ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ

ಚಿಕ್ಕಮಗಳೂರು : ಮಾಡಬಾರದ್ದು ಮಾಡಿದರೆ ಆಗಬಾರದ್ದು ಆಗುತ್ತೆ. ಇದ್ದಕ್ಕೆ ಬೀರೂರು ರೈಲ್ವೆ ಲೆವೆಲ್ ಕ್ರಾಸ್ ಸಾಕ್ಷಿ. ಘಟನೆ ನೆಡೆದಾಗಿ ಒಂದಿಷ್ಟು ಕಣ್ಣೀರು ಸುರಿಸಿ, ನಂತರ ಸುಮ್ಮನಾಗೋದು ಇಲ್ಲಿ ಮಾಮೂಲು ಸಂಗತಿ.
ಬೀರೂರು ರೈಲ್ವೆ ಕ್ರಾಸ್ ಸಮಸ್ಯೆ ಇಂದು ನಿನ್ನೆಯದಲ್ಲ. ರೈಲು ಹಳಿ ಕಾಮಗಾರಿ ಜೊತೆಗೆ ಸಮಸ್ಯೆಯೂ ಹುಟ್ಟಿಕೊಂಡಿದೆ. ಜನ, ಜಾನುವಾರುಗಳು ಪ್ರಾಣ ಕಳೆದುಕೊಂಡಿವೆ. ಲೆವೆಲ್ ಕ್ರಾಸ್ ಮಾಡೋ ಬರದಲ್ಲಿ ವಾಹನಗಳು ರೈಲ್ವೆ ಹಳಿಯಲ್ಲಿ ಸಿಕ್ಕಿಕೊಂಡು ಅನಾಹುತ ಸೃಷ್ಟಿಯಾಗುತ್ತಿವೆ. ಆಡು ,ಕುರಿ, ಮೇಕೆ ಜೀವಕ್ಕೆ ಇಲ್ಲಿ ಬೆಲೆಯಿಲ್ಲ.

ಅಪಾಯಕ್ಕೆ ಆಹ್ವಾನ

ಬೀರೂರು ರೈಲ್ವೆ ನಿಲ್ದಾಣದ ಮೊದಲನೇ ಗೇಟ್ ಬಳಿಯ ರೈಲ್ವೆ ಹಳಿ ಸದಾ ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಇದಕ್ಕೆ ಶುಕ್ರವಾರ ಬೃಹತ್ ಟ್ರಾಲಿ ಸಿಕ್ಕಿ ಕೊಂಡಿದ್ದು ಪ್ರತ್ಯಕ್ಷ ಸಾಕ್ಷಿ. ಲೆವೆಲ್ ಕ್ರಾಸ್ ಮುಖಾಂತರ ಹಾದು ಹೋಗುವ ರೈಲ್ವೆ ಹಳಿ ಸಾಕಷ್ಟು ಎತ್ತರವಾಗಿರುವುದರಿಂದ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಹಾದು ಹೋಗುವ ವಾಹನಗಳು ರೈಲ್ವೆ ಹಳಿಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಿವೆ. ಇದರಿಂದಾಗಿ ಪ್ರಯಾಣಿಕರು ಭಯದಿಂದಲೇ ರೈಲ್ವೆ ಹಳಿಯಲ್ಲಿ ಸಾಗಬೇಕಾದ ಪರಿಸ್ಥಿತಿ ಇದೆ.

ರಸ್ತೆ ಹೇಗಿದೆ ಎಂದರೆ ಎತ್ತಿನ ಗಾಡಿ ಕೂಡಾ ಸರಾಗವಾಗಿ ಸಂಚರಿಸಲು ನಾಲಾಯ್ಕ್ ಆಗಿದೆ. ಹಳ್ಳ, ದಿಣ್ಣೆಗಳಿಂದ ರಸ್ತೆ ಸಂಪೂರ್ಣ ಕುಲಗೆಟ್ಟು ಹೋಗಿದೆ. ರಸ್ತೆಯಲ್ಲಿ ಹೊಂಡವಿದೆಯೋ, ಹೊಂಡದಲ್ಲಿ ರಸ್ತೆಯಿದೆಯೋ ಎನ್ನುವಷ್ಟು ಕನ್ಫ್ಯೂಸ್ ಹುಟ್ಟುಹಾಕಿತ್ತದೆ. ರಸ್ತೆ ಓಬಿರಾಯನಕಾಲದ ರಸ್ತೆಯ ಜ್ಞಾಪಕಕ್ಕೆ ತರೋ ದಂತೂ ಸುಳ್ಳಲ್ಲ. ಇದು ರಾಷ್ಟ್ರೀಯ ಹೆದ್ದಾರಿ 206ರ ಕರ್ಮಖಾಂಡ.

