ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ


ಉಡುಪಿ : ಹುಷಾರ್.. ಇನ್ನು ಮುಂದೆ ಉಡುಪಿಯಲ್ಲಿ ಎರ್ರಾಬಿರ್ರಿ ವಾಹನ ನಿಲ್ಲಿಸಿದರೆ ಜೇಬಿಗೆ ಕತ್ತರಿ ಗ್ಯಾರಂಟಿ!
ವಾಹನ ದಟ್ಟಣೆ ಮತ್ತು ಬೇರೆ ಬೇರೆ ಪ್ರದೇಶದಿಂದ ಉಡುಪಿಗೆ ಬರುವ ಭಕ್ತರಿಗೆ ಅನುಕೂಲ ಕಲ್ಪಸುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾಧಿಕಾರಿ ಹೊಸ ಪಾರ್ಕಿಂಗ್ ವ್ಯವಸ್ಥೆಗೆ ಓಕೆ ಎಂದಿದ್ದಾರೆ. ಇವರೊಟ್ಟಿಗೆ ಉಡುಪಿ ನಗರಸಭೆ ಮತ್ತು ಸಾರಿಗೆ ಹಾಗೂ ಪೊಲೀಸ್ ಇಲಾಖೆ ಕೈ ಜೋಡಿಸಿದೆ. ಹಾಗಾಗಿ ಉಡುಪಿಯಲ್ಲಿ ಇನ್ನು ಮುಂದೆ ಸಂಚಾರ ಮುಕ್ತ ಮುಕ್ತ. ಅಪ್ಪಿತಪ್ಪಿ ನಿಗದಿ ಪಡಿಸದ ಸ್ಥಳದಲ್ಲಿ ವಾಹನ ನಿಲ್ಲಿಸದೆ ಎಲ್ಲೆಂದರಲ್ಲಿ ನಿಲ್ಲಿಸಿದರೆ ದಂಡ ಬೀಳೋದು ನಿಶ್ಚಿತ.

ಯಾಕಾಗಿ ಈ ಮಾರ್ಪಾಡು?

ಉಡುಪಿ ವೇಗದಲ್ಲಿ ಬೆಳೆಯುತ್ತಿರುವ ನಗರಗಳ ಪಟ್ಟಿಗೆ ಸೇರಿದೆ. ಉಡುಪಿಯ ಶ್ರೀ ಕೃಷ್ಣ ದೇವಸ್ಥಾನ ಮತ್ತು ಅಷ್ಟಮಠಗಳನ್ನು ವೀಕ್ಷಸಿಲು ದಿನಂಪ್ರತಿ ಸಹಸ್ರಾರು ಭಜಕರು ಉಡುಪಿಗೆ ಭೇಟಿ ನೀಡುತ್ತಿದ್ದಾರೆ. ಜೊತೆಗೆ ದಿನ ನಿತ್ಯ ವಾಹನ ದಟ್ಟಣೆ ಕೂಡಾ ಉಡುಪಿಯಲ್ಲಿ ಅಧಿಕವಾಗುತ್ತಿದೆ.

ನಗರದ ಎಲ್ಲಾ ರಸ್ತೆಗಳಲ್ಲಿ ವಾಹನ ಸಂಚಾರ ಇರುವೆ ಸಾಲಿನಂತೆ ಇರುತ್ತದೆ. ರಸ್ತೆ ಇಕ್ಕೆಡೆಗಳಲ್ಲಿ ವಾಹನ ಪಾರ್ಕಿಂಗ್ ಮಾಡುವುದರಿಂದ ಸುಗಮ ಸಂಚಾರಕ್ಕೆ ಕೊಕ್ಕೆ ಬೀಳುತ್ತಿದೆ. ಎಲ್ಲೆಂದರಲ್ಲಿ ವಾಹನ ನಿಲುಗಡೆಯಿಂದ ಉಡುಪಿ ಅಂದಕ್ಕೂ ಕೊಂಕು ಬಂದಿತ್ತು. ಈ ಎಲ್ಲಾ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಶುಲ್ಕ ಸಹಿತ ಮತ್ತು ರಹಿತ ಪಾರ್ಕಿಂಗ್ ವ್ಯವಸ್ಥೆಗೆ ಜಿಲ್ಲಾಡಳಿತ ಮುಂದಾಗಿದೆ.

