ್ಯಾಂ ಇಲ್ಲ
ಕೆಂಪುಹೊಳೆ ಹೈಡಲ್ ಪವರ್ ಪ್ರಾಜೆಕ್ಟ್ ನಿರ್ಮಾಣಕ್ಕೆ ಪ್ರಸ್ತಾವನೆ ಹೊರಬೀಳುತ್ತಿದ್ದಂತೆಯೇ ಅನೇಕ ಪರಿಸರ ಹೋರಾಟಗಾರರು ಈ ಬಗ್ಗೆ ಪ್ರತಿಭಟನೆ ನಡೆಸಿದ್ದಾರೆ. ಸುಂದರ ಅರಣ್ಯ ಪ್ರದೇಶ, ಪ್ರಾಕೃತಿಕ ಸೌಂದರ್ಯವುಳ್ಳ ತಾಣವನ್ನು ವಿದ್ಯುತ್ ಉತ್ಪಾದನಾ ಘಟಕದಿಂದ ಹೊರಗುಳಿಯುವಂತೆ ಮಾಡಲು ಸರಕಾರದ ಮೊರೆಹೊಕ್ಕದ್ದೂ ಆಗಿದೆ. ಆದರೆ ಕಂಪೆನಿ ಇದ್ಯಾವುದಕ್ಕೂ ಬಗ್ಗಲೇ ಇಲ್ಲ. ನಿರಂತರ ಕಾಮಗಾರಿ ನಡೆಸುತ್ತಾ ಹೋಗಿದೆ.ಆದರೆ ಸರಕಾರ ಮಾತ್ರ ಜನತೆಯೊತ್ತಡಕ್ಕೆ ಮಣಿದು ಅನುಮತಿ ನೀಡಲು ಮೀನ ಮೇಷ ಎಣಿಸಿತ್ತು. ಹೊಂಗಡಹಳ್ಳ ಡ್ಯಾಂ ನಿರ್ಮಾಣದಿಂದ ಬೃಹತ್ ಪ್ರಮಾಣದ ಭೂ ಪ್ರದೇಶ ಮುಳುಗಡೆ ಆಗುವ ಭೀತಿಯಿತ್ತು. ಇದಕ್ಕೆ ರಾಜ್ಯಸರಕಾರ ಸಮ್ಮತಿಸೂಚಿಸಲಿಲ್ಲ. ಆದರೆ ಗುಂಡ್ಯ ಜಲವಿದ್ಯುತ್ ಯೋಜನೆಗೆ ಮಾತ್ರ ಅನುಮತಿ ದೊರೆತಂತಾಗಿದೆ.

ಮಳೆಗಾಲದಲ್ಲಿ ವಿದ್ಯುತ್
ಪ್ರಸ್ತಾವನೆಯಲ್ಲಿರುವ ಪ್ರಕಾರ ಈ ಪ್ರದೇಶದಲ್ಲಿ 200 ಮೆ.ವ್ಯಾ. ವಿದ್ಯುತ್ ಉತ್ಫಾದನೆಗೊಳ್ಳಲಿದೆ. 800ಕೋ.ರೂ.ವೆಚ್ಚದಲ್ಲಿ ಈ ಘಟಕ ನಿರ್ಮಾಣಗೊಳ್ಳಲಿದೆ. ಮಳೆಗಾಲದಲ್ಲಿ ಮಾತ್ರ ಘಟಕ ಕಾರ್ಯಾಚರಣೆ ಗೈಯಲಿದೆ.ಆದರೆ ಇದೀಗ ಈ ಯೋಜನೆ ಅನುಷ್ಠಾನಗೊಳ್ಳುತ್ತಿದ್ದಂತೆಯೇ ಹೊಂಗಡಹಳ್ಳ ಡ್ಯಾಂ ನಿರ್ಮಾಣಕ್ಕೆ ಅನುಮತಿ ದೊರೆತರೂ ಅಚ್ಚರಿಪಡುವಂತಿಲ್ಲ.ಹೂಳು
ಗುಂಡ್ಯ ಸಮೀಪದ ಕೆಂಪುಹೊಳೆಗೆ ಅಣೆಕಟ್ಟು ಕಟ್ಟಿ ನೀರು ಸಂಗ್ರಹಿಸಿ ಜಲವಿದ್ಯುತ್ ಯೋಜನೆ ನಡೆಸಲು ಮುಂದಾಗಿರುವ ಇಂಟರ್ ನ್ಯಾಷನಲ್ ಪವರ್ ಕಾರ್ಪೋರೇಷನ್ ಲಿ. ಸಂಸ್ಥೆಯು ಕಳೆದ ಬೇಸಿಗೆಯಲ್ಲಿ ಈ ಅಣೆಕಟ್ಟಿನಲ್ಲಿ ಅಪಾರ ಪ್ರಮಾಣದಲ್ಲಿ ನೀರು ಸಂಗ್ರಹಿಸಿಟ್ಟಿದೆ. ಮಾತ್ರವಲ್ಲದೆ ಕಾಮಗಾರಿ ನಿರ್ಮಾಣದಿಂದಾಗಿ ಪರಿಸರ ಸಂಪೂರ್ಣ ನಾಶವಾಗಿದೆ. ಕೆಳಭಾಗದಲ್ಲಿ ಅಪಾರ ಪ್ರಮಾಣದಲ್ಲಿ ನದಿಯಲ್ಲಿ ಹೂಳು ತುಂಬಿಹೋಗಿದೆ.
ಇದ್ಯಾವುದನ್ನೂ ಸರಕಾರವಾಗಲೀ, ಪರಿಸರ ಸಂಬಂಧೀ ಇಲಾಖೆಗಳಾಗಲೀ ಚಿಂತಿಸುತ್ತಿಲ್ಲ ಎಂಬುದು ಬೇಸರ ತರುವ ಸಂಗತಿಯಾಗಿದೆ.

0 comments:

Post a Comment