ಪ್ರಮುಖ ನಗರ ಬೆಸೆಯುತ್ತದೆ

ಹೊನ್ನಾವರ, ಚಿಕ್ಕಮಗಳೂರು, ಶಿವಮೊಗ್ಗ, ತರೀಕರೆ, ಭದ್ರಾವತಿ ಮುಂತಾದ ಭಾಗಗಳಿಗ ಸಾಗುವ ಪ್ರಯಾಣಿಕರು ರಾಷ್ಟ್ರೀಯ ಹೆದ್ದಾರಿ 206ರ ಅವಲಂಬಿತರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ನೂರಾರು ವಾಹನಗಳು ಸಂಚರಿಸುತ್ತಿವೆ. ಸಂಪೂರ್ಣ ಹದಗೆಟ್ಟಿರುವ ಹೆದ್ದಾರಿಯಲ್ಲಿ ಸರ್ಕಸ್ ಮಾಡಿ ವಾಹನ ಚಲಾಯಿಸುವ ಚಾಲಕರಿಗೆ ಮತ್ತು ಪ್ರಯಾಣಿಕರಿಗೆ ಬಿರೂರಿನ ರೈಲ್ವೆ ಮೊದಲ ಗೇಟ್ ಭೂತವಾಗಿ ಕಾಡುತ್ತದೆ. ಲೆವೆಲ್ ಕ್ರಾಸ್ ಸಮೀಪ ರೈಲ್ವೆ ಹಳಿಯನ್ನು ಎತ್ತರವಾಗಿ ಜೋಡಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯ ಎರಡೂ ಕಡೆಗಳ ರಸ್ತೆ ಕುಗ್ಗಿರುವುದರಿಂದ ವಾಹನಗಳು ಹಳಿಗಳ ಮಧ್ಯದಲ್ಲಿ ಸಿಕ್ಕಿ ಬೀಳುತ್ತವೆ. ಸಣ್ಣ ಕಾರು ಸಿಕ್ಕಿಕೊಂಡರೂ ಅದನ್ನು ತೆಗೆಯಲು ಹರಸಾಹಸ ಪಡಬೇಕು.ಅಲ್ಲದೇ ರೈಲ್ವೆ ಹಳಿಯ ಈ ದುಃಸ್ಥಿತಿಯಿಂದಾಗಿ ಆಗಾಗ ಅಪಘಾತಗಳು ನಡೆಯುತ್ತಲೇ ಇರುತ್ತವೆ. ಹತ್ತಾರು ಎಮ್ಮೆ ನುರಾರು ಕುರಿಗಳು ಲೆವೆಲ್ ಕ್ರಾಸ್ ಸಮೀಪ ರೈಲಿಗೆ ಆಹಾರವಾಗಿವೆ. ಕೆಲೆ ದಿನದ ಹಿಂದೆ 20ಕ್ಕೂ ಮಿಕ್ಕ ಎಮ್ಮೆ ಮತ್ತು ಕೋಣಗಳು ಜೀವವನ್ನು ರೈಲು ಆಪೋಶನ ತೆಗೆದುಕೊಂಡಿದೆ. ನಿನ್ನೆ ಮೊನ್ನೆ ಮತ್ತೆ ನಾಲ್ಕು ಎಮ್ಮೆ ರೈಲಿಗೆ ಸಿಕ್ಕಿ ಚಿಂದಿಯಾಗಿವೆ. ಇದರೆ ಬೆನ್ನಲ್ಲೇ ಟ್ರಾಲಿ ಸಿಕ್ಕಿಕೊಂಡು ಮತ್ತೊಂದು ದುರಂತಕ್ಕೆ ಸಾಕ್ಷಿಯಾಗಿದೆ. ಅದೃಷ್ಟ ವಶಾತ್ ಜೀವ ಹಾನಿಯಾಗದಿದ್ದರೂ 10 ಸಾವಿರಕ್ಕೂ ಮಿಕ್ಕ ಪ್ರಯಣಿಕರು ತೊಂದರೆಗೆ ಸಿಕ್ಕಿ ಕೊಂಡರು 8ಕ್ಕೂ ಮಿಕ್ಕ ರೈಲುಗಳು ಸ್ಟೇಷನ್ನಲ್ಲಿ ಬಾಕಿಯಾದವು.