ಉಡುಪಿ ಪಾರ್ಕಿಂಗ್ ವ್ಯವಸ್ಥೆ ದಿಡೀರ್ ಬದಲಾವಾಣೆಗೆ ಬಂದಿಲ್ಲ. ಜಿಲ್ಲಾಡಳಿತ ಉಡುಪಿ ನಗರ ಸಭೆ ಮತ್ತು ಸಾರಿಗೆ ಇಲಾಖೆ ಅಳೆದು ಸುರಿದು ವ್ಯವಸ್ಥೆಯ ಮಾರ್ಪಾಡಿಗೆ ಮನಸ್ಸು ಮಾಡಿದೆ. ವಾಹನ ನಿಲುಗಡೆ ಜೊತೆಗೆ ಕೆಲ ಮಾರ್ಗಗಳನ್ನು ಏಕಮುಖ ಸಂಚಾರವಾಗಿ ಬದಲಾಗಿವೆ.

ಶುಲ್ಕ ಸಹಿತ ಪಾರ್ಕಿಂಗ್
ಕವಿ ಮುದ್ದಣ್ಣ ಮಾರ್ಗದ ಹನುಮಾನ್ ಸರ್ಕಲ್ನಿಂದ ಡಯಾನ ಸರ್ಕಲ್ ಗುಂಟು ಲಘು ವಾಹನಗಳನ್ನು ಪಾರ್ಕಿಂಗ್ ಮಾಡಬಹುದು. ಕೆ.ಎಂ.ಮಾರ್ಗದ ಬಲಬದಿಯಿಂದ ಚರ್ಚ್ ಗೇಟಿನ ತನಕದ ಸ್ಥಳದಲ್ಲಿ ವಾಹನ ನಿಲುಗಡೆಗೆ ಅವಕಾಶವಿದೆ.

ಡಯಾನಾ ಸರ್ಕಲ್ನಿಂದ ಕಿನ್ನಿಮೂಲ್ಕಿ ಸರ್ಕಲ್, ತಾಲೂಕು ಪಂಚಾಯ್ತಿ ಕಚೇರಿಯಿಂದ ಜೋಡುಕಟ್ಟೆ ತನಕ ದ್ವಿಚಕ್ರ ವಾಹನಗಳ ನಿಲುಗಡೆಗೆ ಅವಕಾಶ. ತಾಲೂಕು ಕಚೇರಿ ಎದುರು, ಲಯನ್ಸ್ ಸರ್ಕಲ್ ಮತ್ತು ಕೋರ್ಟ್ ಅಡ್ಡ ರಸ್ತೆಯೂ ವಾಹನ ನಿಲುಗಡೆಗೆ ತೆರೆದುಕೊಳ್ಳಲಿದೆ.

ಹನುಮಾನ್ ಸರ್ಕಲ್ ನಿಂದ ಆದರ್ಶ ಆಸ್ಪತ್ರೆಗೆ ಹೋಗುವ ಅಡ್ಡರಸ್ತೆ, ಬೋರ್ಡ್ ಹೈಸ್ಕೂಲ್ ಗೇಟ್, ವಿಶ್ವೇಶ್ವರಯ್ಯ ಮಾರುಕಟ್ಟೆ ಎದುರು, ಸಿಟಿ ಬಸ್ ನಿಲ್ದಾಣದ ನಗರಸಭೆ ಖಾಲಿ ಸ್ಥಳ, ಮೀನು ಮಾರುಕಟ್ಟೆ ಸಮೀಪ ವಾಹನಗಳ ನಿಲುಗಡೆಗೆ ಅವಕಾಶ ಮಾಡಿಕೊಡಲಾಗಿದೆ. ಇಲ್ಲಿ ವಾಹನ ನಿಲ್ಲಿಸುವವರು ನಿಗದಿಪಡಿಸಿದ ಶುಲ್ಕ ತೆರಬೇಕು.

ಶುಲ್ಕ ರಹಿತ ಪಾರ್ಕಿಂಗ್

ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ಶಿರಿಬೀಡಿಗೆ ಹೋಗುವ ರಸ್ತೆ,ಡಿಡಿಪಿಐ ಕಚೇರಿ ಎದುರು, ಸ್ಟೇಟ್ ಬ್ಯಾಂಕ್ ಮುಂಭಗ, ಜುಮ್ಮಾ ಮಸೀದ ಸಂಕೀರ್ಣ, ಮಾರುತಿ ವೀಥಿಕಾ ರಸ್ತೆಯ ನೋವೆಲ್ಟಿ ಜಂಕ್ಷನ್ನಿಂದ ಸಂಸ್ಕೃತ ಕಾಲೇಜುವರೆಗೆ ಲಘು ವಾಹನಗಳನ್ನು ನಿಲ್ಲಿಸಬಹುದಾಗಿದೆ. ಚಿತ್ತರಂಜನ್ ಸರ್ಕಲ್, ಸೌಹಾರ್ದ ಕ್ರೆಡಿಟ್ ಬ್ಯಾಂಕ್ ಮುಂಬಾಗ, ಕೆ.ಎಂ.ಮಾರ್ಗದ ಸೂಪರ್ ಬಜಾರ್, ವಿಜಯಾ ಬ್ಯಾಂಕ್ ಸಮೀಪ, ಸಾಹಿ ಪ್ಯಾಲೇಸ್ ಬಳಿ ಲಘು ವಾಹನಗಳಿಗೆ ಸ್ಥಳಾವಕಾಶ ಮಾಡಿಕೊಡಲಾಗಿದೆ.

ಸಂಸ್ಕೃತ ಕಾಲೇಜು ಜಂಕ್ಷನ್, ಜೋಕಟ್ಟೆಯಿಂದ ಲಯನ್ಸ ಸರ್ಕಲ್, ಲಯನ್ಸ್ ಸರ್ಕಲ್ನಿಂದ ಡಯಾನಾ ಸರ್ಕಲ್, ಮಿತ್ರಾ ಆಸ್ಪತ್ರೆಯಿಂದ ಡಯಾನಾ ಸರ್ಕಲ್ ವರೆಗೆ ಲಘು ಮತ್ತು ದ್ವಿಚಕ್ರ ವಾಹನಗಳನ್ನು ನಿಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಸಿಂಡಿಕೇಟ್ ಟವರ್ಸ್, ಬಸ್ ನಿಲ್ದಾಣ, ಶಾರದಾ ಕಲ್ಯಾಣ ಮಂಟಪ, ಎಂಜಿಎಂ, ವಾದಿರಾಜ ರಸ್ತೆ, ವೀರ ಸಾರ್ವಕರ್ ರಸ್ತೆ, ವಾಹನ ನಿಲುಗಡೆಗೆ ತೆರೆದುಕೊಳ್ಳಲಿದೆ.

ಏಕಮುಖ ಸಂಚಾರ

ಸದಾನಂದ ಟವರ್ಸ್ ನಿಂದ ವಿಷ್ಣು ಹೂವಿನ ಅಂಗಡಿಯರೆಗೆ ಏಕ ಮುಖ ಸಂಚಾರದ ವ್ಯವಸ್ಥೆ ಮಾಡಲಾಗಿದೆ. ರಾಜ್ಯ ಹೆದ್ದಾರಿ 65ರಲ್ಲಿ ಬರುವ ವಾಹನಗಳು ಸದಾನಂದ ಟವರ್ಸ್ ಎದುರುಗಡೆಯಿಂದ ಸಿಟಿ ಬಸ್ ನಿಲ್ದಾಣದ ಪಕ್ಕದಲ್ಲಿ ಹಾದುಹೋಗಿ ಐರೋಡಿಕಾರ್ ವೃತ್ತದ ಮುಖಾಂತರ ಸವರ್ೀಸ್ ಬಸ್ ನಿಲ್ದಾಣದ ಕಡೆಗೆ ಏಕಮುಖವಾಗಿ ಚಲಿಸಬೇಕಾಗುತ್ತದೆ.

ಸ್ವಾಗತ ಗೋಪುರದಿಂದ ಜೋಡುಕಟ್ಟೆ, ಜೋಡುಕಟ್ಟೆಯಿಂದ ಲಯನ್ಸ್ ಸರ್ಕಲ್, ಲಯನ್ಸ್ ಸರ್ಕಲ್ನಿಂದ ಶಿರಿಬೀಡು ಜಂಕ್ಷನ್, ಕರಾವಳಿ ಜಂಕ್ಷನ್ ನಿಂದ ಇಂದ್ರಾಳಿ ಮತ್ತು ನಗರ ವ್ಯಾಪ್ತಿಯಲ್ಲಿ ಸಂಚರಿಸುವ ವಾಹನಗಳಿಗೆ ವೇಗಮಿತಿ ಹಾಕಲಾಗಿದೆ. ಎಗ್ಗ್ಗಿಲ್ಲದೆ ವಾಹನ ಓಡಿಸಿದರೆ ಪೊಲೀಸರಿರುತ್ತಾರೆ ಹುಷಾರ್! ಬದಲಾವಣೆ ಮತ್ತೇನು ಎಡವಟ್ಟು ಮಾಡುತ್ತದೋ ಎಂಬುದಕ್ಕೆ ಕಾಲಕೂಡಿ ಬರಬೇಕು.


ಶ್ರೀಪತಿ ಹೆಗಡೆ ಹಕ್ಲಾಡಿ

1 comments:

Anonymous said...

Namma udupi great alwa matte ...

Post a Comment