ವಾಹನ ಚಾಲಕರು ಹೀಗಂತಾರೆ

ಇಲ್ಲಿ ಸಂಭವಿಸುವ ಎಲ್ಲಾ ಘಟನೆಗಳಿಗೆ ರೈಲ್ವೆ ಇಲಾಖೆ ಅಧಿಕಾರಿಗಳೇ ಹೊಣೆ. ರೈಲ್ವೆ ಹಳಿ ನಿಮರ್ಾಣವಾದಂದಿನಿಂದ ಸಮಸ್ಯೆ ತಲೆ ಎತ್ತಿದೆ. ಈ ಕುರಿತು ಸ್ಥಳೀಯರು ಇಲಾಖೆಯ ಅಧಿಕಾರಿಗಳಿಗೆ ಸಾಕಷ್ಟು ಭಾರಿ ಮನವಿ ಸಲ್ಲಿಸಿದ್ದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಲೆವೆಲ್ ಕ್ರಾಸ್ ಸಮೀಪ ಹಾದು ಹೋದ ರೈಲ್ವೆ ಹಳಿಯ ಸ ಮಾನಾಂತರ ಹೆದ್ದಾರಿಯನ್ನು ಎತ್ತರಿಬೇಕು. ಇಲ್ಲದಿದ್ದಲ್ಲಿ ಫ್ಲೈ ಓವರ್ ಅಥವಾ ಅಂಡರ್ ಪಾಸ್ಗಳನ್ನು ನಿರ್ಮಿಸುವುದರ ಮೂಲಕ ಸಮಸ್ಯೆ ಪರಿಹರಿಸಬೇಕು ಎನ್ನುತ್ತಾರೆ ವಾಹನ ಚಾಲಕರು ಮತ್ತು ಸ್ಥಳೀಯರು.

ವಿಪರ್ಯಾಸ
ಬೀರೂರಿಗೆ ರೈಲು ಬಂತು ಎಂಬ ಖುಷಿ ಸ್ಥಳೀಯ ನಾಗರಿಕರಲ್ಲಿ ಹೆಚ್ಚು ಕಾಲ ಉಳಿಯಲಿಲ್ಲ. ಅದಕ್ಕೆ ಕಾರಣ ಲೆವೆಲ್ ಕ್ರಾಸ್ ರೈಲ್ವೆ ಹಳಿ ಬಳಿ ನಡೆಯುತ್ತಿರುವ ಅವಗಢಗಳೇ ಕಾರಣ. ವಾಹನ ಚಾಲಕರು, ಪಾದಾಚಾರಿಗಳು ಹಾಗೂ ಪ್ರಯಾಣಿಕರು ಪ್ರಾಣಭಯದಿಂದ ಸಂಚರಿಸುತ್ತ್ತಿದಿದ್ದಾರೆ. ಹಾಗಿದ್ದರೂ ಹೆದ್ದಾರಿ ಇಲಾಖೆ ಮತ್ತು ರೈಲ್ವೆ ಇಲಾಖೆ ಇತ್ತ ಗಮನಹರಿಸದಿರುವುದು ವಿಪರ್ಯಾಸ. ಇದೀಗ ತಲೆದೋರಿರುವ ಈ ಸಮಸ್ಯೆಯನ್ನು ಶೀಘ್ರದಲ್ಲಿ ಪರಿಹರಿಸಿ ಪ್ರಾಣಾಪಾಯವನ್ನು ತಪ್ಪಿಸಬೇಕು ಎನ್ನುವುದು ಸ್ಥಳೀಯರ ಆಗ್ರಹ. ಸತ್ತ ಮೇಲೆ ಅತ್ತರೇನು ಫಲ!

ಶ್ರೀಪತಿ ಹೆಗಡೆ ಹಕ್ಲಾಡಿ

1 comments:

harish mangalore said...

story khush aithu, swalpa spel mistakes idhe, gamanisi

Post a Comment